ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಭಾರತ್ ಜೋಡೋ' ಕಾರ್ಯಕ್ರಮದ ನೂತನ ಲೋಗೋ ಬಿಡುಗಡೆ ಮಾಡಿದ ಡಿಸಿಎಂ ಡಾ. ಜಿ.ಪರಮೇಶ್ವರ್

Bharat Jodo program: ‘ಭಾರತ್ ಜೋಡೋ’ ಲೋಗೋ ವಿನ್ಯಾಸಕ್ಕಾಗಿ ಸಾರ್ವಜನಿಕರಿಂದ ವಿನ್ಯಾಸಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟು 255 ಲೋಗೋ ವಿನ್ಯಾಸಗಳು ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ ಒಂದನ್ನು ಅಂತಿಮ ಮಾಡಲಾಗಿದೆ.

ಡಿಸಿಎಂ ಡಾ.ಜಿ. ಪರಮೇಶ್ವರ್‌.

ಬೆಂಗಳೂರು, ಸೆ.4: ಯುವಜನರನ್ನು ಒಗ್ಗೂಡಿಸಿ, ಏಕತೆ, ಸಾಮಾಜಿಕ ಸಾಮರಸ್ಯ, ಜವಾಬ್ದಾರಿಯುತ ನಾಗರಿಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿರುವ ಮಹತ್ವಾಕಾಂಕ್ಷಿ ಕಾರ್ಯಕ್ರಮವೇ ‘ಭಾರತ್ ಜೋಡೋ’.

ಈ ಮಹತ್ವದ ಕಾರ್ಯಕ್ರಮಕ್ಕೆ ವಿಶಿಷ್ಟ ಗುರುತನ್ನು ರೂಪಿಸುವ ನಿಟ್ಟಿನಲ್ಲಿ ‘ಭಾರತ್ ಜೋಡೋ’ ಲೋಗೋ ವಿನ್ಯಾಸಕ್ಕಾಗಿ ಸಾರ್ವಜನಿಕರಿಂದ ವಿನ್ಯಾಸಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟು 255 ಲೋಗೋ ವಿನ್ಯಾಸಗಳು ಸಲ್ಲಿಕೆಯಾಗಿದ್ದವು.

ಲೋಗೋ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕ, ನ್ಯಾಯಸಮ್ಮತ ಹಾಗೂ ವೃತ್ತಿಪರವಾಗಿ ನಡೆಸುವ ಉದ್ದೇಶದಿಂದ ಸಲ್ಲಿಕೆಯಾಗಿದ್ದ ವಿನ್ಯಾಸಗಳನ್ನು ಪರಿಶೀಲಿಸಿ, ಅಂತಿಮವಾಗಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ಚಿತ್ರಕಲಾ ಪರಿಷತ್‌ಗೆ ವಹಿಸಲಾಗಿತ್ತು.

ಚಿತ್ರಕಲಾ ಪರಿಷತ್ ವತಿಯಿಂದ ಸಲ್ಲಿಕೆಯಾಗಿದ್ದ ವಿನ್ಯಾಸಗಳನ್ನು ಸಮಗ್ರವಾಗಿ ಪರಿಶೀಲಿಸಿ ಹಾಗೂ ಮೌಲ್ಯಮಾಪನ ನಡೆಸಿದ ಬಳಿಕ ಎರಡು ಲೋಗೋಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿತ್ತು. ಈ ಎರಡೂ ವಿನ್ಯಾಸಗಳನ್ನು ಅಂತಿಮ ಅನುಮೋದನೆಗಾಗಿ ಉಪಮುಖ್ಯಮಂತ್ರಿ ಶ್ರೀ ಪರಮೇಶ್ವರ್ ಅವರ ಮುಂದೆ ಮಂಡಿಸಲಾಗಿತ್ತು.

ಎರಡೂ ಅಂತಿಮ ವಿನ್ಯಾಸಗಳಲ್ಲಿನ ಪ್ರಮುಖ ಅಂಶಗಳು ಹಾಗೂ ಪರಿಕಲ್ಪನೆಗಳನ್ನು ಸೃಜನಾತ್ಮಕವಾಗಿ ಸಂಯೋಜಿಸಿ, ‘ಭಾರತ್ ಜೋಡೋ’ ಕಾರ್ಯಕ್ರಮಕ್ಕೆ ವಿಶಿಷ್ಟ ಹಾಗೂ ಅರ್ಥಪೂರ್ಣ ದೃಶ್ಯ ಗುರುತನ್ನು ನೀಡುವ ಅಂತಿಮ ಲೋಗೋವನ್ನು ರೂಪಿಸಲಾಗಿದೆ.

ನೂತನ‌ ಲೋಗೋ ಬಿಡುಗಡೆ:

ಈ ನೂತನ ‘ಭಾರತ್ ಜೋಡೋ’ ಲೋಗೋವನ್ನು ಉಪಮುಖ್ಯಮಂತ್ರಿ ಗಳು ಹಾಗೂ ಕ್ರೀಡಾ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಇಂದು ಅಧಿಕೃತವಾಗಿ ಅನಾವರಣಗೊಳಿಸಿದರು. ಲೋಗೋ ಅನಾವರಣವು ರಾಜ್ಯಾದ್ಯಂತ ‘ಭಾರತ್ ಜೋಡೋ’ ಕಾರ್ಯಕ್ರಮದ ಅನುಷ್ಠಾನದ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

India's GDP growth: ಭಾರತಕ್ಕೆ ಬೇಕಿರುವುದು ಜಿಡಿಪಿ ಅಂಕಿ-ಅಂಶವಲ್ಲ, ಪ್ರತಿಯೊಬ್ಬರಿಗೂ ತಲುಪುವ ಬೆಳವಣಿಗೆ: ಡಿಸಿಎಂ ಡಾ. ಜಿ. ಪರಮೇಶ್ವರ್‌

ಹೊಸ ಲೋಗೋವು ಏಕತೆ, ಒಗ್ಗಟ್ಟು, ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಕರ್ನಾಟಕದ ಜನತೆಯ ಸಾಮೂಹಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ‘ಭಾರತ್ ಜೋಡೋ’ ಕಾರ್ಯಕ್ರಮದ ಮೂಲ ಆಶಯ ಹಾಗೂ ದೂರದೃಷ್ಟಿಯನ್ನು ಪ್ರತಿನಿಧಿಸುವ ರೀತಿಯಲ್ಲಿ ಲೋಗೋವನ್ನು ವಿನ್ಯಾಸಗೊಳಿಸಲಾಗಿದೆ.