ಬೆಂಗಳೂರು: ಗುರುವಾರ ವಿಧಾನಮಂಡಲ ಜಂಟಿ ಅಧಿವೇಶನ (joint session) ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Thawar chand gehlot) ಅವರು ನಿರಾಕರಿಸಿದ್ದ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಕಾನೂನು ಸಚಿವ ಎಚ್.ಕೆ. ಪಾಟೀಲ್ (H.K. Patil) ನೇತೃತ್ವದ ಉನ್ನತ ಮಟ್ಟದ ನಿಯೋಗವು ರಾಜ್ಯಪಾಲರ ಜತೆ ಚರ್ಚಿಸಿ, ಮನವರಿಕೆ ಮಾಡಲು ಲೋಕಭವನಕ್ಕೆ ಬುಧವಾರ ತೆರಳಿತ್ತು. ಈ ವೇಳೆ ಭಾಷಣದಲ್ಲಿ ಕೆಲ ಅಂಶಗಳನ್ನು ತಿದ್ದುಪಡಿ ಮಾಡುವುದಾಗಿ ರಾಜ್ಯಪಾಲರಿಗೆ ನಿಯೋಗ ತಿಳಿಸಿದೆ.
ಈ ಬಗ್ಗೆ ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಎಚ್.ಕೆ. ಪಾಟೀಲ್ ಅವರು, ನಾಳೆಯ ರಾಜ್ಯಪಾಲರ ವಿಧಾನಮಂಡಲದ ಜಂಟಿ ಅಧಿವೇಶನದ ಭಾಷಣದಲ್ಲಿನ 11 ಪ್ಯಾರಾದಲ್ಲಿ 7 ಅಂಶಗಳನ್ನು ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ. 11 ಪ್ಯಾರಾಗಳನ್ನು ಸಂಪೂರ್ಣವಾಗಿ ಕೈಬಿಡದೇ ಇರಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 11 ಪ್ಯಾರಾ ಕೈಬಿಡಲು ಹೇಳಿದ್ದರು. ಶಬ್ದಗಳ ತಿದ್ದುಪಡಿ ಅಷ್ಟೇ ಬದಲಾವಣೆ ಮಾಡುತ್ತೇವೆ. ಆದರೇ ಎಲ್ಲವನ್ನೂ ಬದಲಾವಣೆ ಮಾಡಲು ಸಾಧ್ಯವಿಲ್ಲ.
Davos 2026: ಭಾರತದಲ್ಲಿ ಹೂಡಿಕೆಗೆ ವಿವಿಧ ರಾಷ್ಟ್ರ ನಾಯಕರ ಜತೆ ಜೋಶಿ ಮಹತ್ವದ ಚರ್ಚೆ
ಬಡವರ ಪರವಾಗಿ ಇರುವ ಭಾಷಣ ಅದು. ಅದನ್ನು ರಾಜ್ಯಪಾಲರು ಓದಬೇಕು ಅಂತ ಕೇಳಿಕೊಳ್ಳುತ್ತೇವೆ. ರಾಜ್ಯದ ಹಿತ ಕಾಪಾಡುವ ಅಂಶವನ್ನು ನಾವು ಬಿಡುವ ಪ್ರಶ್ನೆಯೇ ಇಲ್ಲ. ಸಿಎಂ ಸಿದ್ಧರಾಮಯ್ಯ ಜತೆ ಮಾತುಕತೆ ಮಾಡಿದ್ದೇವೆ. ಕ್ಯಾಬಿನೆಟ್ ನಿರ್ಧಾರದಂತೆ ಆ ಭಾಷಣವನ್ನೇ ರಾಜ್ಯಪಾಲರು ಓದಬೇಕು. 11 ಪ್ಯಾರಾದಲ್ಲಿನ 7 ಅಂಶಗಳನ್ನು ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.