ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drugs seize: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 52.87 ಕೋಟಿ ರು. ಮೌಲ್ಯದ ಡ್ರಗ್ಸ್ ಪತ್ತೆ, ನಾಲ್ವರ ಸೆರೆ

Drugs seize in kempegowda airport: ವಿದೇಶದಿಂದ ಬರುವ ವೇಳೆ ಬ್ಯಾಗ್‌ಗಳಲ್ಲಿ ಹೈಡ್ರೋ ಗಾಂಜಾವನ್ನು ಅಡಗಿಸಿ ತಂದಿದ್ದರು. ಮೇಲ್ನೋಟಕ್ಕೆ ಸಾಮಾನ್ಯ ಬ್ಯಾಗ್‌ನಂತೆ ಕಾಣುತ್ತಿತ್ತು. ಆದರೆ ಪರಿಶೀಲಿಸಿದಾಗ ಗಾಂಜಾ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥೈಲ್ಯಾಂಡ್ ಸೇರಿ ಕೆಲ ದೇಶಗಳಲ್ಲಿ ಹೈಡ್ರೋ ಗಾಂಜಾವನ್ನು ಡ್ರಗ್ಸ್ ಮಾಫಿಯಾ ಸದಸ್ಯರು ತಯಾರಿಸುತ್ತಾರೆ. ಆನ್‌ಲೈನ್ ಮೂಲಕವೇ ಆ ಗಾಂಜಾವನ್ನು ತರಿಸಿಕೊಳ್ಳುತ್ತಾರೆ. ಇದರ ಬೆಲೆ1 ಕೆಜಿ 1 ಕೋಟಿ ರು. ಇದೆ.

ಬೆಂಗಳೂರು : ಬೆಂಗಳೂರಲ್ಲಿ ಡ್ರಗ್ಸ್ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ (Drugs seize) ಕಸ್ಟಮ್ಸ್ (Customs) ಅಧಿಕಾರಿಗಳು, ವಿದೇಶದಿಂದ ರಾಜ್ಯಕ್ಕೆ ಕಳ್ಳ ಮಾರ್ಗದಲ್ಲಿ ಹರಿದು ಬರುತ್ತಿದ್ದ 52.87 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda airport) ಜಪ್ತಿ ಮಾಡಿದ್ದಾರೆ. ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಅ.29 ರಿಂದ ನ.5 ವರೆಗೆ ಪ್ರತ್ಯೇಕವಾಗಿ ಈ ಕಾರ್ಯಾಚರಣೆ ನಡೆದಿದ್ದು, ಬ್ಯಾಂಕಾಕ್‌ನಿಂದ ಬಂದಿಳಿದ ನಾಲ್ವರು ಪ್ರಯಾಣಿಕರು ಕಸ್ಟಮ್ಸ್ ಬಲೆಗೆ ಬಿದ್ದಿದ್ದಾರೆ.

ಈ ಪೆಡ್ಲರ್‌ಗಳಿಂದ 52.87 ಕೋಟಿ ರು. ಮೌಲ್ಯದ 52 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕಾಕ್‌ನಿಂದ ಹೈಡ್ರೋ ಗಾಂಜಾ ಸಾಗಾಣಿಕೆ ಬಗ್ಗೆ ಸಿಕ್ಕ ಮಾಹಿತಿ ಆಧರಿಸಿ ಬ್ಯಾಂಕಾಕ್‌ನಿಂದ ಕೆಐಎಗೆ ಆಗಮಿಸಿಸುವ ವಿಮಾನಗಳ ಮೇಲೆ ಕಣ್ಣಿಡಲಾಯಿತು. ಅ.29 ರಂದು ಓರ್ವ ಪ್ರಯಾಣಿಕ ಸಿಕ್ಕಿಬಿದ್ದರು. ಈತನ ಬಳಿ 37.88 ಕೋಟಿ ಮೌಲ್ಯದ 37 ಕೆಜಿ ಗಾಂಜಾ ಪತ್ತೆಯಾಗಿದೆ.

ಮರುದಿನ ಮತ್ತಿಬ್ಬರು ಬ್ಯಾಂಕಾಕ್‌ನಿಂದ ಬಂದವರ ಬಳಿ 8.49 ಕೋಟಿ ಮೌಲ್ಯದ 8.49ಗಾಂಜಾ ಸಿಕ್ಕಿತು. ಅದೇ ದೇಶದಿಂದ ನ.1 ರಂದು ಬಂದಿಳಿದ ಪೆಡ್ಲರ್ ಬಳಿ 3.18 ಕೋಟಿ ಬೆಲೆ, ನ.5 ರಂದು ಬಂದ ಪೆಡ್ಲರ್ ಹತ್ತಿರ 3.32 ಕೋಟಿಯ ಗಾಂಜಾ ಸಿಕ್ಕಿದೆ. ವಿದೇಶದಿಂದ ಬರುವ ವೇಳೆ ಬ್ಯಾಗ್‌ಗಳಲ್ಲಿ ಹೈಡ್ರೋ ಗಾಂಜಾವನ್ನು ಅಡಗಿಸಿ ತಂದಿದ್ದರು. ಮೇಲ್ನೋಟಕ್ಕೆ ಸಾಮಾನ್ಯ ಬ್ಯಾಗ್‌ನಂತೆ ಕಾಣುತ್ತಿತ್ತು. ಆದರೆ ಪರಿಶೀಲಿಸಿದಾಗ ಗಾಂಜಾ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥೈಲ್ಯಾಂಡ್ ಸೇರಿ ಕೆಲ ದೇಶಗಳಲ್ಲಿ ಹೈಡ್ರೋ ಗಾಂಜಾವನ್ನು ಡ್ರಗ್ಸ್ ಮಾಫಿಯಾ ಸದಸ್ಯರು ತಯಾರಿಸುತ್ತಾರೆ. ಆನ್‌ಲೈನ್ ಮೂಲಕವೇ ಆ ಗಾಂಜಾವನ್ನು ತರಿಸಿಕೊಳ್ಳುತ್ತಾರೆ. ಇದರ ಬೆಲೆ1 ಕೆಜಿ 1 ಕೋಟಿ ರು. ಇದೆ.

ಇದನ್ನೂ ಓದಿ: Drug Smuggling: ಫುಡ್‌ ಟಿನ್‌ಗಳಲ್ಲಿ ಮಾದಕ ವಸ್ತು ಸಾಗಣೆ; ಬೆಂಗಳೂರಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ!

ವಾಕಿಂಗ್‌ ಮಾಡುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ

ಆಘಾತಕಾರಿ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ. ಮಹಿಳೆಯೊಬ್ಬರು ತನ್ನ ನಾಯಿಯೊಂದಿಗೆ ವಾಕಿಂಗ್‌ಗೆ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ (Physical Harassment) ನೀಡಿದ ಇಂದಿರಾನಗರದಲ್ಲಿ ಈ ಘಟನೆ ನಡೆದಿದೆ. 33 ವರ್ಷದ ಮಹಿಳೆ ತನ್ನ ನಾಯಿಯೊಂದಿಗೆ ದಿನನಿತ್ಯದ ಬೆಳಗಿನ ವಾಕಿಂಗ್‌ ಮಾಡುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ ಎನ್ನಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಹಿಂದಿನಿಂದ ಆಕೆಯ ಬಳಿಗೆ ಬಂದು "ಮೇಡಂ" ಎಂದು ಕರೆದಿದ್ದಾನೆ. ಆಕೆ ತಿರುಗಿ ನೋಡಿದಾಗ, ಆ ವ್ಯಕ್ತಿ ಆಕೆಯ ಎದುರು ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿ ಏಕಾಏಕಿ ಈ ಹುಚ್ಚಾಟ ಮೆರೆದಿರುವುದರಿಂದ ಆಘಾತಗೊಂಡ ಸಂತ್ರಸ್ತ ಮಹಿಳೆ ಮನೆಗೆ ಓಡಿದ್ದಾರೆ. ನಂತರ ನಡೆದ ವಿಚಾರವನ್ನು ತನ್ನ ಸಹೋದರಿ ಮತ್ತು ಸ್ನೇಹಿತನಿಗೆ ತಿಳಿಸಿದ್ದಾಳೆ. ಇದರ ನಂತರ, ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇಂದಿರಾನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 75 ರ ಅಡಿಯಲ್ಲಿ ಸಾರ್ವಜನಿಕ ಅಸಭ್ಯತೆ ಮತ್ತು ಲೈಂಗಿಕ ಕಿರುಕುಳಕ್ಕಾಗಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಗುರುತಿಸಲು ಮತ್ತು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಹರೀಶ್‌ ಕೇರ

View all posts by this author