ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಾಹನ ಸವಾರರ ಗಮನಕ್ಕೆ: ಈದ್ ಮಿಲಾದ್ ಆಚರಣೆ ಪ್ರಯುಕ್ತ ನಾಳೆ ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ; ಪರ್ಯಾಯ ಮಾರ್ಗದ ವಿವರ ಇಲ್ಲಿದೆ

Eid-e-Milad Celebrations: ದೇಶಾದ್ಯಂತ ಬುಧವಾರ (ಅಗಸ್ಟ್‌ 26) ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಆಚರಿಸಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಭಾಗಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಟ್ರಾಫಿಕ್‌ ಪೊಲೀಸರು ಸೂಚಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 25: ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶಾದ್ಯಂತ ಬುಧವಾರ (ಅಗಸ್ಟ್‌ 26) ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಆಚರಿಸಲಿದ್ದಾರೆ (Eid-e-Milad Celebrations). ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೆರವಣಿಗೆ ಆಯೋಜಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಮೆರವಣಿಗೆ ಸಾಗಲಿದ್ದು, ಇದರಿಂದ ಹಲವು ಭಾಗಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಟ್ರಾಫಿಕ್‌ ಪೊಲೀಸರು ಸೂಚಿಸಿದ್ದಾರೆ.

ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಆಗಸ್ಟ್‌ 26ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನೃಪತುಂಗ ರಸ್ತೆಯಲ್ಲಿನ ವೈ.ಎಂ.ಸಿ.ಎ. ಮೈದಾನಕ್ಕೆ ಜನರು ಅಲಂಕೃತ ವಾಹನಗಳಲ್ಲಿ ಹಾಗೂ ಮೆರವಣಿಗೆ ಮೂಲಕ ಆಗಮಿಸಲಿದ್ದು, ಜೆ.ಸಿ ರಸ್ತೆ, ಆರ್.ಆರ್.ಎಂ.ಆರ್. ರಸ್ತೆ, ಕಸ್ತೂರಿ ಬಾ ರಸ್ತೆ, ದೇವಾಂಗ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಕೆ.ಜಿ. ರಸ್ತೆ, ಆರ್.ಟಿ. ನಗರ ಮುಖ್ಯ ರಸ್ತೆ, ಚಾಮುಂಡಿನಗರ ಮುಖ್ಯರಸ್ತೆ, ದಿನ್ನೂರು ಮುಖ್ಯ ರಸ್ತೆ, ದೇವೆಗೌಡ ರಸ್ತೆ, ಜಯಮಹಲ್ ರಸ್ತೆ, ದಿನ್ನೂರು ಮುಖ್ಯ ರಸ್ತೆ, ಚರ್ಚ್ ರಸ್ತೆ, ನಾಗವಾರ ಮುಖ್ಯರಸ್ತೆ, ಟ್ಯಾನರಿ ಮುಖ್ಯರಸ್ತೆ, ಮತ್ತು ಹೇನ್ಸ್ ರಸ್ತೆ ಮಿಲ್ಲರ್ಸ್ ಮುಖ್ಯರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.

ಬೆಂಗಳೂರು ಸಂಚಾರಿ ಪೊಲೀಸರ ಎಕ್ಸ್‌ ಪೋಸ್ಟ್‌:



ಮೈಸೂರು ರಸ್ತೆ ಕಡೆಯಿಂದ ಮೆಜೆಸ್ಟಿಕ್‌ಗೆ ಹೋಗುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್-ನಾಗರಭಾವಿ ಸರ್ಕಲ್- ಮದ್ದೂರಮ್ಮ ದೇವಸ್ಥಾನ- ಚಂದ್ರಲೇಔಟ್ ಜಂಕ್ಷನ್-ಆರ್.ಪಿ.ಸಿ. ಲೇಔಟ್ ಜಂಕ್ಷನ್-ವೆಸ್ಟ್ ಆಫ್ ಕಾರ್ಡ್‌ ರಸ್ತೆ-ವಿಜಯನಗರ ಮೆಟ್ರೋ ನಿಲ್ದಾಣ-ಟೋಲ್ ಗೇಟ್ ಜಂಕ್ಷನ್- ಪ್ರಸನ್ನ ಜಂಕ್ಷನ್- ಹುಣಸೇಮರ ಜಂಕ್ಷನ್‌-ಲುಲು ಮಾಲ್‌-ಓಕಳಿಪುರಂ-ಖೋಡೆ ಜಂಕ್ಷನ್‌ ಮೂಲಕ ಮೆಜೆಸ್ಟಿಕ್‌ ಹೋಗಬಹುದು.

ಇಂಗ್ಲಿಷ್‌ ಕಲಿಯಲು ಬೆಂಗಳೂರಿಗೆ ಬಂದ ಜಪಾನ್ ಪ್ರಜೆಗೆ ಅಕ್ರಮ ಜೈಲು ಶಿಕ್ಷೆ; 7 ವರ್ಷಗಳ ಬಳಿಕ ಸಿಕ್ತು ಪರಿಹಾರ

ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ದೀಪಾಂಜಲಿನಗರ ಜಂಕ್ಷನ್ ಮುಖಾಂತರ ವೆಸ್ಟ್ ಆಫ್ ಕಾರ್ಡ್ ರಸ್ತೆ ತಲುಪಿ, ವೆಸ್ಟ್ ಆಫ್ ಕಾರ್ಡ್ ರಸ್ತೆ ವಿಜಯನಗರ ಮಾಗಡಿ ರಸ್ತೆ ಮುಖಾಂತರ ಮೆಜೆಸ್ಟಿಕ್ ಅಥವಾ ಮಾರ್ಕೆಟ್ ಕಡೆಗೆ ಸಂಚರಿಸಬಹುದು.

ಮೈಸೂರು ರಸ್ತೆ ಕಡೆಯಿಂದ ಕೆ.ಆರ್‌. ಮಾರ್ಕೆಟ್ ಕಡೆಗೆ ಬರುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್-ನಾಗರಭಾವಿ ಸರ್ಕಲ್- ಮದ್ದೂರಮ್ಮ ದೇವಸ್ಥಾನ- ಚಂದ್ರಲೇಔಟ್ ಜಂಕ್ಷನ್-ಆರ್‌.ಪಿ.ಸಿ. ಲೇಔಟ್ ಜಂಕ್ಷನ್-ವೆಸ್ಟ್ ಆಫ್‌ ಕಾರ್ಡ್‌ ರಸ್ತೆ-ವಿಜಯನಗರ ಮೆಟ್ರೋ ನಿಲ್ದಾಣ-ಟೋಲ್ ಗೇಟ್ ಜಂಕ್ಷನ್ - ಪ್ರಸನ್ನ ಜಂಕ್ಷನ್- ಹುಣಸೇಮರ ಜಂಕ್ಷನ್ ಅಂಗುಳಪರಮೇಶ್ವರಿ ದೇವಸ್ಥಾನ- ಬಿನ್ನಿಮಿಲ್ ಜಂಕ್ಷನ್- ಗೂಡ್ಸ್‌ಸೆಡ್‌ ರಸ್ತೆ-ರಾಯನ್ ರಸ್ತೆ-ಶಾಂತಲ ವೃತ್ತ-ಖೋಡೆ ಜಂಕ್ಷನ್‌-ಲಕ್ಷ್ಮಣಪುರಿ ಬ್ರಿಡ್ಜ್‌-ಫ್ರೀಡಂ ಪಾರ್ಕ್‌-ಲೈಬ್ರರಿ ರಸ್ತೆ-ಹಡ್ಸನ್‌ ಸರ್ಕಲ್‌-ಟೌನ್‌ ಹಾಲ್‌ ಜಂಕ್ಷನ್‌-ಎನ್‌.ಆರ್‌. ರಸ್ತೆ ಮೂಲಕ ಕೆ.ಆರ್‌. ಮಾರ್ಕೆಟ್‌ಗೆ ತೆರಳಬಹುದು.

ಮೆರವಣಿಗೆ ಮಾರ್ಕೆಟ್ ಸರ್ಕಲ್‌ಗೆ ಬಂದಾಗ ಎ.ಎಸ್. ಚಾರ್ ಸ್ಟ್ರೀಟ್ ಜಂಕ್ಷನ್‌ನಲ್ಲಿ ವಾಹನಗಳನ್ನು ಎಡಕ್ಕೆ ತಿರುಗಬೇಕು. ಜಿ.ಪಿ. ಸ್ಟ್ರೀಟ್‌ನಿಂದ ಎಸ್.ಆರ್. ರಸ್ತೆ ಮಾರ್ಗವಾಗಿ ಬರುವ ವಾಹನಗಳನ್ನು ಎಸ್.ಆರ್. ಸ್ಟ್ರೀಟ್ ರಸ್ತೆಗೆ ಬಿಡದಂತೆ ಜಿ.ಪಿ. ಸ್ಟ್ರೀಟ್ ರಸ್ತೆಯಲ್ಲಿಯೇ ಮುಂದುವರಿದು ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯನ್ನು ಸಂಪರ್ಕಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ

ಕೆ.ಆರ್. ರಸ್ತೆ ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ಎಲ್ಲ ವಾಹನಗಳು ಪ್ರೋ. ಶಿವಶಂಕರಪ್ಪ ವೃತ್ತ-ಎಲ್.ಬಿ.ಎಫ್. ರಸ್ತೆ - ಜೆ.ಸಿ.ರಸ್ತೆ ಟೌನ ಹಾಲ್ ಕಡೆಗೆ ಬಿಡಲಾಗುತ್ತದೆ. ಎ.ವಿ. ರಸ್ತೆ ಮೂಲಕ ಕೆ.ಆ‌ರ್. ರಸ್ತೆಗೆ ಬರುವ ವಾಹನಗಳು ಎ.ವಿ. ರಸ್ತೆ ಮೂಲಕ ಮೀಂಟೋ ವೃತ್ತದ ಕಡೆಗೆ ಸಾಗಬೇಕು.

ಮೆರವಣಿಗೆ ಎಸ್.ಜೆ.ಪಿ. ರಸ್ತೆಯಲ್ಲಿ ಬರುವಾಗ ಮೈಸೂರು ರಸ್ತೆಯಿಂದ ಬರುವ ವಾಹನಗಳು ಸಿಟಿ ಮಾರುಕಟ್ಟೆ ವೃತ್ತದಿಂದ ಕಲಾಸಿಪಾಳ್ಯ ಮುಖ್ಯರಸ್ತೆಯ ಕಡೆಗೆ ತಿರುಗಿ- ಕೆ.ಪಿ. ಪಾಯಿಂಟ್- ಬಸಪ್ಪ ವೃತ್ತದಲ್ಲಿ ಎಡಕ್ಕೆ ತಿರುಗಿ- ಎಲ್.ಬಿ.ಎಫ್. ರಸ್ತೆ ಮೂಲಕ ಜೆ.ಸಿ. ರಸ್ತೆ - ಟೌನ್‌ ಹಾಲ್‌ಗೆ ತೆರಳಬೇಕು.

ಸಿಇಟಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA; ಫಲಿತಾಂಶ ಹೀಗೆ ಚೆಕ್‌ ಮಾಡಿ

ಮೆರವಣಿಗೆಯು ಮೈಸೂರು ರಸ್ತೆ ಸಿರ್ಸಿ ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಹಾದು ಹೋಗುವಾಗ, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ಕಡೆಯಿಂದ ಬರುವ ವಾಹನಗಳು ಮೈಸೂರು ರಸ್ತೆ ಸಿರ್ಸಿ ವೃತ್ತ-ಚಾಮರಾಜಪೇಟೆ 7ನೇ ಅಡ್ಡರಸ್ತೆ ಬಲ ತಿರುವು ಪಡೆದು ಚಾಮರಾಜಪೇಟೆ 2, 3, 4 & 5ನೇ ಮುಖ್ಯರಸ್ತೆಯಲ್ಲಿ ಎಡತಿರುವು ಪಡೆದು ಸಿಟಿಮಾರುಕಟ್ಟೆ ಹಾಗೂ ಇತರ ಕಡೆಗೆ ಸಂಚರಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author