ಬೆಂಗಳೂರು: 10 ರಿಂದ 14 ವರ್ಷ ವಯಸ್ಸಿನ ಸವಾರರಿಗಾಗಿ ನಡೆದ ಕರ್ನಾಟಕ ರಾಜ್ಯ 4ನೇ ಮಿನಿ ಗೇಮ್ಸ್ 2025 ರಲ್ಲಿ ಈಕ್ವೆಸ್ಟ್ರಿಯನ್ (ಕುದುರೆ ಸವಾರಿ) ಸ್ಪರ್ಧೆಗಳನ್ನು ಆಯೋಜಿಸಿದ ಹೆಮ್ಮೆಗೆ ಎಂಬೆಸ್ಸಿ ಇಂಟರ್‍ನ್ಯಾಷನಲ್ ರೈಡಿಂಗ್ ಸ್ಕೂಲ್ ಪಾತ್ರವಾಗಿದೆ. ಇದರೊಂದಿಗೆ ರಾಜ್ಯ ಮಿನಿ ಗೇಮ್ಸ್ ನಲ್ಲಿ ಈಕ್ವೆಸ್ಟ್ರಿಯನ್ ಸ್ಪರ್ಧೆಯನ್ನು ಮೊದಲ ಬಾರಿಗೆ ಸೇರಿಸಿಕೊಂಡಂತಾಗಿದೆ. ಕರ್ನಾಟಕ ರೈಡಿಂಗ್ ಅಸೋಸಿಯೇಷನ್, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‍ನ ಅನುಮೋದನೆ ಪಡೆಯುವ ಮೂಲಕ ಮತ್ತು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಬಲದ ಮೂಲಕ ಇದು ಸಾಧ್ಯ ವಾಗಿದೆ.
ಇದನ್ನೂ ಓದಿ: Bangalore News: ಎರಡು ದಿನಗಳ ಉಪಕುಲಪತಿಗಳ ರಾಷ್ಟ್ರೀಯ ಸಮ್ಮೇಳನ: ಶಿಕ್ಷಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ನಿರ್ಧಾರ
ಯುವ ಸವಾರರು ಕೆಲವು ವರ್ಗಗಳಲ್ಲಿ ಸ್ಪರ್ಧಿಸಲಿದ್ದಾರೆ: ಅವುಗಳೆಂದರೆ ಪರಿಚಯಾತ್ಮಕ ಡ್ರೆಸ್ಸಾಜ್, ಪ್ರಾಥಮಿಕ ಡ್ರೆಸ್ಸಾಜ್, 80 ಸೆಂಟಿಮೀಟರ್ ಶೋ ಜಂಪಿಂಗ್ ಮತ್ತು 90*100 ಸೆಂಟಿಮೀಟರ್ ಶೋ ಜಂಪಿಂಗ್. ಈ ವರ್ಷ 27 ಕ್ರೀಡೆಗಳಲ್ಲಿ 5000 ಕ್ಕೂ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸುತ್ತಿದ್ದಾರೆ, ಆದ್ದರಿಂದ ಭವಿಷ್ಯದ ಪ್ರತಿಭೆಗಳನ್ನು ನೋಡಲು ಇದು ಉತ್ತಮ ಮಾರ್ಗವಾಗಿದೆ.
ಈ ಕಾರ್ಯಕ್ರಮ ಆಯೋಜನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಎಂಬೆಸ್ಸಿ ಇಂಟರ್‍ನ್ಯಾಷನಲ್ ರೈಡಿಂಗ್ ಸ್ಕೂಲ್ ನಿರ್ದೇಶಕಿ ಸಿಲ್ವಾ ಸ್ಟೋರೈ ಅವರು "ಕರ್ನಾಟಕ ರಾಜ್ಯ ಮಿನಿ ಗೇಮ್ಸ್‍ಗೆ ಮೊದಲ ಬಾರಿಗೆ ಈಕ್ವೆಸ್ಟ್ರಿಯನ್ ಸೇರಿಸಿರುವುದು ಒಂದು ಗೌರವವಾಗಿದೆ. ಈ ಮೈಲಿಗಲ್ಲು ಹೊಸ ಪೀಳಿಗೆಯ ಸವಾರರಿಗೆ ಸ್ಫೂರ್ತಿ ನೀಡಲಿದೆ ಮತ್ತು ಅವರು ಕ್ರೀಡೆಯನ್ನು ವೃತ್ತಿಪರ ವಾಗಿ ಮುಂದುವರಿಸಲು ಪ್ರೋತ್ಸಾಹಿಸುತ್ತದೆ. ಎಂಬಸಿ ಮೂಲಕ ನಾವು ವಿಶ್ವ ದರ್ಜೆಯ ಈಕ್ವೆಸ್ಟ್ರಿಯನ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಯುವ ಪ್ರತಿಭೆಗ ಳನ್ನು ಪೋಷಿಸಲು ಬದ್ಧರಾಗಿದ್ದೇವೆ. ಮಿನಿ ಗೇಮ್ಸ್ ವಿಭಾಗಗಳಲ್ಲಿ ಈಕ್ವೆಸ್ಟ್ರಿಯನ್ ಅನ್ನು ಸೇರಿಸುವ ಮೂಲಕ ರಾಜ್ಯದಲ್ಲಿ ಕ್ರೀಡೆಯ ಚಿತ್ರಣವನ್ನೇ ಬದಲಿಸಲು ನೆರವ ನೀಡಿದ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ" ಎಂದು ಬಣ್ಣಿಸಿದರು.