ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru Tech Summit 2026: ಎಐ ರೂಪಿಸಿದ ಕೋಡಿಂಗ್ ಗುಣಮಟ್ಟ ಪರಿಶೀಲನೆಗೆ ಎಂಜಿನಿಯರ್‌ಗಳ ಸಿದ್ಧತೆ ಅಗತ್ಯ: ಕ್ರಿಸ್ ಗೋಪಾಲಕೃಷ್ಣನ್

Kris Gopalakrishnan: ಮಂಗಳವಾರ ಆರಂಭವಾದ 29ನೇ ಬೆಂಗಳೂರು ಟೆಕ್ ಶೃಂಗದ ಅಂಗವಾಗಿ ನಡೆದ ‘ಕೃತಕ ಬುದ್ಧಿಮತ್ತೆ ಹಾಗೂ ಅದರಾಚೆಗೆ: ಉದಯಿಸುತ್ತಿರುವ ಭಾರತ’ ಕುರಿತ ಸಂವಾದ ಗೋಷ್ಠಿಯಲ್ಲಿ ಉದ್ಯಮಿ ಹಾಗೂ ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರು ಎಐ ತಂತ್ರಜ್ಞಾನದ ಕುರಿತು ಮಾತನಾಡಿದ್ದಾರೆ.

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಬಳಸಿ ಕೋಡಿಂಗ್ ರೂಪಿಸುವುದು (ಸಂಕೇತ ರಚನೆ) (ಕೋಡಿಂಗ್) ಸುಲಭವಾಗಿರಬಹುದು. ಆದರೆ, ಎಐ ಮೂಲಕ ರೂಪಿಸಿದ ಸಂಕೇತಗಳನ್ನು ಪರಿಶೀಲಿಸಿ, ಅವುಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ದೃಢೀಕರಿಸುವ ಸಾಮರ್ಥ್ಯ ಹೊಂದಿರುವ ಎಂಜಿನಿಯರ್‌ಗಳನ್ನು ಸಿದ್ಧಪಡಿಸುವ ಅಗತ್ಯವಿದೆ ಎಂದು ಉದ್ಯಮಿ ಹಾಗೂ ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ (Kris Gopalakrishnan) ಅಭಿಪ್ರಾಯಪಟ್ಟರು.

ಮಂಗಳವಾರ ಆರಂಭವಾದ 29ನೇ ಬೆಂಗಳೂರು ಟೆಕ್ ಶೃಂಗದ (Bengaluru Tech Summit 2026) ಅಂಗವಾಗಿ ನಡೆದ ‘ಕೃತಕ ಬುದ್ಧಿಮತ್ತೆ ಹಾಗೂ ಅದರಾಚೆಗೆ: ಉದಯಿಸುತ್ತಿರುವ ಭಾರತ’ ಕುರಿತ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐ ಬಳಕೆಯಿಂದ ಕೋಡಿಂಗ್ ಸುಲಭವಾಗುತ್ತಿದ್ದರೂ, ಅದರಿಂದ ಸಿದ್ಧವಾಗುವ ಕೋಡಿಂಗ್ ಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸುವ ನೈಪುಣ್ಯ ಹೊಂದಿರುವ ಎಂಜಿನಿಯರ್‌ಗಳ ಅಗತ್ಯ ಹೆಚ್ಚುತ್ತಿದೆ ಎಂದರು.

ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಷಾ ಮಾತನಾಡಿ, ಜೀವಶಾಸ್ತ್ರದಲ್ಲಿನ ಸಂಕೀರ್ಣ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಎಐ ನೆರವಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗೆ ಔಷಧಗಳನ್ನು ಕಂಡುಹಿಡಿಯುವ ಸಂಶೋಧನೆಯಲ್ಲಿಯೂ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಕರ್ನಾಟಕ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರು, ಕೃಷಿ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟು ಪ್ರಗತಿ ಸಾಧಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, 2030ರ ವೇಳೆಗೆ ಪ್ರತಿವರ್ಷ ಒಂದು ಲಕ್ಷ ಯುವಜನರಿಗೆ ತಾಂತ್ರಿಕ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಐಟಿ-ಬಿಟಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯದ ಗೃಹ ಇಲಾಖೆಯಲ್ಲೂ ಹಲವು ಸುಧಾರಣೆಗಳನ್ನು ತರಲು ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಸೈಬರ್ ಭದ್ರತೆ, ಮಾದಕ ವಸ್ತುಗಳ ವಿಶ್ಲೇಷಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಎಐ ಬಳಕೆಗೆ ಒತ್ತು ನೀಡಲಾಗುತ್ತಿದೆ ಎಂದರು.

Bengaluru Tech Summit 2026: ರೋಬೊಟಿಕ್ಸ್, ಫಿಸಿಕಲ್ ಎಐ ಕ್ಷೇತ್ರದಲ್ಲಿ ಜಾಗತಿಕ ಕೇಂದ್ರವಾಗಿ ಬೆಂಗಳೂರನ್ನು ರೂಪಿಸಲು ‘ಬ್ರೇನ್ಸ್’ ಉಪಕ್ರಮ: ಪ್ರಿಯಾಂಕ್ ಖರ್ಗೆ

ಸರ್ಕಾರದ ವಿವಿಧ ಇಲಾಖೆಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹೊಸ ಯೋಜನೆಗಳನ್ನು ರೂಪಿಸುವವರಿಗೆ ₹25 ಲಕ್ಷ ಸಹಾಯಧನದ ಜೊತೆಗೆ ಸ್ಥಳಾವಕಾಶವನ್ನೂ ಒದಗಿಸುವ ಉಪಕ್ರಮವನ್ನು ಕರ್ನಾಟಕ ಮೊದಲ ಬಾರಿಗೆ ಜಾರಿಗೆ ತಂದಿದೆ ಎಂದು ಅವರು ಹೇಳಿದರು.

ಕಿಂಡ್ರಿಲ್ ಕಂಪನಿಯ ಲಿಂಗರಾಜ್ ಸಾವುಕಾರ್ ಗೋಷ್ಠಿಯನ್ನು ನಿರ್ವಹಿಸಿದರು.