ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KPSC recruitment scam: ಕೆಪಿಎಸ್‌ಸಿ ಅಕ್ರಮದ ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ 5 ದಿನ ಜಾಮೀನು ಮಂಜೂರು

ಹೈಕೋರ್ಟ್‌ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಕನ್ನಾಳೆ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಅ.15ರಿಂದ 20ರ ವರೆಗೆ ಜಾಮೀನು ನೀಡಲಾಗಿದೆ. ಹಲವು ಷರತ್ತು ವಿಧಿಸಿ ಬಸವರಾಜ್‌ ಕನ್ನಾಳೆಗೆ ಜಾಮೀನು ನೀಡಲಾಗಿದೆ.

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ (Basavaraj Kannale) ಐದು ದಿನಗಳ ಕಾಲ ಜಾಮೀನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಕನ್ನಾಳೆ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು.

ಕನ್ನಾಳೆ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 12 ದಿನದ ಮಗುವಿಗೆ ನಾಮಕರಣದ ಅಗತ್ಯವಿದೆ. ಮಾನವೀಯತೆ ಮೇಲೆ ಒಂದು ವಾರದ ಜಾಮೀನು ನೀಡುವಂತೆ ವಕೀಲರು ಮನವಿ ಮಾಡಿದರು. ಈ ಹಿನ್ನೆಲೆ 5 ದಿನಗಳ ಕಾಲ ಜಾಮೀನು ಮಂಜೂರು ಮಾಡಿ ಕೋರ್ಟ್‌ ಆದೇಶಿಸಿದೆ.

ಅ.15ರಿಂದ 20ರ ವರೆಗೆ ಜಾಮೀನು ನೀಡಲಾಗಿದೆ. ಪೊಲೀಸರು ಆರೋಪಿ ಜೊತೆಯಲ್ಲಿಯೇ ಹೋಗಬೇಕು. ಮೊಬೈಲ್ ಬಳಸಬಾರದು. ಐದು ದಿನದ ಒಳಗಾಗಿ ನಾಮಕರಣ ಮುಗಿಸಬೇಕು. ಒಬ್ಬರೇ ಹೋಗಲು ಅನುಮತಿಸಬಾರದು ಎಂದು ಷರತ್ತು ವಿಧಿಸಿದೆ.

ಪೊಲೀಸರು ಕನ್ನಾಳೆ ಮನೆ ಮತ್ತು ಆಸ್ಪತ್ರೆಗೆ ಹೋಗುವಂತಿಲ್ಲ. ಪೊಲೀಸರು ಇಲ್ಲದಿರುವಾಗ ಮೊಬೈಲ್ ಬಳಸಬಾರದು. ಬೀದರ್‌ಗೆ ಪೊಲೀಸರು ಕರೆದೊಯ್ಯಬೇಕು. ಬೇರೆ ಯಾರನ್ನೂ ಭೇಟಿಯಾಗಬಾರದೆಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.