ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) 109ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಎಫ್‌ಕೆಸಿಸಿಐನ 2026-27ನೇ ಸಾಲಿನ ಅಧ್ಯಕ್ಷರಾಗಿ ಟಿ. ಸಾಯಿರಾಮ್ ಪ್ರಸಾದ್, ಹಿರಿಯ ಉಪಾಧ್ಯಕ್ಷರಾಗಿ ಬಿ.ಪಿ. ಶಶಿಧರ್ ಮತ್ತು ಉಪಾಧ್ಯಕ್ಷರಾಗಿ ಎನ್. ಸತೀಶ್ ಅವರು ಆಯ್ಕೆಯಾಗಿದ್ದಾರೆ.
ಇದೇ ವೇಳೆ ಎಫ್‌ಕೆಸಿಸಿಐನ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇದರಲ್ಲಿ ಆತಿಥ್ಯ ಕ್ಷೇತ್ರದ ಕೆ. ರಾಧಾಕೃಷ್ಣ ಹೊಳ್ಳ, ಪಿ.ಸಿ. ರಾವ್, ಎನ್. ವೀರೇಂದ್ರ ಕಾಮತ್ ಹಾಗೂ ಡಾ.ವಿ.ಜಿ. ಕಿರಣ್‌ಕುಮಾರ್ ಅವರು ವಿಜೇತರಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ವೀರೇಂದ್ರ ಕಾಮತ್ ಅವರು ಸಣ್ಣ ಪ್ರಮಾಣದ ಸೇವಾ ಕ್ಷೇತ್ರ (ಸ್ಮಾಲ್ ಸ್ಕೇಲ್ ಸರ್ವಿಸ್ ಸೆಕ್ಟರ್) ವಿಭಾಗದಿಂದ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಇವರೊಂದಿಗೆ ಇದೇ ಕ್ಷೇತ್ರದಲ್ಲಿ ಎಚ್.ಎ.ಕಿರಣ್, ಡಾ.ಮಧುರಾಣಿ ಗೌಡ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ.
ಹಾಗೆಯೇ ಸಂಘಗಳ ಕ್ಷೇತ್ರದಿಂದ ಬೆಂಗಳೂರು ಹೋಟೆಲುಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಗೌರವಾಧ್ಯಕ್ಷರಾಗಿರುವ ಪಿ.ಸಿ. ರಾವ್ ಅವರು ಎಫ್‌ಕೆಸಿಸಿಐ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಎಫ್‌ಕೆಸಿಸಿಐನಲ್ಲಿ ಒಟ್ಟು 41 ಮಂದಿ ನಿರ್ದೇಶಕರಾಗಿದ್ದಾರೆ.