ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶಿವಂ ಅಸೋಸಿಯೇಟ್ಸ್ ವಂಚನೆ ಕೇಸ್‌; ಜೈಲಿನಿಂದ ರಿಲೀಸ್‌ ಆಗುತ್ತಲೇ ʼಓಂ ನಮಃ ಶಿವಾಯʼ ಎಂದ ನೀಲಣ್ಣವರ್‌!

Shivam Associates Scam: ನ್ಯಾಯಾಲಯವು ಕೆಲ ಕಠಿಣ ಷರತ್ತುಗಳನ್ನು ವಿಧಿಸಿ ಶಿವಾನಂದ ನೀಲಣ್ಣವರ್‌ಗೆ ಬೇಲ್‌ ಮಂಜೂರು ಮಾಡಿದೆ. ಹೆಚ್ಚಿನ ಬಡ್ಡಿ ಆಮಿಷ ತೋರಿ ಬೆಳಗಾವಿಯಲ್ಲಿ ಮಾಜಿ ಸೈನಿಕರು ಹಾಗೂ ಸಾರ್ವಜನಿಕರಿಂದ ಸಾವಿರಾರು ಕೋಡಿ ಹಣ ಸಂಗ್ರಹಿಸಿರುವ ಆರೋಪದಲ್ಲಿ ಮೇ15ರಂದು ಮಾಳಮಾರುತಿ ಪೊಲೀಸರಿಂದ ಶಿವಾನಂದ್ ನೀಲಣ್ಣವರ್ ಬಂಧನವಾಗಿತ್ತು. ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಬೆಳಗಾವಿಯ ಹಿಂಡಲಗಾ ಜೈಲಿನಿಂದ ಶಿವಾನಂದ್‌ ನೀಲಣ್ಣವರ್‌.

ಬೆಂಗಳೂರು: ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನಿಂದ ಉದ್ಯಮಿ ಶಿವಾನಂದ ನೀಲಣ್ಣವರ್‌ ಬಿಡುಗಡೆಯಾಗಿದ್ದಾರೆ. ಜೂನ್ 12ರಂದು ಬೆಂಗಳೂರಿನ 92ನೇ ಸಿಟಿ ಸಿವಿಲ್ ಮತ್ತು ಸೆಷನ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

ಹೆಚ್ಚಿನ ಬಡ್ಡಿ ಆಮಿಷ ತೋರಿ ಬೆಳಗಾವಿಯಲ್ಲಿ ಮಾಜಿ ಸೈನಿಕರು ಹಾಗೂ ಸಾರ್ವಜನಿಕರಿಂದ ಸಾವಿರಾರು ಕೋಡಿ ಹಣ ಸಂಗ್ರಹಿಸಿರುವ ಆರೋಪದಲ್ಲಿ ಮೇ15ರಂದು ಮಾಳಮಾರುತಿ ಪೊಲೀಸರಿಂದ ಶಿವಾನಂದ್ ನೀಲಣ್ಣವರ್ ಬಂಧನವಾಗಿತ್ತು. ಶಿವಂ ಅಸೋಸಿಯೇಟ್ಸ್‌ ವಿರುದ್ಧದ 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿತ್ತು.

ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ವೇಳೆ ಮಾಧ್ಯಮಗಳ ಜತೆ ಮಾತನಾಡಲು ನಿರಾಕರಿಸಿದ ಶಿವಾನಂದ ನೀಲಣ್ಣವರ್‌, ಈಗ ನಾನು ಏನೂ ಹೇಳಲ್ಲ, ಓಂ ನಮಃ ಶಿವಾಯ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವ ವ್ಯಕ್ತಿ ನಾನು ಎಂದು ಹೇಳುತ್ತಾ, ಕಾರು ಹತ್ತಿ ನಿರ್ಗಮಿಸಿದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 13.14 ಕೋಟಿ ರೂ ಮೌಲ್ಯದ ಗಾಂಜಾ ವಶ; ಆರು ಜನರ ಬಂಧನ

ಕೋರ್ಟ್‌ನಿಂದ ಕಠಿಣ ಷರತ್ತುಗಳು

ಆರೋಪಿಗೆ ಮಧ್ಯಂತರ ಜಾಮೀನು ನೀಡುವಾಗ ನ್ಯಾಯಾಲಯವು ಕೆಲವು ಕಠಿಣ ಷರತ್ತುಗಳನ್ನು ವಿಧಿಸಿದೆ. 3 ಲಕ್ಷ ರೂಪಾಯಿಗಳ ಬಾಂಡ್ ಶ್ಯೂರಿಟಿ ಒದಗಿಸಬೇಕು, ಜೂನ್ 27 ರಂದು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು. ಯಾವುದೇ ಕಾರಣಕ್ಕೂ ಅನುಮತಿಯಿಲ್ಲದೆ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದೆ.