ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ವಾತಂತ್ರ್ಯ ಬಹುಮಾನವಲ್ಲ. ಇದು ಕಷ್ಟಪಟ್ಟು ಗಳಿಸಿದ್ದು ; ಮೇಜರ್ ಜನರಲ್ ರವಿಮುರುಗನ್

ಭಾರತೀಯರಾದ ನಾವು ಮಾಡುವ ಕೆಲಸದಲ್ಲಿ ತೃಪ್ತಿಯನ್ನು ಕಾಣಲು ನಮ್ಮ ಕೌಶಲವನ್ನು ಗುರುತಿಸಿ ಕೊಂಡು ಆ ನಿಟ್ಟಿ ನಲ್ಲಿ ಕಾರ್ಯೋನ್ಮುಖರಾದರೆ ದೇಶದ ಪ್ರಗತಿ ಕಟ್ಟಿಟ್ಟ ಬುತ್ತಿ. “ಭಾರತದ ವಿಶ್ವ ಗುರು” ಸ್ಥಾನದ ಪ್ರಖರತೆಯನ್ನು ಹೆಚ್ಚಿಸುವುದು ನಿಮ್ಮ ಕೈಲಿದೆ. “ಒಗ್ಗಟ್ಟಿನಲ್ಲಿ ಬಲವಿದೆ” ಎಂದು ತಿಳಿಸಿ ಅದರಂತೆ ಬಾಳುವಂತೆ ಕರೆ ನೀಡಿದರು.

ಸ್ವಾತಂತ್ರ್ಯ ಬಹುಮಾನವಲ್ಲ. ಇದು ಕಷ್ಟಪಟ್ಟು ಗಳಿಸಿದ್ದು

Ashok Nayak Ashok Nayak Aug 15, 2025 10:08 PM

ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಆಚಾರ್ಯ ಪಾಠಶಾಲೆ ಶಿಕ್ಷಣ ಸಂಸ್ಥೆಯು ದೇಶಕ್ಕೆ ಸ್ವಾತಂತ್ರ್ಯ ಬರುವ12 ವರ್ಷಗಳ ಮುಂಚಿತವಾಗಿಯೇ 1935ರ ಆಗಸ್ಟ್ 15ರಂದು ಶ್ರೇಷ್ಠ ಮಾನವತವಾದಿ, ಶಿಕ್ಷಣ ಶಿಲ್ಪಿ ಪ್ರೊ.ಎನ್‌.ಅನಂತಚಾರ್ಯರು ಪ್ರಾರಂಭಿಸಿದ್ದು, ಈ ಶಿಕ್ಷಣ ಸಂಸ್ಥೆ ಯಲ್ಲಿಂದು ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು,

  • 79ನೇ ಸ್ವಾತಂತ್ರ್ಯೊತ್ಸವವನ್ನು ಆಚಾರ್ಯ ಪಾಠಶಾಲ ಶಿಕ್ಷಣ ಸಂಸ್ಥೆಯ ಆಟದ ಮೈದಾನದಲ್ಲಿ ಎ.ಪಿ.ಎಸ್‌ ಸಮೂಹ ಸಂಸ್ಥೆಗಳೆಲ್ಲವೂ ಒಟ್ಟಿಗೆ ಸೇರಿ ಸಂಭ್ರಮಿಸಿದವು. 5000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪುಟ್ಟ ಮಕ್ಕಳ ಕಣ್ಣಲ್ಲಿ ದೊಡ್ಡ ವ್ಯಕ್ತಿತ್ವಗಳ ವೇಷಭೂಷಣ ಹಾಗೂ ವಿಶೇಷ ಚೇತನ ಅಂಧ ವಿದ್ಯಾರ್ಥಿಗಳ ಪಥಸಂಚಲನ ಎಲ್ಲರ ಕಣ್ಮನ ಸೆಳೆಯಿತು.
  • ಸಂಸ್ಥೆಯ ಎನ್.ಸಿ.ಸಿ, ಎನ್.ಎಸ್.ಎಸ್‌, ವೈ.ಆರ್.ಸಿ ಹೀಗೆ ಎಲ್ಲಾ ಘಟಕದ ಕೆಡೆಟ್‌ಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಒಟ್ಟಿಗೆ ಪಥಸಂಚಲನದಲ್ಲಿ ಭಾಗವಹಿಸಿದ್ದವು. ಭಾರತಾಂಬೆಗೆ ನಾವು ತೋರಿಸುವ ಗೌರವ ಪೂರ್ವಕ ಪ್ರಣಾಮಗಳ ಪ್ರತೀಕ ಇದಾಗಿತ್ತು. ಈ ಸ್ವಾತಂತ್ರ್ಯ ಸಂಭ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೇಜರ್‌ ಜನರಲ್‌ ರವಿಮುರುಗನ್‌, ಪಿವಿಎಸ್ಎಂ, ಎವಿಎಸ್ಎಂ ನಿವೃತ್ತ ರವರು ಹಾಗೂ ಬ್ರಿಗೇಡಿಯರ್‌ ಸಂದೀಪ್‌ ಕುಮಾರ್‌, ವಿಎಸ್ಎಂ ನಿವೃತ್ತ ರವರು ಪಾಲ್ಗೊಂಡಿದ್ದರು. ಎ.ಪಿ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿಎ.ಡಾ.ವಿಷ್ಣು ಭರತ್‌ ಅಲಂಪಲ್ಲಿ ಧ್ವಜಾರೋಹಣ ನೇರವೇರಿಸಿದರು. ಈ ಸುವರ್ಣ ಸಂಭ್ರಮಕ್ಕೆ ಎ.ಪಿ.ಎಸ್‌ ಶಿಕ್ಷಣ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಸಾಕ್ಷಿಭೂತರಾದರು.

ಇದನ್ನೂ ಓದಿ: Independence Day: 68 ಲಕ್ಷ ಚಿಕ್ಕ ವ್ಯಾಪಾರಿಗಳಿಗೆ ₹14,316 ಕೋಟಿ ಸಾಲ ಸೌಲಭ್ಯ: ಪ್ರಲ್ಹಾದ್‌ ಜೋಶಿ

ಮೇಜರ್‌ ಜನರಲ್‌ ರವಿಮುರುಗನ್ ಮಾತನಾಡಿ, ಸ್ವಾತಂತ್ರ್ಯ ಬಹುಮಾನವಲ್ಲ. ಇದು ಕಷ್ಟಪಟ್ಟು ಗಳಿಸಿದ್ದು, ಎಂದು ಹೇಳಿ ಯುವ ಜನಾಂಗ ತಮ್ಮ ಶಕ್ತಿ ಮತ್ತು ಸಾಮರ್ಥ್ಯದಲ್ಲಿ ನಂಬಿಕೆ ಇರಿಸಿ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಾವಿಣ್ಯತೆ ಗಳಿಸಿ ದೇಶವನ್ನು ಮುನ್ನಡಿಸುವಲ್ಲಿ ಶ್ರಮವಹಿಸಬೇಕಿದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಬ್ರಿಗೇಡಿಯರ್‌ ಸಂದೀಪ್‌ ಕುಮಾರ್‌, ಭಾರತೀಯರಾದ ನಾವು ಮಾಡುವ ಕೆಲಸದಲ್ಲಿ ತೃಪ್ತಿಯನ್ನು ಕಾಣಲು ನಮ್ಮ ಕೌಶಲವನ್ನು ಗುರುತಿಸಿ ಕೊಂಡು ಆ ನಿಟ್ಟಿ ನಲ್ಲಿ ಕಾರ್ಯೋನ್ಮುಖರಾದರೆ ದೇಶದ ಪ್ರಗತಿ ಕಟ್ಟಿಟ ಬುತ್ತಿ ಲ. “ಭಾರತದ ವಿಶ್ವಗುರು” ಸ್ಥಾನದ ಪ್ರಖರತೆಯನ್ನು ಹೆಚ್ಚಿಸುವುದು ನಿಮ್ಮ ಕೈಲಿದೆ. “ಒಗ್ಗಟ್ಟಿನಲ್ಲಿ ಬಲವಿದೆ” ಎಂದು ತಿಳಿಸಿ ಅದರಂತೆ ಬಾಳುವಂತೆ ಕರೆ ನೀಡಿದರು.

ಎ.ಪಿ.ಎಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿಎ.ಡಾ.ವಿಷ್ಣು ಭರತ್‌ ಅಲಂಪಲ್ಲಿ ಮಾತನಾಡಿ, ಸ್ವಾತಂತ್ರ್ಯ ಕ್ಕಾಗಿ ಲಕ್ಷಾಂತ ಜನರ ಬಲಿದಾನವಾಗಿದೆ ಎಂದು ತಳಿಸಿದ ಅವರು ಎಲಾ ಸ್ವಾತಂತ್ರ್ಯ ಹೋರಾಟ ಗಾರರ ಹೆಸರುಗಳನ್ನು ವಿದ್ಯಾರ್ಥಿಗಳ ಬಾಯಲ್ಲಿ ಹೇಳಿಸುವುದರ ಮೂಲಕ ಸ್ವಾತಂತ್ರ್ಯ ಸಂಭ್ರಮಕ್ಕೆ ಹೊಸ ಕಳೆಯನ್ನು ತಂದರು, ಡಿ.ಆರ್.ಡಿ.ಓ ರಕ್ಷಣ ಯೋಜನೆ ನಮ್ಮ ಸಂಸ್ಥೆಯ ಇಂಜಿನಿಯರಿಂಗ್‌ ಕಾಲೇಜಿಗೆ ಸಂದಿರುವುದು ನಮ್ಮ ಹೆಮ್ಮೆ. ಆಪರೇಷನ್‌ “ಸಿಂಧೂರ್‌” ಬಗ್ಗೆ ಪ್ರಸ್ತಾಪಿಸಿ ದೇಶದ ನಿರ್ಮಾಣ ತರಗತಿಗಳಲ್ಲಿಯೇ ಆಗಬೇಕಿದೆ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎ.ಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು.