ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gas Geyser Leak: ಗ್ಯಾಸ್‌ ಗೀಸರ್‌ ಸೋರಿಕೆಯಿಂದ ತಾಯಿ- ಮಗು ಸಾವು

ಗ್ಯಾಸ್‌ ಗೀಸರ್‌ಗಳ ಅವೈಜ್ಞಾನಿಕ ಬಳಕೆ ಅಥವಾ ಸೋರಿಕೆ (Gas Geyser Leak) ಹಲವು ಕಡೆ ಸಾವುಗಳಿಗೆ ಕಾರಣವಾಗುತ್ತಿದೆ. ಇತ್ತೀಚೆಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬೆಟ್ಟದಪುರ ಎಂಬಲ್ಲಿ ಸ್ನಾನಕ್ಕೆ ಇಳಿದ ಅಕ್ಕ- ತಂಗಿ ಗ್ಯಾಸ್ ಗೀಸರ್‌ ಸೋರಿಕೆಯಿಂದ ಮೃತಪಟ್ಟಿದ್ದರು. ಇದೀಗ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ತಾಯಿ ಹಾಗೂ ಮಗು ಇದರಿಂದಾಗಿ ಮೃತಪಟ್ಟಿದ್ದಾರೆ.

ಗ್ಯಾಸ್‌ ಗೀಸರ್‌ ಸೋರಿಕೆಯಿಂದ ತಾಯಿ- ಮಗು ಸಾವು

ಮೃತರಾದ ಚಾಂದಿನಿ, ಯುವಿ -

ಹರೀಶ್‌ ಕೇರ
ಹರೀಶ್‌ ಕೇರ Dec 9, 2025 8:12 AM

ಬೆಂಗಳೂರು‌, ಡಿ.09: ಗ್ಯಾಸ್ ಗೀಸರ್ ಸೋರಿಕೆಯಿಂದ (Gas Geyser Leak) ತಾಯಿ – ಮಗು (mother- child death) ಸಾವನ್ನಪ್ಪಿದ ಘಟನೆ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ( Govindaraj Nagara) ನಡೆದಿದೆ. ಮೃತರನ್ನು ಚಾಂದಿನಿ (26), ಯುವಿ (4) ಎಂದು ಗುರುತಿಸಲಾಗಿದೆ. ಸೋಮವಾರ (ಡಿ.8) ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು.

ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರತಿದಿನ ದೊಡ್ಡ ಮಗಳನ್ನು ಶಾಲೆಯಿಂದ 4 ಗಂಟೆಗೆ ಕರೆದುಕೊಂಡು ಬರಲು ಚಾಂದಿನಿ ಹೋಗುತ್ತಿದ್ದರು. ಆದರೆ ಸೋಮವಾರ ಮಗಳನ್ನು ಕರೆದುಕೊಂಡು ಬರಲು ಶಾಲೆಗೆ ಹೋಗದ ಕಾರಣ ಶಾಲೆಯಿಂದ ಚಾಂದಿನಿ ಪತಿ ಕಿರಣ್‌ಗೆ ಫೋನ್‌ ಮಾಡಿದ್ದರು. ಬಳಿಕ ಚಾಂದಿನಿಗೆ ಕರೆ ಮಾಡಿದರೆ ರಿಸೀವ್‌ ಮಾಡಿರಲಿಲ್ಲ. ಇದರಿಂದ ಕಿರಣ್‌ ತಮ್ಮನಿಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದರು.

ಕಿರಣ್ ತಮ್ಮ ಪ್ರವೀಣ್ ಮನೆಗೆ ಬಂದು ನೋಡಿದಾಗ ಬಾತ್ ರೂಮ್‌ನಲ್ಲಿ ತಾಯಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಗ್ಯಾಸ್ ಗೀಸರ್ ಸೋರಿಕೆಯಿಂದ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಗೋವಿಂದ ರಾಜ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ‌

ಗ್ಯಾಸ್‌ ಗೀಸರ್‌ ಸೋರಿಕೆಯಾಗಿ ಅಕ್ಕ- ತಂಗಿ ಉಸಿರುಗಟ್ಟಿ ಸಾವು

ಗ್ಯಾಸ್‌ ಗೀಸರ್‌ಗಳ ಅವೈಜ್ಞಾನಿಕ ಬಳಕೆ ಹಲವು ಕಡೆ ಸಾವುಗಳಿಗೆ ಕಾರಣವಾಗುತ್ತಿದೆ. ಇತ್ತೀಚೆಗೆ ಮೈಸೂರು (Mysuru news) ಜಿಲ್ಲೆಯ ಪಿರಿಯಾಪಟ್ಟಣದ ಬೆಟ್ಟದಪುರ ಎಂಬಲ್ಲಿ ಸ್ನಾನಕ್ಕೆ ಇಳಿದ ಅಕ್ಕ- ತಂಗಿ ಗ್ಯಾಸ್ ಗೀಸರ್‌ ಸೋರಿಕೆಯಿಂದ ಮೃತಪಟ್ಟಿದ್ದರು.

ನಡುರಸ್ತೆಯಲ್ಲಿ ಯುವಕನ ಕೊಲೆ, ಪ್ರೀತಿಯೇ ಕಾರಣ

ಬೆಂಗಳೂರು : ಬೆಂಗಳೂರಿನಲ್ಲಿ (Bengaluru crime news) ನಡುಬೀದಿಯಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder Case) ಮಾಡಲಾಗಿದೆ. ಯುವತಿಯೊಬ್ಬಳನ್ನು ಆತ ಪ್ರೀತಿಸಿದ್ದು, ಇದಕ್ಕಾಗಿ ತಗಾದೆ ಉಂಟಾಗಿತ್ತು. ಇದೇ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ದೊಡ್ಡಬಳ್ಳಾಪುರ (Doddaballapuara) ನಗರದ ಯಲಹಂಕ- ಹಿಂದೂಪುರ ರಸ್ತೆಯ ಚರ್ಚ್ ಮುಂಭಾಗದಲ್ಲಿ ಡಿ.04ರಂದು ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಪವನ್ ಕುಮಾರ್ (30) ಕೊಲೆಯಾದ ಯುವಕ. ಮೃತ ಪವನ್‌ ಕುಮಾರ್‌, ಜಾಲಪ್ಪ ಕಾಲೇಜಿನಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದರು. ಕಾಲೇಜಿನ ವಸತಿ ಗೃಹದಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ದರು. ಗುರುವಾರ ರಾತ್ರಿ 9 ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ಫೋನ್ ಮಾಡಿ ಹೊರಗೆ ಕರೆಸಿಕೊಂಡಿದ್ದಾರೆ. ಆಟೋದಲ್ಲಿ ಬರುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ಆಟೋವನ್ನು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. ತೀವ್ರ ಹಲ್ಲೆಯಿಂದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಗೋವಾ ಭೀಕರ ಅಗ್ನಿ ದುರಂತ: ಸಾವು-ನೋವು ಹೆಚ್ಚಾಗಲು ಕಾರಣ ಬಹಿರಂಗ

ಯುವತಿಯೊಬ್ಬಳನ್ನು ಈತ ಪ್ರೀತಿ ಮಾಡುತ್ತಿದ್ದ ವಿಚಾರಕ್ಕೆ ಈ ಮೊದಲು ಗಲಾಟೆ ಸಹ ಆಗಿತ್ತು. ಕೆಲವರು ನಿನ್ನನ್ನು ನೋಡಿಕೊಳ್ಳುವುದಾಗಿ ಈತನಿಗೆ ಧಮಕಿ ಹಾಕಿದ್ದರು. ಬಳಿಕ ಇಬ್ಬರೂ ಬೇರೆ ಬೇರೆಯಾಗಿದ್ದರು. ಇತ್ತೀಚೆಗೆ ಮತ್ತೆ ಇಬ್ಬರೂ ಜೊತೆಯಲ್ಲಿರುವ ಬಗ್ಗೆ ಮಾಹಿತಿ ಇತ್ತು. ಇದೇ ವಿಚಾರಕ್ಕೆ ಕೊಲೆ ಮಾಡಿರುವ ಸಂಶಯ ಇದೆ ಎಂದು ಮೃತ ಯುವಕನ ಚಿಕ್ಕಮ್ಮ ಅನಿತಾ ಅನುಮಾನ ವ್ಯಕ್ತಪಡಿಸಿದ್ದಾರೆ.