ಬೆಂಗಳೂರು: ಬೇಸಿಗೆ ರಜೆಯನ್ನು ಕೇವಲ ಆಟಕ್ಕಷ್ಟೇ ಸೀಮಿತಗೊಳಿಸದೆ, ತಮ್ಮ ಕಲ್ಪನಾ ಲೋಕದ ಕಥೆಗಳಿಗೆ ಅನಿಮೇಷನ್ ರೂಪ ನೀಡಿದ ಪುಟಾಣಿ ವಿಜ್ಞಾನಿಗಳು ಮತ್ತು ಕಲಾವಿದರ ಶ್ರಮಕ್ಕೆ ಶನಿವಾರ ರಾತ್ರಿ ಸಾಕ್ಷಿಯಾಯಿತು. ಪರಮ್ ಫೌಂಡೇಶನ್ ಆಯೋಜಿಸಿದ್ದ ‘ಸ್ಟಾಪ್ ಮೋಷನ್ ಅನಿಮೇಷನ್’ ಬೇಸಿಗೆ ಶಿಬಿರವು ಮೇ 9ರಂದು ಜಯನಗರದ ‘ಯುವಪಥ’ದ ವಿವೇಕ್ ಸಭಾಂಗಣದಲ್ಲಿ ಅದ್ಧೂರಿಯಾಗಿ ಮುಕ್ತಾಯವಾಯಿತು.
ಏಪ್ರಿಲ್ 20ರಿಂದ ಆರಂಭವಾದ ಈ ಶಿಬಿರವು ಒಟ್ಟು ಮೂರು ವಾರಗಳ ಕಾಲ ನಡೆಯಿತು. 6ರಿಂದ 16 ವರ್ಷದವರೆಗಿನ ಮಕ್ಕಳು ಎರಡು ಪ್ರತ್ಯೇಕ ಹಂತಗಳಲ್ಲಿ ಅನಿಮೇಷನ್‌ನ ಅತೀ ಸೂಕ್ಷ್ಮ ತಂತ್ರಗಳನ್ನು ಕರಗತ ಮಾಡಿಕೊಂಡರು. ಮೊದಲ ವಾರದಲ್ಲಿ ಅನಿಮೇಷನ್‌ನ ಮೂಲ ತತ್ವಗಳಾದ ಫ್ಲಿಪ್‌ಬುಕ್ ಮತ್ತು ಜೂಯೆಟ್ರೋಪ್‌ಗಳ ಮೂಲಕ ಚಿತ್ರಕ್ಕೆ ಚಲನೆ ನೀಡುವ ಕಲೆ ಅಭ್ಯಸಿಸಿದರೆ, ನಂತರದ ದಿನಗಳಲ್ಲಿ ತಾವೇ ಸ್ವತಃ 'ಡಿಐವೈ (DIY) ಸ್ಟುಡಿಯೋ' ನಿರ್ಮಿಸಿ ಸ್ಮಾರ್ಟ್‌ಫೋನ್ ಬಳಸಿ ವೃತ್ತಿಪರ ಗುಣಮಟ್ಟದ ಕಿರುಚಿತ್ರಗಳನ್ನು ತಯಾರಿಸಿದರು. ಕೇವಲ ತಾಂತ್ರಿಕತೆಯಷ್ಟೇ ಅಲ್ಲದೆ, ಕಥೆಯ ಸ್ಟೋರಿಬೋರ್ಡಿಂಗ್ ಸಿದ್ಧಪಡಿಸುವುದು, ಪಾತ್ರಗಳಿಗೆ ಧ್ವನಿ ಸಂಯೋಜನೆ ಮಾಡುವುದು ಹಾಗೂ ನೂರಾರು ಫ್ರೇಮ್‌ಗಳನ್ನು ಒಟ್ಟುಗೂಡಿಸಿ ಸಂಕಲಿಸುವ (Editing) ಮೂಲಕ ಒಂದು ಕಲ್ಪನೆಗೆ ಪರಿಪೂರ್ಣ ಸಿನಿಮಾ ರೂಪ ನೀಡುವ ಕೌಶಲವನ್ನು ಮಕ್ಕಳು ಇಲ್ಲಿ ಮೈಗೂಡಿಸಿಕೊಂಡರು.

ಸಿನಿಮಾ ದಿಗ್ಗಜರ ಮಾರ್ಗದರ್ಶನ
ಈ ಶಿಬಿರದ ವಿಶೇಷತೆಯೆಂದರೆ ಚಿತ್ರರಂಗದ ಖ್ಯಾತನಾಮರು ಮಕ್ಕಳಿಗೆ ನೇರವಾಗಿ ಪಾಠ ಮಾಡಿದ್ದು. ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಸಿನಿಮಾದಲ್ಲಿ ಶಬ್ದ ಮತ್ತು ಭಾವನೆಗಳ (Sound & Mood) ಮಹತ್ವವನ್ನು ತಿಳಿಸಿಕೊಟ್ಟರೆ, ಗಾಯಕಿ ಎಂ.ಡಿ. ಪಲ್ಲವಿ ಮತ್ತು ಶ್ವೇತಾ ಅವರು ಪಾತ್ರಗಳಿಗೆ ಜೀವ ತುಂಬುವ ಧ್ವನಿ ಸಂಯೋಜನೆಯ ಬಗ್ಗೆ ತರಬೇತಿ ನೀಡಿದರು. ನಿರ್ದೇಶಕ ಕಾರ್ತಿಕ್ ಸರಗೂರು ದೃಶ್ಯಕಾವ್ಯದ ಬಗ್ಗೆ ಹಾಗೂ ಸಿದ್ಧಾರ್ಥ್ ಭರತ್ ಕಲೆ ಮತ್ತು ವಿಜ್ಞಾನದ ಸಮಾಗಮದ ಬಗ್ಗೆ ಮಕ್ಕಳಿಗೆ ಪ್ರೇರಣೆ ನೀಡಿದರು.

ಕಿರುಚಿತ್ರಗಳ ಪ್ರದರ್ಶನ
ಶನಿವಾರ ನಡೆದ 'ಸ್ಟಾಪ್ ಮೋಷನ್ ಶೋಕೇಸ್-2026' ಕಾರ್ಯಕ್ರಮದಲ್ಲಿ ಸುಮಾರು 150 ರಿಂದ 200 ಪ್ರೇಕ್ಷಕರ ಸಮ್ಮುಖದಲ್ಲಿ ಮಕ್ಕಳು ಸಿದ್ಧಪಡಿಸಿದ ಚಿತ್ರಗಳು ಪ್ರದರ್ಶನಗೊಂಡವು. ಹಳೆಯ ಕಾಲದ ಅನಿಮೇಷನ್ ತಂತ್ರಗಳಾದ ಜೂಯೆಟ್ರೋಪ್ (Zoetrope) ಮತ್ತು ಫ್ಲಿಪ್‌ಬುಕ್‌ಗಳನ್ನು ಬಳಸಿ ಚಿತ್ರಕ್ಕೆ ವೇಗ ನೀಡುವ ಕಲೆಯನ್ನು ಮಕ್ಕಳು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಪಂಚತಂತ್ರದ ಹಳೆಯ ಕಥೆಗಳಿಗೆ ಆಧುನಿಕ ಸಮಸ್ಯೆಗಳಾದ ‘ತಪ್ಪು ಮಾಹಿತಿ’ (Disinformation) ಮತ್ತು ‘ಜಲ ಮಾಲಿನ್ಯ’ದಂತಹ ವಿಷಯಗಳನ್ನು ಬೆರೆಸಿ ಮಕ್ಕಳು ನೀಡಿದ ಟ್ವಿಸ್ಟ್‌ಗಳಿಗೆ ಸಭಿಕರು ಮಾರುಹೋದರು. ಕೇವಲ ಡಿಜಿಟಲ್ ತಂತ್ರಜ್ಞಾನವಷ್ಟೇ ಅಲ್ಲದೆ, ಕ್ಲೇ ಅನಿಮೇಷನ್ (Clay Animation) ಮತ್ತು ಪಿಕ್ಸಲೇಷನ್ (Pixilation) ನಂತಹ ಸಂಕೀರ್ಣ ಪ್ರಕ್ರಿಯೆಗಳ ಮೂಲಕ ಮಕ್ಕಳು ಸೃಜಿಸಿದ ಕಲ್ಪನಾ ಲೋಕ ಬೃಹತ್ ಪರದೆಯ ಮೇಲೆ ಅದ್ಭುತವಾಗಿ ಮೂಡಿಬಂತು.

ಪ್ರಮಾಣಪತ್ರ ವಿತರಣೆ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಹರ್ಪಟಾಲಜಿಸ್ಟ್ ಹಾಗೂ ಕಳಿಂಗ ಫೌಂಡೇಶನ್ ಸಂಸ್ಥಾಪಕ ಡಾ. ಪಿ. ಗೌರಿ ಶಂಕರ್ ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, "ಮಕ್ಕಳಲ್ಲಿರುವ ಸೃಜನಶೀಲತೆಯನ್ನು ತಂತ್ರಜ್ಞಾನದ ಜತೆ ಬೆರೆಸಿ ಕಥೆ ಹೇಳುವ ಈ ಪ್ರಯತ್ನ ನಿಜಕ್ಕೂ ಅದ್ಭುತ" ಎಂದು ಶ್ಲಾಘಿಸಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ತಾವೇ ನಿರ್ಮಿಸಿದ ಡಿಐವೈ ( DIY ) ಸ್ಟುಡಿಯೋ ಮತ್ತು ಅನಿಮೇಷನ್ ಕಿರುಚಿತ್ರಗಳನ್ನು ಪೋಷಕರಿಗೆ ತೋರಿಸಿ ಸಂಭ್ರಮಿಸಿದರು.
'ಸ್ವಸ್ಥ್ ಭಾರತ್': ದೇಶಕ್ಕೆ ಒಂದೇ ಆರೋಗ್ಯ ಪೋರ್ಟಲ್; ಏನಿದರ ಉಪಯೋಗ? ಕಾರ್ಯ ನಿರ್ವಹಣೆ ಹೇಗೆ?
ಕಿರುಚಿತ್ರಗಳ ಪ್ರದರ್ಶನ
ಶನಿವಾರ ನಡೆದ 'ಸ್ಟಾಪ್ ಮೋಷನ್ ಶೋಕೇಸ್-2026' ಕಾರ್ಯಕ್ರಮದಲ್ಲಿ ಮಕ್ಕಳು ತಯಾರಿಸಿದ ಮೂಲ ಅನಿಮೇಷನ್ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪಂಚತಂತ್ರದ ಹಳೆಯ ಕಥೆಗಳಿಗೆ ಇಂದಿನ ಆಧುನಿಕ ಸಮಸ್ಯೆಗಳಾದ ‘ತಪ್ಪು ಮಾಹಿತಿ’ (Disinformation) ಮತ್ತು ‘ಜಲ ಮಾಲಿನ್ಯ’ದಂತಹ ವಿಷಯಗಳನ್ನು ಬೆರೆಸಿ ಮಕ್ಕಳು ನೀಡಿದ ಟ್ವಿಸ್ಟ್‌ಗಳಿಗೆ ಪ್ರೇಕ್ಷಕರು ಮಾರುಹೋದರು.