ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Grafton Automotives: ಬೆಂಗಳೂರಿನ ಗಿರಿನಗರದಲ್ಲಿ ಗ್ರಾಫ್ಟನ್ ಆಟೋಮೋಟಿವ್ಸ್ ಶುಭಾರಂಭ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಮತ್ತು ಪದವಿ ವ್ಯಾಸಂಗ ಮುಗಿಸಿದ ಗುರುದೀಪ ಭಟ್ ಧೋರಣಗಿರಿ ಬೆಂಗಳೂರಿನಲ್ಲಿ ಒಂದೆರಡು ವರ್ಷ ಪಿಪಿಫ್ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿ ಪ್ರಸ್ತುತ ಅದೇ ಕ್ಷೇತ್ರದಲ್ಲಿ ಸ್ವಂತ ಆಟೋಮೋಟಿವ್ ಸ್ಟುಡಿಯೋ ಆರಂಭಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನ ಗಿರಿನಗರದಲ್ಲಿ ಗ್ರಾಫ್ಟನ್ ಆಟೋಮೋಟಿವ್ಸ್ ಡಿಟೇಲಿಂಗ್ ಸ್ಟುಡಿಯೋ (Grafton Automotives) ಶುಭಾರಂಭಗೊಂಡಿದೆ. ಧೋರಣಗಿರಿಯ ಗುರುದೀಪ ಮೋಹನ ಭಟ್ ಅವರು ಆರಂಭಿಸಿರುವ ಸ್ಟುಡಿಯೋವನ್ನು ಆಗಸ್ಟ್ 20ರಂದು ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಮಣ್ಯ ಅವರು ಉದ್ಘಾಟಿಸಿ, ವಿನೂತನ, ವಿಭಿನ್ನ ಕ್ಷೇತ್ರದಲ್ಲಿ ಉದ್ಯಮ ಆರಂಭಿಸುವುದನ್ನು ಶ್ಲಾಘಿಸಿ, ಸ್ಟುಡಿಯೋದ ಯಶಸ್ಸಿಗೆ ಶುಭಹಾರೈಸಿದ್ದಾರೆ.

ಗ್ರಾಫ್ಟನ್ ಆಟೋಮೋಟಿವ್ಸ್, ಕಾರುಗಳಿಗೆ ಪೇಂಟ್ ಪ್ರೊಟೆಕ್ಷನ್ ಫಿಲಂ (ಪಿಪಿಎಫ್) ಅಳವಡಿಸುವ ಸ್ಟುಡಿಯೋ ಆಗಿದೆ. ಉದ್ಯೋಗ, ಉದ್ಯಮ ವಲಯಗಳಲ್ಲಿ ದುಡಿಮೆಗೆ ಹತ್ತಾರು ದಾರಿಗಳು. ಕಲಿಕೆ, ಆಸಕ್ತಿ, ಅನುಭವ, ಪರಿಣಿತಿ ಇವೆಲ್ಲವೂ ಆ ದುಡಿಮೆಗೆ ಪೂರಕ. ಇಂದಿನ ಯುವಸಮೂಹದಲ್ಲಿ ಕೆಲವರು ಉದ್ಯೋಗವೊಂದನ್ನೇ ಅವಲಂಬಿಸದೇ ಹೊಸ ಉದ್ಯಮಗಳನ್ನ ಆರಂಭಗೊಳಿಸುವ ಯೋಚನೆಯತ್ತ ಮುಖ ಮಾಡಿರುವುದು ಹಾಗೂ ಆ ದಿಶೆಯಲ್ಲಿ ಮುನ್ನಡೆಯುತ್ತಿರುವುದು ಅನೇಕ ದೃಷ್ಟಿಯಿಂದ ಹೆಮ್ಮೆಯ ವಿಚಾರ. ಇಂತಹ ಒಂದು ಸ್ವಉದ್ಯಮದ ಹಾದಿಯಲ್ಲಿ ಧೋರಣಗಿರಿಯ ಗುರುದೀಪ ಮೋಹನ ಭಟ್ ಹೆಜ್ಜೆ ಇಡುತ್ತಿದ್ದಾರೆ.

Grafton Automotives (2)

ಕಾರ್ಯಕ್ರಮದಲ್ಲಿ ಸಾಮಾಜಿಕ ಮುಖಂಡರಾದ ಕಾರ್ತಿಕ್ ಶ್ರೀವತ್ಸ, ಗ್ರಾಫ್ಟನ್ ಮಾಲೀಕರಾದ ಗುರುದೀಪ ಭಟ್ ಧೋರಣಗಿರಿ ಹಾಗೂ ಮಾಲೀಕರ ಕುಟುಂಬದವರಾದ ಮೋಹನ ಭಟ್, ದಾಕ್ಷಾಯಿಣಿ ಭಟ್, ರಾಮಕೃಷ್ಣ ಭಟ್, ದೀಪ್ತಿ ಭಟ್ ಮುಂತಾದವರು ಉಪಸ್ಥಿತರಿದ್ದರು.

ಆಸಕ್ತಿಯ ಕ್ಷೇತ್ರದಲ್ಲೇ ಸ್ವಂತ ಉದ್ಯಮ ಆರಂಭಿಸಿದ ಗುರುದೀಪ ಭಟ್ ಧೋರಣಗಿರಿ

ಶಿರಸಿಯಲ್ಲಿ ಪ್ರಾಥಮಿಕ ಮತ್ತು ಪದವಿ ವ್ಯಾಸಂಗ ಮುಗಿಸಿದ ಗುರುದೀಪ ಭಟ್ ಧೋರಣಗಿರಿ ಬೆಂಗಳೂರಿನಲ್ಲಿ ಒಂದೆರಡು ವರ್ಷ ಪಿಪಿಫ್ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿ ಪ್ರಸ್ತುತ ಅದೇ ಕ್ಷೇತ್ರದಲ್ಲಿ ಸ್ವಂತ ಆಟೋಮೋಟಿವ್ ಸ್ಟುಡಿಯೋ ಆರಂಭಿಸಿದ್ದಾರೆ.

ಮೋಹನ ಭಟ್ ಧೋರಣಗಿರಿ ಮತ್ತು ದಾಕ್ಷಾಯಿಣಿ ಭಟ್ ಶಿಕ್ಷಕ ದಂಪತಿಗಳ ಪುತ್ರನಾಗಿರುವ ಗುರುದೀಪ ಭಟ್ ಧೋರಣಗಿರಿ ಸಣ್ಣ ವಯಸ್ಸಿನಿಂದಲೇ ಕಾರು ಮತ್ತು ಆಟೋಮೋಟಿವ್ ವಿಭಾಗದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಆಸಕ್ತಿ ಇರುವ ಕ್ಷೇತ್ರವನ್ನೇ ತಮ್ಮ ಉದ್ಯಮ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡು 23ನೇ ವಯಸ್ಸಿನಲ್ಲೇ ಸ್ವಂತ ಉದ್ಯಮ ಆರಂಭಿಸಿ ಮುನ್ನಡೆಯುತ್ತಿರುವದು ಹೆಮ್ಮೆಯ ಸಂಗತಿ ಎಂದು ಮೋಹನ ಭಟ್ ಧೋರಣಗಿರಿ ತಮ್ಮ ಸಂತಸ ವ್ಯಕ್ತಪಡಿಸಿದರು.

Grafton Automotives (3)

ಲಕ್ಷುರಿ ಕಾರುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಪಿಪಿಎಫ್ ಅಳವಡಿಕೆ ಬಜೆಟ್ ಕಾರುಗಳಿಗೂ ವಿಸ್ತಾರಗೊಂಡಿದೆ. ಕಾರಿನ ಹೊರಭಾಗದ ಸುಲಭ ನಿರ್ವಹಣೆ ಮತ್ತು ಕಾರಿನ ಹೊರಭಾಗದ ಮೂಲ ಗುಣಮಟ್ಟ ಕಾಯ್ದುಕೊಳ್ಳಲು ಈ ಪಿಪಿಎಫ್ ಅಳವಡಿಕೆ ಅತ್ಯಗತ್ಯ ಎಂದು ಗ್ರಾಫ್ಟನ್ ಆಟೋಮೋಟಿವ್ ಮಾಲೀಕ ಗುರುದೀಪ ಭಟ್ ಧೋರಣಗಿರಿ ಮಾಹಿತಿ ಹಂಚಿಕೊಂಡರು. ಕಾರಿನ ಬ್ರ್ಯಾಂಡ್ ಆಧಾರದ ಮೇಲೆ ಹಾಗೂ ವಾರಂಟಿಯ ಆಧರಿಸಿ ಹಲವಾರು ವರ್ಗದ ಪಿಪಿಎಫ್ ಮಾದರಿಗಳು ಲಭ್ಯವಿರುವುದರ ಬಗ್ಗೆ ಗ್ರಾಹಕರಿಗೆ ಮೂಲಭೂತ ಮಾಹಿತಿ ನೀಡಿ ನಂತರ ಆಯ್ಕೆಯನ್ನು ಗ್ರಾಹಕರಿಗೆ ನೀಡುವುದು ತಮ್ಮ ಗ್ರಾಫ್ಟನ್ ಸ್ಟುಡಿಯೋದ ವೈಶಿಷ್ಟತೆ ಎಂದರು.

ಬೆಂಗಳೂರಿನ ಗಿರಿನಗರ ವ್ಯಾಪ್ತಿಯಲ್ಲಿ ಯಾವುದೇ ಪಿಪಿಎಫ್ ಸ್ಟುಡಿಯೋ ಇಲ್ಲದೇ ಇರುವುದು ಇಲ್ಲಿನ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ತಮ್ಮ ಸ್ವಉದ್ಯಮದ ಆರಂಭಕ್ಕೆ ಬೆನ್ನುಲುಬಾಗಿ ನಿಂತ ಪಾಲಕರ ಹಾಗೂ ಸಹೋದರ ರಾಮಕೃಷ್ಣ ಭಟ್ ಮತ್ತು ದೀಪ್ತಿ ಭಟ್ ದಂಪತಿಗಳ ಸಹಕಾರವನ್ನು ಶ್ಲಾಘಿಸಿದರು.