ಬೆಂಗಳೂರು, ಏ.3: ಆಸ್ಟ್ರೇಲಿಯಾದ ಪ್ರತಿಷ್ಠಿತ ಕಂಪನಿ ಪ್ರಾಕ್‌ಗೆ ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉದ್ಯೋಗಿಗಳಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಬರುವ ದಿನಗಳಲ್ಲಿ ಹಲವು ದೇಶಗಳ ಅತ್ಯುತ್ತಮ ಕಂಪನಿಗಳಲ್ಲಿ ಜಿಟಿಟಿಸಿ (GTTC) ವಿದ್ಯಾರ್ಥಿಗಳು ಉದ್ಯೋಗ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಬಿ ಪೂಜಾರಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ಯೋಗದ ಆಫರ್ ಲೆಟರ್ ನೀಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಜಾಗತಿಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು NEPEAN / PROK ಜತೆ ಕೈಜೋಡಿಸಿರುವುದು ನಮಗೆ ಹೆಮ್ಮೆಯ ವಿಷಯ. ಇದು GTTC ಯ ಉದ್ಯಮ ಸಂಬಂಧಿತ, ಗುಣಮಟ್ಟದ ತಾಂತ್ರಿಕ ತರಬೇತಿ ವ್ಯವಸ್ಥೆಯ ಪ್ರತಿಬಿಂಬವಾಗಿದೆ. ಜಿಟಿಟಿಸಿ ಅಭ್ಯರ್ಥಿಗಳ ಯಶಸ್ವಿ ನೇಮಕಾತಿ, ನಮ್ಮ ತರಬೇತಿ ವ್ಯವಸ್ಥೆಯ ಜಾಗತಿಕ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಸಹಭಾಗಿತ್ವಗಳನ್ನು ಮತ್ತಷ್ಟು ಬಲಪಡಿಸಿ, ಕರ್ನಾಟಕದ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಉದ್ದೇಶ ಎಂದರು.
PROK ಸಂಸ್ಥೆಯ Operational Excellence ವಿಭಾಗದ Country Manager – India ಆಗಿರುವ ಅರುಣ್ ಬೆಂಗಳೂರು ಮಾತನಾಡಿ, ʼGTTC ಜತೆಗಿನ ಈ ಸಹಕಾರವು ಭವಿಷ್ಯದ ಜಾಗತಿಕ ಉದ್ಯೋಗ ಶಕ್ತಿಯನ್ನು ಸೃಷ್ಟಿಸುವ ನಮ್ಮ ಬದ್ಧತೆಗೆ ಉದಾಹರಣೆಯಾಗಿದೆ. GTTC ಯ ಅತ್ಯಾಧುನಿಕ CNC ಮೂಲಸೌಕರ್ಯ ಮತ್ತು ತಾಂತ್ರಿಕ ಬೆಂಬಲದಿಂದ, ನಮ್ಮ ಕಾರ್ಯಾಚರಣೆ ಮತ್ತು ಗುಣಮಟ್ಟದ ಮಾನದಂಡಗಳಿಗೆ ಅರ್ಹರಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಅವರು ಪ್ರೊಕ್ ಸಂಸ್ಥೆಯ ಪರಿಸರಕ್ಕೆ ಸಲುಭವಾಗಿ ಹೊಂದಿಕೊಳ್ಳುವರು ಎಂಬ ವಿಶ್ವಾಸವಿದೆ. ಈ ಸಹಭಾಗಿತ್ವವು ನಮ್ಮ ಜಾಗತಿಕ ಕಾರ್ಯಾಚರಣೆಗಳಿಗೆ ಮತ್ತಷ್ಟು ಪ್ರತಿಭಾನ್ವಿತ ಅಭ್ಯರ್ಥಿಗಳ ಆಯ್ಕೆಗೆ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಈ ಸಹಕಾರವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆʼ ಎಂದರು.
ಆಸ್ಟ್ರೇಲಿಯಾದ NEPEAN ಸಮೂಹ ಸಂಸ್ಥೆಯು GTTC, ಬೆಂಗಳೂರಿನಲ್ಲಿ ಸಮಗ್ರ ನೇಮಕಾತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿ ಎಂಟು ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿದೆ. ಈ ಪ್ರಕ್ರಿಯೆಯಲ್ಲಿ GTTC ಯ ತರಬೇತಿ ಮತ್ತು ಪ್ಲೇಸ್ಮೆಂಟ್ ತಂಡಗಳ ಸಮನ್ವಯ ಪ್ರಮುಖ ಪಾತ್ರವಹಿಸಿತು. GTTC ತನ್ನ ಅತ್ಯಾಧುನಿಕ ಮೂಲಸೌಕರ್ಯಗಳಾದ CNC ಯಂತ್ರಗಳು, ನಿಖರ ತಯಾರಿಕಾ ಸಾಧನಗಳು, ಆಧುನಿಕ ಟೂಲ್ ರೂಂ ಸೌಲಭ್ಯಗಳು ಹಾಗೂ ಸುಸಜ್ಜಿತ ಪ್ರಯೋಗಾಲಯಗಳನ್ನು ಬಳಸಿಕೊಂಡು, ಅನುಭವಿ ಅಧ್ಯಾಪಕರು ಮತ್ತು ತಾಂತ್ರಿಕ ಸಿಬ್ಬಂದಿಯ ಸಹಕಾರದೊಂದಿಗೆ ಆಯ್ಕೆ ಪ್ರಕ್ರಿಯೆಗೆ ನೆರವಾಯಿತು.
GTTC ವಿಶ್ವಮಟ್ಟದ ತಾಂತ್ರಿಕ ತರಬೇತಿ ಸಂಸ್ಥೆಯಾಗಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದು, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಜಾಗತಿಕ ಉತ್ಪಾದನಾ ಮಾನದಂಡಗಳಿಗೆ ಹೊಂದಿಕೊಳ್ಳುವ ತರಬೇತಿ ವ್ಯವಸ್ಥೆಯನ್ನು ಹೊಂದಿದೆ. ಇದರಿಂದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಉದ್ಯೋಗ ಕ್ಷೇತ್ರದ ಅಗತ್ಯತೆಗಳಿಗೆ ತಕ್ಕಂತೆ ತಯಾರಾಗಲು ನೆರವಾಗಿದೆ.
ಈ ಜಂಟಿ ಪ್ರಯತ್ನದ ಮೂಲಕ ಅಭ್ಯರ್ಥಿಗಳನ್ನು ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಿ, ಅಂತಾರಾಷ್ಟ್ರೀಯ ಕೈಗಾರಿಕಾ ಮಾನದಂಡಗಳಿಗೆ ತಕ್ಕಂತೆ ಸಿದ್ಧಗೊಳಿಸಲಾಗಿದೆ. ಸಮಗ್ರ ಮೌಲ್ಯಮಾಪನ ಪ್ರಕ್ರಿಯೆಯ ನಂತರ, ಎಂಟು ಮಂದಿ ಅಭ್ಯರ್ಥಿಗಳನ್ನು ಆಸ್ಟ್ರೇಲಿಯಾದ ಸಿಡ್ನಿಯ PROK Ingleburn ಉತ್ಪಾದನಾ ಘಟಕದಲ್ಲಿ ಉದ್ಯೋಗಕ್ಕಾಗಿ ಆಯ್ಕೆ ಮಾಡಲಾಗಿದೆ.
Water4Life: ಭಾರತದ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್‌ನಿಂದ ಜನ ಚಳವಳಿ
ಇದು ಕೌಶಲ್ಯಪೂರ್ಣ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಜಿಟಿಟಿಸಿ ಮತ್ತು ಉನ್ನತ ಮಟ್ಟದ ಪ್ರತಿಭೆಗಳನ್ನ ಹುಡುಕಿ ತನ್ನ ಸಂಸ್ಥೆಗೆ ಆಯ್ಕೆ ಮಾಡಿಕೊಳ್ಳುವ NEPEAN ಸಂಸ್ಥೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಉದ್ಯೋಗ ಮಿತ್ರದ ಜಂಟಿ ನಿರ್ದೇಶಕಿ ನಂದಿನಿ, ಜಿಟಿಟಿಸಿ ಜನರಲ್ ಮ್ಯಾನೇಜರ್ ರಮೇಶ ಎನ್. ಆಸ್ಟ್ರೇಲಿಯಾ ಸರ್ಕಾರದ ವ್ಯಾಪಾರ ಮತ್ತು ಹೂಡಿಕೆ ಆಯುಕ್ತರಾದ ಮರೆಸ್ಪೆನ್ಸ್ ಉಪಸ್ಥಿತರಿದ್ದರು.