#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಪೋಷಕರ ಮಹತ್ವ ಮತ್ತು ಹಣಕಾಸು ಯೋಜನೆಯ ಮಹತ್ವ ಸಾರಿದ ಹೆಚ್‌ಡಿಎಫ್‌ಸಿ ಲೈಫ್‌ ನ ಹೊಸ ಜಾಹೀರಾತು ಅಭಿಯಾನ

ಹೊಸ ಅಭಿಯಾನವು ಹೊಸ ರೀತಿಯಲ್ಲಿ ಮೂಡಿ ಬಂದಿದೆ. ನಿರಂತರವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಪೋಷಕರ ಮಾರ್ಗ ದರ್ಶನ ಹೇಗೆ ಮಕ್ಕಳಿಗೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಸಾರುತ್ತದೆ. ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಅನಿಶ್ಚಿತತೆಯ ಸವಾಲುಗಳನ್ನು ನಿರ್ವ ಹಿಸಲು ಅವರಿಗೆ ನೆರವು ಒದಗಿಸುತ್ತದೆ

ಪೋಷಕರು ಕಲಿಸುವ ಮೌಲ್ಯಗಳು ಮಕ್ಕಳ ಜೀವನದ ಅಡಿಪಾಯವಾಗುತ್ತವೆ: ವಿಶಾಲ್ ಸುಭರ್ವಾಲ್

Profile Ashok Nayak Jan 25, 2025 11:41 PM

ಬೆಂಗಳೂರು: ಭಾರತದ ಪ್ರಮುಖ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾಗಿರುವ ಹೆಚ್‌ಡಿಎಫ್‌ಸಿ ಲೈಫ್ ಕಂಪನಿಯು ಕುಟುಂಬಗಳನ್ನು ಉತ್ತಮವಾಗಿ ರೂಪಿಸುವಲ್ಲಿ ಮತ್ತು ಕುಟುಂಬಕ್ಕೆ ಉತ್ತಮ ಭವಿಷ್ಯ ಒದಗಿಸುವಲ್ಲಿ ಪೋಷಕರ ಮಹತ್ವವನ್ನು ಸಾರುವ ಹೊಸ ಜಾಹೀರಾತು ಅಭಿಯಾನವನ್ನು ಪ್ರಾರಂಭಿಸಿದೆ. ಮನಸ್ಸು ಮುಟ್ಟುವ ಕತೆಯನ್ನು ಹೊಂದಿರುವ ಈ ಜಾಹೀರಾತು ಪ್ರೀತಿ, ಗೌರವ ಮತ್ತು ಸ್ವಾತಂತ್ರ್ಯ ಹೇಗೆ ಉತ್ತಮ ಬಾಂಧವ್ಯವನ್ನು ರೂಪಿಸಬಲ್ಲವು ಎಂಬುದನ್ನು ಸಾರಿ ಹೇಳುತ್ತದೆ.

ಕಂಪನಿಯು ಎಲ್ಲರಿಗೂ ತಾಕುವ ಮತ್ತು ಸ್ಫೂರ್ತಿ ಒದಗಿಸುವ ಜಾಹೀರಾತು ಚಿತ್ರಗಳನ್ನು ನಿರ್ಮಾ ಣ ಮಾಡುವ ವಿಚಾರದಲ್ಲಿ ಖ್ಯಾತಿ ಗಳಿಸಿದೆ ಮತ್ತು ಈ ಹೊಸ ಅಭಿಯಾನವು ಹೊಸ ರೀತಿಯಲ್ಲಿ ಮೂಡಿ ಬಂದಿದೆ. ನಿರಂತರವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಪೋಷಕರ ಮಾರ್ಗ ದರ್ಶನ ಹೇಗೆ ಮಕ್ಕಳಿಗೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಸಾರುತ್ತದೆ. ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಅನಿಶ್ಚಿತತೆಯ ಸವಾಲುಗಳನ್ನು ನಿರ್ವಹಿಸಲು ಅವರಿಗೆ ನೆರವು ಒದಗಿಸು ತ್ತದೆ.

ಇದನ್ನೂ ಓದಿ: Yagati Raghu Nadig Column: ಸುದ್ದಿಗಿಷ್ಟು ಒಗ್ಗರಣೆ

ಈ ಜಾಹೀರಾತು ಇಬ್ಬರು ಸಹೋದರರ ಕಥೆಯನ್ನು ಹೊಂದಿದ್ದು, ಅವರ ಬಾಂಧವ್ಯವನ್ನು ಕಟ್ಟಿ ಕೊಡುತ್ತದೆ. ಅವರು ಅವರ ಬಂಧವನ್ನು ಹಂಚಿಕೊಳ್ಳುತ್ತಲೇ ಅಂತಿಮವಾಗಿ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸೂಕ್ತವಾದ ಆರ್ಥಿಕ ಯೋಜನೆ ಹೊಂದುವುದು ಬಹಳ ಮುಖ್ಯ ಎಂದು ಅರಿತುಕೊಳ್ಳುವ ಮೂಲಕ ಈ ಜಾಹೀರಾತು ಕೊನೆಗೊಳ್ಳುತ್ತದೆ.

ಈ ಜಾಹೀರಾತು ಕುರಿತು ಮಾತನಾಡಿದ ಹೆಚ್‌ಡಿಎಫ್‌ಸಿ ಲೈಫ್‌ ನ ಗ್ರೂಪ್ ಹೆಡ್ ಸ್ಟ್ರಾಟಜಿ ಮತ್ತು ಚೀಫ್ ಮಾರ್ಕೆಟಿಂಗ್ ಆಫೀಸರ್ ವಿಶಾಲ್ ಸುಭರ್ವಾಲ್ ಅವರು, "ಪೋಷಕರು ತಮ್ಮ ಮಕ್ಕಳ ಮೊದಲ ಗುರುಗಳಾಗಿರುತ್ತಾರೆ ಮತ್ತು ಮಕ್ಕಳ ರೋಲ್ ಮಾಡೆಲ್ ಗಳಾಗಿರುತ್ತಾರೆ. ಪೋಷಕರು ಕಲಿಸುವ ಮೌಲ್ಯಗಳು ಮಕ್ಕಳ ಜೀವನದ ಅಡಿಪಾಯವಾಗುತ್ತವೆ. ಈ ಜಾಹೀರಾತು ಅಭಿಯಾನವು ಈ ಮೌಲ್ಯಗಳು ಮತ್ತು ಆರ್ಥಿಕ ಯೋಜನೆ ಒಟ್ಟುಗೂಡಿದಾಗ ಅದು ಹೇಗೆ ಕೌಟುಂಬಿಕ ಭದ್ರತೆಗೆ ನೆರವಾಗುತ್ತದೆ ಎಂಬುದನ್ನು ಸಾರುತ್ತದೆ” ಎಂದು ಹೇಳಿದರು.

ಲಿಯೋ ಬರ್ನೆಟ್ ದಕ್ಷಿಣ ಏಷ್ಯಾ ವಿಭಾಗದ ಚೀಫ್ ಕ್ರಿಯೇಟಿವ್ ಆಫೀಸರ್ ವಿಕ್ರಮ್ ಪಾಂಡೆ ಅವರು, “ಪ್ರತೀ ಭಾರತೀಯ ಕುಟುಂಬ ಕೂಡ ಗಟ್ಟಿಯಾದ ಕೌಟುಂಬಿಕ ಮೌಲ್ಯಗಳನ್ನು ಅಡಿಪಾ ಯವಾಗಿ ಹೊಂದಿರುತ್ತದೆ. ಅದಕ್ಕೆ ಪೂರಕವಾಗಿ ಈ ಅಭಿಯಾನವು ಇಬ್ಬರು ಸಹೋದರರ ಕತೆಯನ್ನು ಹೊಂದಿದ್ದು, ಕೌಟುಂಬಿಕ ಮೌಲ್ಯಗಳು ಹೇಗೆ ಕಟುಂಬವನ್ನು ಒಟ್ಟಿಗೆ ಇರಿಸುತ್ತವೆ ಎಂಬುದನ್ನು ಹೇಳುವ ಮೂಲಕ ಪ್ರೇಕ್ಷಕರನ್ನು ಭಾವನಾತ್ಮಕಗೊಳಿಸುತ್ತದೆ. ಜೊತೆಗೆ ಈ ಬಾಂಧವ್ಯ ವು ಮುಂದಿನ ಪೀಳಿಗೆಗೆ ಹೇಗೆ ಉತ್ತಮ ಭವಿಷ್ಯವನ್ನು ಒದಗಿಸುತ್ತದೆ ಎಂಬುದನ್ನು ಕೂಡ ತೋರಿಸು ತ್ತದೆ” ಎಂದು ಹೇಳಿದರು.

ವಿಶೇಷವೆಂದರೆ ಈ ಜಾಹೀರಾತು ಚಿತ್ರದಲ್ಲಿ ಬಾಲಿವುಡ್ ನಿರ್ದೇಶಕ ಶೂಜಿತ್ ಸರ್ಕಾರ್ ಅವರು ನಿರ್ದೇಶನ ಮಾಡಿದ್ದಾರೆ.