ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

3 ತಿಂಗಳಿಂದ ಕೋಮಾದಲ್ಲಿ ಪುಟ್ಟ ಮಗು; ಕ್ಲೌಡ್‌ನೈನ್‌ ಆಸ್ಪತ್ರೆ ವಿರುದ್ಧ ತನಿಖೆಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಸೂಚನೆ

Cloud Nine Hospital Case: ನಾಗರಬಾವಿಯ ಕ್ಲೌಡ್‌ನೈನ್‌ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರು ಶನಿವಾರ ಭೇಟಿ ನೀಡಿ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಗುವಿನ ಈ ಸ್ಥಿತಿಗೆ ಆಸ್ಪತ್ರೆಯ ಮುಖ್ಯಸ್ಥರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಅನಸ್ತೇಶಿಯಾ ಕೊಟ್ಟ ವೈದ್ಯರ ವಿರುದ್ಧವೂ ಕ್ರಮ ಆಗಬೇಕು ಎಂದು ಸೂಚಿಸಿದ್ದಾರೆ.

ಬೆಂಗಳೂರು: ನಾಗರಬಾವಿ ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ (Cloud Nine Hospital Case) ವೈದ್ಯರ ಎಡವಟ್ಟಿನಿಂದ ಮೂರು ತಿಂಗಳಿಂದ ತಮ್ಮ ಮಗು ಕೋಮಾದಲ್ಲಿದೆ ಎಂದು ಆರೋಪಿಸಿ ಪೋಷಕರು ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಇದೀಗ ಆಸ್ಪತ್ರೆ ವಿರುದ್ಧ ತನಿಖೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.

ಆಸ್ಪತ್ರೆಗೆ ಆರೋಗ್ಯ ಸಚಿವರು ಶನಿವಾರ ಭೇಟಿ ನೀಡಿ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಗುವಿನ ಈ ಸ್ಥಿತಿಗೆ ಆಸ್ಪತ್ರೆಯ ಮುಖ್ಯಸ್ಥರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಅನಸ್ತೇಶಿಯಾ ಕೊಟ್ಟ ವೈದ್ಯರ ವಿರುದ್ಧವೂ ಕ್ರಮ ಆಗಬೇಕು. ಅಲ್ಲದೇ ಹೆಚ್ಚಿನ ತನಿಖೆ ನಡೆಸಿ ವರದಿ ನೀಡುವಂತೆ ಇಂದಿರಾಗಾಂಧಿ ಹಾಗೂ ನಿಮ್ಹಾನ್ಸ್ ತಜ್ಞ ವೈದ್ಯರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ಸೂಚನೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ವರದಿ ನೀಡುವಂತೆ ಆದೇಶ ನೀಡಿದ್ದಾರೆ.

ಅನಸ್ತೇಶಿಯಾ ಕೊಟ್ಟಿರುವ ವ್ಯಕ್ತಿ ಡಿಪ್ಲೊಮಾ (ಅನೆಸ್ತಿಯಾಲಜಿ) ಪದವೀಧರನಾಗಿದ್ದಾನೆ. ಮಕ್ಕಳಿಗೆ ಅನಸ್ತೇಶಿಯಾ ನೀಡಲು ಆತ ಸೂಕ್ತ ತರಬೇತಿ ಪಡೆದಿಲ್ಲ. ಹೀಗಾಗಿ ಇದರ ಸಂಪೂರ್ಣ ಜವಾಬ್ದಾರಿ ಆಸ್ಪತ್ರೆ ಮಾಲೀಕ ತೆಗೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.

ಆಸ್ಪತ್ರೆ ವಿರುದ್ಧದ ಆರೋಪ ಏನು?

ಕಿವಿ ಗಾಯದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕಟ್ಟೆ ದೊಡ್ಡಿ ಗ್ರಾಮದ ಸಂಪತ್ ಎಂಬುವವರ ಒಂದು ವರ್ಷದ ಮಗು ಶಯಾನ್‌ನನ್ನು ನಾಗರಬಾವಿ ಕ್ಲೌಡ್‌ನೈನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಕಳೆದ ಮೂರು ತಿಂಗಳಿಂದ ಮಗು ಕೋಮಾದಲ್ಲಿರುವಂತಾಗಿದೆ ಎಂಬುವುದು ಪೋಷಕರ ಆರೋಪವಾಗಿದೆ. ಇದೇ ವಿಚಾರವಾಗಿ ಮಗುವಿನ ಪೋಷಕರು ಆಸ್ಪತ್ರೆ ಮುಂದೆ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಬಳಿಕ ವೈದ್ಯರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೆಎಂಸಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ಸಿವಿ ರಾಮನ್ ಜನರಲ್ ಆಸ್ಪತ್ರೆಯ ಡಾ.ರಘುನಾಥ್ ನೇತೃತ್ವದ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿತ್ತು. ಭೇಟಿ ವೇಳೆ ಮೇಲ್ನೋಟಕ್ಕೆ ವೈದ್ಯರ ಲೋಪ ಪತ್ತೆಯಾಗಿದೆ ಎನ್ನಲಾಗಿತ್ತು.

Cloudnine Hospital Case: ಅನಸ್ತೇಶಿಯಾ ಕೊಟ್ಟು ನಿರ್ಲಕ್ಷ್ಯ; ಕೋಮಾಗೆ ಜಾರಿದ ಮಗುವಿನ ಜವಾಬ್ದಾರಿ ಕ್ಲೌಡ್ ನೈನ್ ಆಸ್ಪತ್ರೆಯೇ ಹೊರಬೇಕು ಎಂದು ಎಚ್‌ಡಿಕೆ ಆಗ್ರಹ

ಪೋಷಕರು ತಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ನಾಗರಬಾವಿ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಮಗುವಿನ ಸಂಬಂಧಿಕರು ಧರಣಿ ನಡೆಸುತ್ತಿದ್ದಾರೆ. ಜತೆಗೆ ಮಗುವಿಗೆ ಅನಸ್ತೇಶಿಯಾ ಕೊಟ್ಟಿರುವ ಡಿಪ್ಲೋಮಾ ಪದವಿ ಅನಸ್ತ್ಯಾಲಜಿಸ್ಟ್ ಡಾ.ಚರಣ್ ವಿರುದ್ಧ ಶಿಸ್ತುಕ್ರಮ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪ್ರಸ್ತುತ ಮಗು ಕೋಮಾದಲ್ಲಿದೆ. ಮಗು ಕೋಮಾಗೆ ಜಾರುತ್ತಿದ್ದಂತೆಯೇ ವೈದ್ಯರ ಎಟವಟ್ಟು ಬಹಿರಂಗ ಆಗಿದೆ. ಈ ಹಿನ್ನೆಲೆಯಲ್ಲಿ ಮಗುವಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.