ಮನೆ ಖರೀದಿಸುವವರಿಗೆ ಹಸಿರು ಬೇಕು: ಪ್ರಕೃತಿಯತ್ತ ಮನೆ ಖರೀದಿದಾರರ ಮನಸ್ಥಿತಿ
ಕೇವಲ ನಾಶಪಡಿಸಿ ಹೊಸದನ್ನು ಕಟ್ಟುವುದು ರಿಯಲ್ ಎಸ್ಟೇಟ್ ಉದ್ಯಮವಲ್ಲ. ಇದರಲ್ಲಿ ಹೊಸ ಆವಿಷ್ಕಾರಗಳನ್ನೂ ಮಾಡುವದಕ್ಕೆ ಅವಕಾಶಗಳಿವೆ. ಉದಾಹರಣೆಗೆ 2೦14 ರಲ್ಲಿ ಇಟಲಿಯ ಮಿಲನ್ ಎನ್ನುವ ಪ್ರಾಂತದಲ್ಲಿ ಕಂಪನಿಯೊಂದು ಹಸಿರು ಬಿಲ್ಡಿಂಗ್‌ಗಳನ್ನು ನಿರ್ಮಿಸಿತ್ತು. ಅದು ರಿಯಲ್ ಎಸ್ಟೇಟ್ ಜಗತ್ತಿನಲ್ಲೊಂದು ಹೊಸ ಸಂಚಲನವನ್ನೇ ಉಂಟು ಮಾಡಿತ್ತು.


-ಡಿ.ಕಿಶೋರ್ ರೆಡ್ಡಿ (ಸಂಸ್ಥಾಪಕ ನಿರ್ದೇಶಕ, ಮನ ಪ್ರಾಜೆಕ್ಟ್ಸ್)
ಹಳ್ಳಿ ಬಿಟ್ಟು ಶಹರಗಳಿಗೆ ಬರುತ್ತಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ಪರಿಣಾಮ ಮಾಲಿನ್ಯವೂ ಹೆಚ್ಚುತ್ತಿದೆ.
ರಿಯಲ್ ಎಸ್ಟೇಟ್ ಅಂದರೆ ಕೇವಲ ಭೂಮಿಯನ್ನು ಅಗೆದು, ಮರಗಳನ್ನು ಕಡಿದು ಹಣ ಸಂಪಾ ದನೆ ಮಾಡುವುದು ಎನ್ನುವುದು ಕೆಲವರ ಅಭಿಪ್ರಾಯ. ಹಣ ಸಂಪಾದನೆಯ ಉದ್ದೇಶದಿಂದ ಕೆಲ ಉದ್ಯಮಿಗಳು ಹಾಗೆ ಮಾಡುತ್ತಲೂ ಇರುವುದು ಬೇಸರದ ಸಂಗತಿ.
ಕೇವಲ ನಾಶಪಡಿಸಿ ಹೊಸದನ್ನು ಕಟ್ಟುವುದು ರಿಯಲ್ ಎಸ್ಟೇಟ್ ಉದ್ಯಮವಲ್ಲ. ಇದರಲ್ಲಿ ಹೊಸ ಆವಿಷ್ಕಾರಗಳನ್ನೂ ಮಾಡುವದಕ್ಕೆ ಅವಕಾಶಗಳಿವೆ. ಉದಾಹರಣೆಗೆ 2೦14 ರಲ್ಲಿ ಇಟಲಿಯ ಮಿಲನ್ ಎನ್ನುವ ಪ್ರಾಂತದಲ್ಲಿ ಕಂಪನಿಯೊಂದು ಹಸಿರು ಬಿಲ್ಡಿಂಗ್‌ಗಳನ್ನು ನಿರ್ಮಿಸಿತ್ತು. ಅದು ರಿಯಲ್ ಎಸ್ಟೇಟ್ ಜಗತ್ತಿನಲ್ಲೊಂದು ಹೊಸ ಸಂಚಲನವನ್ನೇ ಉಂಟು ಮಾಡಿತ್ತು.
ಇದೇ ರೀತಿಯಲ್ಲಿ 2022 ರಲ್ಲಿ ಮನ ರಿಯಲ್ ಎಸ್ಟೇಟ್ ಕಂಪನಿಯು ಇಟಲಿಯ ಆ ಮಾದರಿ ಯನ್ನಿಟ್ಟುಕೊಂಡು ಮನ ಫಾರೆಸ್ಟಾ ಎನ್ನುವ ಪ್ರಯೋಗವನ್ನು ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಿರ್ಮಿಸಿ ದೇಶಾದ್ಯಂತ ಜನಮನ್ನಣೆ ಪಡೆಯಿತು.
ಇದನ್ನೂ ಓದಿ: Vishweshwar Bhat Column: ಲ್ಯಾಂಡಿಂಗ್ ಎಂಬ ಪರಿಣತಿ
ಇದರಿಂದ ಜನರಿಗೆ ಮಾಲಿನ್ಯವಾಗುತ್ತಿರುವ ಸಿಟಿಯ ನಡುವೆವೂ ಉತ್ತಮ ಆರೋಗ್ಯ ದೊರೆಯು ವಂತಾಯಿತು. ಇಂದಿನ ಜೆನ್ ಜೀ ಮತ್ತು ಮಿಲೆನ್ನಿಯಲ್ ಪೀಳಿಗೆಯೂ ಇಂತಹ ಅಪಾರ್ಟ್ ಮೆಂಟ್‌ಗಳನ್ನೇ ಹುಡುಕುತ್ತಿದ್ದು ಚಿಕ್ಕವರಿಂದ ವಯಸ್ಸಾದವರವರೆಗೂ ಇದು ಮೆಚ್ಚಿನ ಜಾಗವಾಗುತ್ತಿದೆ. ಮನೆಗಳ ಎಲ್ಲಾ ಬಾಲ್ಕನಿಗಳಲ್ಲಿಯೂ ಮರಗಳಿದ್ದು ಆಟೋಮೇಟೆಡ್ ಡ್ರಿಪ್ ಇರಿಗೇಷನ್ ಇರುವ ಕಾರಣ ಯಾವ ಮರಗಳಿಗೂ ನೀರನ್ನು ಹಾಕುವ ಕೆಲಸವೂ ಇರುವುದಿಲ್ಲ.
ನಾಲ್ಕು ಸಾವಿರಕ್ಕೂ ಹೆಚ್ಚಿನ ಸಸ್ಯವೈವಿದ್ಯತೆಗಳನ್ನು ಫಾರೆಸ್ಟಾ ಕ್ಯಾಂಪಸ್ ಹೊಂದಿದ್ದು ಜನರಿಗೆ ಪರಿಸರ ಜಾಗೃತಿ ಮೂಡಿಸುವಲ್ಲಿಯೂ ಯಶಸ್ವಿಯಾಗಿದೆ. ಸಿಪಿಸಿಬಿ ರೀಪೋರ್ಟ್ ಒಂದರ ಪ್ರಕಾರ ದೇಶದ 13 ಉತ್ತಮ ವಾಯುಗುಣಮಟ್ಟ ಸೂಚ್ಯಂಕಗಳನ್ನು ಹೊಂದಿರುವ ಸಿಟಿಗಳಲ್ಲಿ ಏಳು ಸ್ಥಳಗಳು ಕರ್ನಾಟಕದಲ್ಲಿಯೇ ಇದೆ. ಆದರೆ ಈ ಪಟ್ಟಿಯಿಂದ ಬೆಂಗಳೂರನ್ನು ಹೊರಗಿಟ್ಟಿರುವದು ನಿಜಕ್ಕೂ ಬೇಸರದ ವಿಚಾರ. ಆದರೂ ದೇಶದ ಉತ್ತಮ ವಾಯು ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ 54 ಪ್ರತಿಶತ ಉತ್ತಮ ವಾಯುವನ್ನು ಹೊಂದಿದೆ ಎಂದು ಸಮಾಧಾನ ಮಾಡಿಕೊಳ್ಳಬೇಕಿದೆ.
ರಿಯಲ್ ಎಸ್ಟೇಟ್ ಉದ್ಯಮವನ್ನು ಮಾಡುವಾಗ ಕೇವಲ ಹಣವನ್ನು ಮಾಡತ್ರವೇ ನೋಡಿದರೆ ಅದರಿಂದ ಪರಿಸರ ಮಾಲಿನ್ಯ ಹೆಚ್ಚುವದರ ಜೊತೆಗೆ ಮುಂದಿನ ಪೀಳಿಗೆಗೆ ನಾವು ಮಾಡುವ ದ್ರೋಹ ವಾಗುತ್ತದೆ.
ಮನೆ ಖರೀದಿಯೆಂದರೆ ಅದು ಕೆಲವರು ಜೀವತಾವಧಿಯಲ್ಲಿ ಉಳಿಸಿದ ಹಣವಾಗಿರಬಹುದು ಅಥವಾ ಸಾಲ ಮಾಡಿಯೇ ಖರೀದಿ ಮಾಡಿದ್ದಿರಬಹುದು. ಸರಿಯಾದ ಸ್ಥಳವನ್ನು ಆಯ್ಕೆ ಮಾಡಿ ಕೊಳ್ಳುವುದು ಮುಖ್ಯವಾಗಿರುತ್ತದೆ. ಧೂಳು ತುಂಬಿದ ಅಥವಾ ನಮ್ಮೆಲ್ಲಾ ಅವಶ್ಯಕತೆಯಿರುವ ದಿನನಿತ್ಯದ ಚಟುವಟಿಕೆಗಳಿಗೆ ದೂರವಿರುವ ಮನೆಯನ್ನು ಖರೀದಿ ಮಾಡಿದರೆ ಖರೀದುದಾರನಿಗೂ ಉಪಯೋಗವಾಗುವುದಿಲ್ಲ.