ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ತ್ರೀ ಲೀಡ್‌ಹರ್‌ ಪ್ರಶಸ್ತಿ 2026; ಒಂದೇ ವೇದಿಕೆಯಲ್ಲಿ 365 ಮಹಿಳೆಯರಿಗೆ ಸನ್ಮಾನ, ರಾಷ್ಟ್ರೀಯ ದಾಖಲೆ ನಿರ್ಮಾಣ

ಬೆಂಗಳೂರಿನ ಜೆ.ಪಿ. ನಗರದಲ್ಲಿ ‘ದಿ ಸ್ತ್ರೀ – ಲವ್ ದೈಸೆಲ್ಫ್’ ಸಂಸ್ಥೆಯು ಆಯೋಜಿಸಿದ್ದ ‘ಸ್ತ್ರೀ ಲೀಡ್‌ಹರ್‌ ಪ್ರಶಸ್ತಿ 2026’ ಸಮಾರಂಭದ ಒಂದೇ ವೇದಿಕೆಯಲ್ಲಿ 365 ಮಹಿಳಾ ಸಾಧಕಿಯರನ್ನು ಸನ್ಮಾನಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಈ ಮೂಲಕ "ಸಂಸ್ಥೆಯೊಂದರಿಂದ ಅತಿ ಹೆಚ್ಚು ಮಹಿಳಾ ಸಾಧಕಿಯರಿಗೆ ಸನ್ಮಾನ" ಎಂಬ ಶೀರ್ಷಿಕೆಯಡಿಯಲ್ಲಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ʼ ಸೇರಿದೆ.

‘ಸ್ತ್ರೀ ಲೀಡ್‌ಹರ್‌ ಪ್ರಶಸ್ತಿ 2026’ ಸಮಾರಂಭದ ಒಂದೇ ವೇದಿಕೆಯಲ್ಲಿ 365 ಮಹಿಳಾ ಸಾಧಕಿಯರನ್ನು ಸನ್ಮಾನಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಬೆಂಗಳೂರು, ಜೂ.30: ‘ದಿ ಸ್ತ್ರೀ – ಲವ್ ದೈಸೆಲ್ಫ್’ ಸಂಸ್ಥೆಯು ಜೆ.ಪಿ. ನಗರದಲ್ಲಿ ಆಯೋಜಿಸಿದ್ದ ‘ಸ್ತ್ರೀ ಲೀಡ್‌ಹರ್‌ ಪ್ರಶಸ್ತಿ 2026’ (Stree LeadHER Awards 2026) ಸಮಾರಂಭದ ಒಂದೇ ವೇದಿಕೆಯಲ್ಲಿ 365 ಮಹಿಳಾ ಸಾಧಕಿಯರನ್ನು ಸನ್ಮಾನಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಈ ಮೂಲಕ "ಸಂಸ್ಥೆಯೊಂದರಿಂದ ಅತಿ ಹೆಚ್ಚು ಮಹಿಳಾ ಸಾಧಕಿಯರಿಗೆ ಸನ್ಮಾನ" ಎಂಬ ಶೀರ್ಷಿಕೆಯಡಿಯಲ್ಲಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ಸೇರಿದೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನ ರೆಕಾರ್ಡ್ಸ್ ಮ್ಯಾನೇಜರ್ ಡಾ. ಕೆ. ರವಿಶಂಕರ್ ಅವರು ಈ ಸಾಧನೆಯ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

#ಗೀವ್‌ಟುಗೇನ್‌ ಎಂಬ ಅಭಿಯಾನದ ಥೀಮ್ ಅಡಿಯಲ್ಲಿ ಆರೋಗ್ಯ, ಶಿಕ್ಷಣ, ಉದ್ಯಮಶೀಲತೆ, ಕಾನೂನು, ತಂತ್ರಜ್ಞಾನ, ಸಮಾಜ ಸೇವೆ, ಕಲೆ ಮತ್ತು ಸಮುದಾಯ ನಾಯಕತ್ವ ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳೆಯರನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಗೀತಾ ಪ್ರಿಯಾ ನಾಗ್ಪಾಲ್, ʼಇದು ಬದಲಾವಣೆಗೆ ಪ್ರೇರಣೆ ನೀಡುವ ಮಹಿಳೆಯರನ್ನು ಕೊಂಡಾಡುವ ಸಂಭ್ರಮʼ ಎಂದು ಈ ಉಪಕ್ರಮವನ್ನು ಶ್ಲಾಘಿಸಿದರು.

ಛಾಯಾ ಗಾಂಧಿ ಮಾತನಾಡಿ, "ಮಹಿಳಾ ಉದ್ಯಮಿಗಳನ್ನು ಗುರುತಿಸುವುದು ಇಡೀ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ" ಎಂದರು. ಡಾ. ಪೂಜಾ ಶೈಲೇಂದರ್ ನಿಗಮ್ ಅವರು, "ಇಂತಹ ವೇದಿಕೆಗಳು ಕೇವಲ ವ್ಯಕ್ತಿಗಳನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಉನ್ನತೀಕರಿಸುತ್ತವೆ" ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಕರ್ನಲ್ ಜಯಶ್ರೀ ಬ್ಯಾನರ್ಜಿ, ಡಾ. ಆಶು ಶಾ, ಡಾ. ಸವಿತಾ ರಾಣಿ ಎಂ. ಹಾಗೂ ಕವಿತಾ ಕಿಶೋರ್ ಮಾತನಾಡಿದರು.

ಸಂಸ್ಥೆಯ ಸಂಸ್ಥಾಪಕಿ ಭಾವನಾ ರಾಜೇಶ್ ಮಾತನಾಡಿ, ʼಇದು ಕೇವಲ ಪ್ರಶಸ್ತಿ ಪ್ರದಾನ ಸಮಾರಂಭವಾಗಿರಲಿಲ್ಲ. ಮಹಿಳೆಯರು ಒಟ್ಟಾಗಿ ಮುನ್ನಡೆದಾಗ ಇತಿಹಾಸ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆʼ ಎಂದು ತಿಳಿಸಿದರು.

HCL Foundation: ಎನ್‌ಜಿಒಗಳಿಗೆ ಬರೋಬ್ಬರಿ ₹24 ಕೋಟಿ ಅನುದಾನ, ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ ಎಚ್‌ಸಿಎಲ್ ಫೌಂಡೇಶನ್

ಮೀಡಿಯಾ ಕನೆಕ್ಟ್, ಲಿಬರ್ಟಿ ಗ್ರೂಪ್, ಟಿಆರ್ವಿ ಡೈಮಂಡ್ಸ್, ಕ್ಯಾಪಿಟಲ್ ನೆಕ್ಸಸ್, ಸುದಯ, ಆಶು ಶಾ ಫೌಂಡೇಶನ್, ವ್ರಜಂಗ್ ಮತ್ತು ವಿವೈಶ್ಯ (WeVysya) ಸೇರಿದಂತೆ ಪ್ರಾಯೋಜಕರ ಬೆಂಬಲವನ್ನು ಆಯೋಜಕರು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸಿದರು. ಅವರ ಸಹಕಾರವು ಈ ದೂರದೃಷ್ಟಿಯನ್ನು ರಾಷ್ಟ್ರೀಯ ಮಟ್ಟದ ಸಾಧನೆಯಾಗಿ ಪರಿವರ್ತಿಸಲು ಸಹಾಯ ಮಾಡಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.