ಶಿಕ್ಷಣದಲ್ಲಿ "ಎಐ ಆಧಾರಿತ" ಕಲಿಕೆ ಉತ್ತೇಜಿಸುವ "ಕಲಿಕೆಯ ಭವಿಷ್ಯ" ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇಂಟೆಲ್
ಪ್ರತಿಯೊಂದು ವಿದ್ಯಾರ್ಥಿಯು ಡಿಜಿಟಲ್ ಶಿಕ್ಷಣ ಜ್ಞಾನ ಹೊಂದದೇ ಹೋದಲ್ಲಿ, ಮುಂದೆಯೂ ಇದೇ ರೀತಿಯ ಹಿನ್ನಡೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಗ್ರಾಮೀಣ ಮಟ್ಟದಲ್ಲಿಯೂ ಸಹ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವತಃ ಕಂಪ್ಯೂಟರ್ ಹೊಂದುವ ಅವಶ್ಯಕತೆ ಇದೆ. ಪ್ರಸ್ತುತ ಶೇ.90 ರಷ್ಟು ಯುವಕರು ಸ್ಮಾರ್ಟ್‌ಫೋನ್ ಹೊಂದಿದ್ದರೆ, ಕೇವಲ ಶೇ.9ರಷ್ಟು ಜನರು ಕಂಪ್ಯೂಟರ್ ಹೊಂದಿದ್ದಾರೆ.

-

ಬೆಂಗಳೂರು: ಸಾಂಪ್ರದಾಯಿಕ ಶಿಕ್ಷಣದಿಂದ ಕೃತಕ ಬುದ್ದಿಮತ್ತೆ (ಎಐ) ಆಧಾರಿತ ಶಿಕ್ಷಣದತ್ತ ಕೊಂಡೊಯ್ಯಲು ಇಂಟೆಲ್ ಸಂಸ್ಥೆಯು "ಕಲಿಕೆಯ ಭವಿಷ್ಯ" (PadhAI ka future) ಕಾರ್ಯಕ್ರಮ ಜಾರಿ ಮಾಡಿದ್ದು, ದೇಶದ ಮಕ್ಕಳು ಜಾಗತಿಕ ಶಿಕ್ಷಣದೊಂದಿಗೆ ಸ್ಪರ್ಧಿಸಲು ನೆರವಾಗುವ ಶಿಕ್ಷಣ ನೀಡಲು ಹೆಜ್ಜೆ ಇಟ್ಟಿದೆ.
ಇಂಟೆಲ್ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ "PadhAI ka future" ಉಪಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದ ಇಂಟೆಲ್ ಸಂಸ್ಥೆಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ವಿಶ್ವನಾಥನ್, ಭಾರತದಲ್ಲಿ ಈಗಲೂ ಸಾಂಪ್ರದಾಯಿಕ ಶಿಕ್ಷಣವೇ ನೀಡಲಾಗುತ್ತಿದೆ. ಇದರಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಾಗದೇ ಸೋಲುತ್ತಿದ್ದಾರೆ.
ಇದನ್ನೂ ಓದಿ: Bangalore News: ಐಬಿಎಸ್ ಬ್ಯುಸಿನೆಸ್ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಪ್ರತಿಯೊಂದು ವಿದ್ಯಾರ್ಥಿಯು ಡಿಜಿಟಲ್ ಶಿಕ್ಷಣ ಜ್ಞಾನ ಹೊಂದದೇ ಹೋದಲ್ಲಿ, ಮುಂದೆಯೂ ಇದೇ ರೀತಿಯ ಹಿನ್ನಡೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಗ್ರಾಮೀಣ ಮಟ್ಟದಲ್ಲಿಯೂ ಸಹ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವತಃ ಕಂಪ್ಯೂಟರ್ ಹೊಂದುವ ಅವಶ್ಯಕತೆ ಇದೆ. ಪ್ರಸ್ತುತ ಶೇ.90 ರಷ್ಟು ಯುವಕರು ಸ್ಮಾರ್ಟ್‌ಫೋನ್ ಹೊಂದಿದ್ದರೆ, ಕೇವಲ ಶೇ.9ರಷ್ಟು ಜನರು ಕಂಪ್ಯೂಟರ್ ಹೊಂದಿದ್ದಾರೆ. ಪ್ರತಿಯೊಬ್ಬ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕಿದ್ದರೆ ಟಿವಿ, ಮೊಬೈಲ್ ನಂತೆಯೇ ಕಡಿಮೆದರದಲ್ಲಿ ಕಂಪ್ಯೂಟರ್ ಸಿಗುವಂತಾಗಬೇಕು ಎಂದರು.
ಏನಿದು PadhAI ka future ಕಾರ್ಯಕ್ರಮ: ಈ ಕಾರ್ಯಕ್ರಮದಡಿ ಹಲವು ಟೆಕ್ ಕಂಪನಿಗಳು ಸಹಭಾಗಿತ್ವವಿದ್ದು, ಒಂದೊಂದು ಸಂಸ್ಥೆಯು ಒಂದೊಂದು ಎಐ ಪ್ಲಾಟ್‌ಫಾರ್ಮ್‌ನನ್ನು ಪರಿಚಯಿ ಸಿವೆ. ಭೌತಶಾಸ್ತ್ರ ವಲ್ಲಾಹ್ ಸಂಸ್ಥೆಯು ಕಲಿಕಾ ಮಾರ್ಗದರ್ಶಿ ಎಐ ಅಪ್ಲಿಕೇಷನ್ ಪರಿಚಯಿಸಿದೆ, Ei ಮೈಂಡ್‌ಸ್ಪಾರ್ಕ್ ಸಂಸ್ಥೆಯು, ಗಣಿತಕ್ಕೆ ಸಂಬಂಧಿಸಿದ ಎಐ ಅಪ್ಲಿಕೇಷನ್ ಹೊಂದಿದೆ.
ಇನ್ಫಿನಿಟಿ ಲರ್ನ್ ಸಂಸ್ಥೆಯು, AI ಅನುಮಾನಗಳನ್ನು ಪರಿಹರಿಸಲಿದೆ ಜೊತೆಗೆ ನಿಮ್ಮೊಂದಿಗೆ ಸಂವಹಿಸಿ ಯಾವುದೇ ಡೌಟ್‌ಗಳನ್ನು ಸುಲಭವಾಗಿ ಅರ್ಥ ಮಾಡಿಸಲಿದೆ. ಇಂತಹ ಹಲವು ಸಂಸ್ಥೆ ಗಳೊಂದಿಗೆ ಇಂಟೆಲ್ ಸಂಸ್ಥೆಯು ಕೈ ಜೋಡಿಸಿದ್ದು, ಈ ಎಲ್ಲಾ ಅಪ್ಲಿಕೇಷನ್‌ಗಳು ಇಂಟೆಲ್‌ನ AI-ಚಾಲಿತ ಕಂಪ್ಯೂಟರ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಈ ಎಐ, ಎಲ್ಲಾ ಶಾಲೆಗಳಲ್ಲಿ ಅಳವಡಿಸುವ ಗುರಿಯನ್ನು ಹೊದಿದ್ದು, ಭವಿಷ್ಯದಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಎಐ ಮೂಲಕ ಅವಶ್ಯಕತ ಶಿಕ್ಷಣ ಪಡೆಯಲಿದ್ದಾರೆ ಎಂದು ವಿವರಿಸಿದರು.