ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಟರ್‌ನ್ಯಾಷನಲ್ ವರ್ಕ್‌ಪ್ಲೇಸ್ ಗ್ರೂಪ್ ಬೆಂಗಳೂರಿನ ಎಂ.ಎಸ್.ಆರ್ ನಾರ್ತ್ ಟವರ್‌ನಲ್ಲಿ ಹೊಸ ರೀಗಸ್ ಕೇಂದ್ರ ಆರಂಭ

ಹೊಸ ಕೇಂದ್ರವು IWG ಅವರ ಹೆಜ್ಜೆಗುರುತನ್ನು ಭಾರತದ ಮಂಚೂಣಿ ತಂತ್ರಜ್ಞಾನ ಹಬ್ಸ್ ಗಳನ್ನು ಹೆಚ್ಚಿಸುತ್ತದೆ, ಈ ಮೂಲಕ ಹೆಚ್ಚಿನ ಅನುಕೂಲಕರ, ಸಂಪರ್ಕಿತ ಮತ್ತು ದಕ್ಷತೆ ಯೊಂದಿಗೆ ವ್ಯವಹಾರಗಳ ಕಾರ್ಯಾಚರಣೆ ನಡೆಸುವುದನ್ನು ಚಾಲನೆಗೊಳುಸಲು ಪ್ರೀಮಿಯರ್, ಆನ್-ಡಿಮ್ಯಾಂಡ್ ಕಚೇರಿ ಪರಿಹಾರಗಳನ್ನು ಒದಗಿಸುತ್ತದೆ.

ಬೆಂಗಳೂರು: ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್(ಅಂತಾರಾಷ್ಟ್ರೀಯ ಕಾರ್ಯಸ್ಥಳ ಸಮೂಹ), ಇಂದು ಸ್ಪೇಸಸ್ ಮತ್ತು ರೀಗಸ್ ಒಳಗೊಂಡಂತೆ ಬ್ರ್ಯಾಂಡ್ ಗಳೊಂದಿಗೆ ಕಾರ್ಯನಿರ್ವಹಿಸುವ ಜಗತ್ತಿನ ಅತಿದೊಡ್ಡ ಪ್ಲಾಟ್ಫಾರ್ಮ್ ಬೆಂಗಳೂರಿನ MSR ನಾರ್ತ್ ಟವರ್ ನಲ್ಲಿ ರೀಗಸ್ ಆರಂಭದ ಪ್ರಕಟಣೆಯನ್ನು ಮಾಡಿತು.

ಈ ಹೊಸ ಕೇಂದ್ರವು IWG ಅವರ ಹೆಜ್ಜೆಗುರುತನ್ನು ಭಾರತದ ಮಂಚೂಣಿ ತಂತ್ರಜ್ಞಾನ ಹಬ್ಸ್ ಗಳನ್ನು ಹೆಚ್ಚಿಸುತ್ತದೆ, ಈ ಮೂಲಕ ಹೆಚ್ಚಿನ ಅನುಕೂಲಕರ, ಸಂಪರ್ಕಿತ ಮತ್ತು ದಕ್ಷತೆಯೊಂದಿಗೆ ವ್ಯವಹಾರಗಳ ಕಾರ್ಯಾಚರಣೆ ನಡೆಸುವುದನ್ನು ಚಾಲನೆಗೊಳುಸಲು ಪ್ರೀಮಿಯರ್, ಆನ್-ಡಿಮ್ಯಾಂಡ್ ಕಚೇರಿ ಪರಿಹಾರಗಳನ್ನು ಒದಗಿಸುತ್ತದೆ.

ಈ ಇತ್ತೀಚಿನ ಸೇರ್ಪಡೆಯಿಂದ ಭಾರತದ ಮಂಚೂಣಿ ತಂತ್ರಜ್ಞಾನ ಹಬ್ಸ್ ಗಳಲ್ಲಿ IWG ಅವರ ಉಪಸ್ಥಿತಿ ಹೆಚ್ಚಾಗುವುದರೊಂದಿಗೆ 5000 ಸ್ಥಳಗಳಾದ್ಯಂತ ವಿಸ್ತೃತ ಜಾಗತಿಕ ಸಂಪರ್ಕಕ್ಕಾಗಿ ಸಾಟಿ-ರಹಿತ ಸಂಪರ್ಕವುಳ್ಳ ಮತ್ತು ಪ್ರೀಮಿಯರ್, ಆನ್-ಡಿಮ್ಯಾಂಡ್ ಪರಿಹಾರಗಳನ್ನು ಸ್ಥಳೀಯ ಉದ್ಯಮಗಳಿಗೆ ಒದಗಿಸುತ್ತದೆ.

ಇದನ್ನೂ ಓದಿ: Bangalore News: ಸಂಕೀರ್ಣ ಜಗತ್ತಿಗಾಗಿ ನಾಯಕತ್ವ ಮರುಕಲ್ಪಿಸಲು ಶ್ವೇತಪತ್ರ ಹೊರಡಿಸಿದ ಸಂಸ್ಥೆಗಳು

ಇನ್ನು ಬೆಂಗಳೂರಿನಲ್ಲಿ ಇದರ ಉದ್ಘಾಟನೆಯು ಸಂಸ್ಥೆಯ ಭಾರತದ ಬೆಳವಣಿಗೆಯಲ್ಲಿ ಹೊಸ ಮೈಲಿಗಲ್ಲನ್ನು ಸಹ ಗುರುತಿಸುತ್ತದೆ ಮತ್ತು 2025ರ ಮೊದಲಾರ್ಧದಲ್ಲಿಯೇ ಅತ್ಯುತ್ತಮ ಕಾರ್ಯಕ್ಷಮತೆಯ ಮೇಲೆ ನಿರ್ಮಾಣವಾಗಿದೆ. ಈ ಅವಧಿಯಲ್ಲಿ, IWG ತನ್ನ ಕಾರ್ಯಾಚರಣೆಗಳ ಮೊದಲ ಇಡೀ ದಶಕಗಳಿಗೆ ಹೋಲಿಸಿದರೆ 2025ರ ಮೊದಲಾರ್ಧದಲ್ಲಿ ಸಹಿ ಮಾಡಿದ ಮತ್ತು ತೆರೆದ ಹೆಚ್ಚಿನ ಹೊಸ ಸ್ಥಳಗಳ ಜೊತೆಗೆ ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅತ್ಯಂತ ಹೆಚ್ಚು ಆದಾಯ, ನಗದು ಹರಿವು ಮತ್ತು ಗಳಿಕೆಯನ್ನು ಸಾಧಿಸಿದೆ. IWG ಅವರ ಸಮೂಹವು ಈಗ 121 ದೇಶಗಳಲ್ಲಿ ಒಂದು ಮಿಲಿಯನ್ ಗಿಂತ ಹೆಚ್ಚು ರೂಮುಗಳನ್ನು ಹೊಂದಿದೆ.

ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ (ಅಂತಾರಾಷ್ಟ್ರೀಯ ಕಾರ್ಯಸ್ಥಳ ಸಮೂಹ) ಸಿಇಒ ಮತ್ತು ಸ್ಥಾಪಕರಾದ ಮಾರ್ಕ್ ಡಿಕ್ಸನ್ ಮಾತನಾಡಿ, “ನಾವು ಈ ಇತ್ತೀಚಿನ ಆರಂಭ ದೊಂದಿಗೆ ಬೆಂಗಳೂರಿನಲ್ಲಿ ಬಲಿಷ್ಠ ಮತ್ತು ಹೆಚ್ಚು-ಅಗತ್ಯತೆವುಳ್ಳ ಹೆಜ್ಜೆ ಗುರುತನ್ನು ಸ್ಥಾಪಿಸುತ್ತಿದ್ದೇವೆ.

ಒಂದು ಪ್ರಮುಖ ವ್ಯವಹಾರದ ಹಬ್ ಆಗಿರುವ MSR ನಾರ್ತ್ ಸೆಂಟರ್ ನಮ್ಮ ವಿಸ್ತರಣೆಯ ಯೋಜನೆಗಳನ್ನು ಮತ್ತಷ್ಟು ಹೆಚ್ಚಿಸಲು ನಮಗೆ ಅತ್ಯಂತ ಒಳ್ಳೆಯ ಸ್ಥಳವಾಗಿದೆ. ನಾವು ಎಂ. ಎಸ್ ರಾಮಯ್ಯ ಡೆವೆಲಪರ್ ಅಂಡ್ ಬಿಲ್ಡರ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರು ವ ಎಂ.ಎಸ್ ರಕ್ಷಾ ರಾಮ್ ಅವರೊಂದಿಗೆ ಮ್ಯಾನೇಜ್ಮೆಂಟ್ ಒಪ್ಪಂದದ ಅಡಿಯಲ್ಲಿ ಪಾಲು ದಾರಿಕೆ ಮಾಡಿಕೊಳ್ಳುವ ಮೂಲಕ ರೀಗಸ್ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಇದು ಅವರ ಕಟ್ಟಡಕ್ಕೆ ಅತ್ಯಾಧುನಿಕ ಕಾರ್ಯ ಕ್ಷೇತ್ರ ವನ್ನು ಸೇರಿಸುತ್ತದೆ.” ಎಂದರು.

ಡಿಕ್ಸನ್ ಮುಂದುವರೆಸುತ್ತಾ, “ಬೆಂಗಳೂರಿನಲ್ಲಿ ನಮ್ಮ ಆರಂಭವು, ಸಂಸ್ಥೆಗಳಿಗೆ ಅನೇಕ ರೀತಿಯ ಲಾಭಗಳನ್ನು ತಂದು ಕೊಡುವುದರೊಂದಿಗೆ ಉದ್ಯೋಗಿಗಳ ಕೆಲಸ-ಜೀವನದ ಸಮತೋಲನ ಹಾಗೂ ಸಂತೃಪ್ತಿಯನ್ನು ಸುಧಾರಿಸಲು, ಅನುಕೂಲಕರ ಮತ್ತು ಪ್ಲಾಟ್ಫಾರ್ಮ್ ಕಾರ್ಯಸ್ಥಳ ಅತ್ಯಂತ ಜನಪ್ರಿಯವಾಗುತ್ತಿದೆ ಎಂದು ಹೆಚ್ಚಿನ ಸಂಸ್ಥೆಗಳು ತಿಳಿದುಕೊಳ್ಳುತ್ತಿರುವ ಸಮಯದಲ್ಲಿದೆ. ನಮ್ಮ ಕಾರ್ಯಸ್ಥಳ ಮಾಡೆಲ್ ಉತ್ಪಾದಕತೆ ಯಲ್ಲಿನ ಏರಿಕೆಯನ್ನು ಸಾಬೀತು ಮಾಡಿದೆ ಮತ್ತು ಇದು ಸಾವಿರಾರು ಸ್ಥಳಗಳಿಗೆ ಪ್ರವೇಶಾ ವಕಾಶವನ್ನು ಕೊಡುವುದರೊಂದಿಗೆ ಗಮನಾರ್ಹವಾಗಿ ಕಡಿಮೆ ವೆಚ್ಚಗಳಲ್ಲಿ ವ್ಯವಹಾರ ಗಳನ್ನು ಏರಲು ಮತ್ತು ಮುಂದೆ ಸಾಗಲು ಸಹಾಯ ಮಾಡುತ್ತದೆ.” ಎಂದು ಅಭಿಪ್ರಾಯ ಪಟ್ಟರು.

ಭಾರತದ ಪ್ರೀಮಿಯರ್ ತಂತ್ರಜ್ಞಾನ ಮತ್ತು ನಾವಿನ್ಯತೆ ಹಬ್ ಗಾಗಿ ಸೇವೆ ಸಲ್ಲಿಸಲು ಕಾರ್ಯತಾಂತ್ರಿಕವಾಗಿ ಆರಂಭಿಸಿರುವ, MSR ನಾರ್ತ್ ಟವರ್ ನಲ್ಲಿ ರೀಗಸ್, ಬೆಂಗಳೂರಿನ ಕ್ರಿಯಾತ್ಮಕ ಆರ್ಥಿಕತೆಗೆ ಹೊಸ ಅಡಿಪಾಯವಾಗಿದೆ. ನಗರದ ಅಪ್ರತಿಮ ಪ್ರತಿಭೆ ಮತ್ತು ಬೆಳೆಯುತ್ತಿರುವ ಸ್ಟಾರ್ಟ್ ಅಪ್ ವ್ಯವಸ್ಥೆಯು ಮಲ್ಟಿ ನ್ಯಾಷನಲ್ ಕಾರ್ಪೊರೇಷನ್ಸ್ ಮತ್ತು ತ್ವರಿತವಾಗಿ ಬೆಳೆಯುತ್ತಿರುವ ಸ್ಥಳೀಯ ಉದ್ಯಮಗಳೆರೆಡನ್ನೂ ಸಹ ಆಕರ್ಷಿಸುತ್ತವೆ, ಈ ಮೂಲಕ ಅನುಕೂಲಕರ, ಉನ್ನತ ಕಾರ್ಯಸ್ಥಳಗಳಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸು ತ್ತದೆ.

ಈ ಹೊಸ ಕೇಂದ್ರವು NH44 ಮತ್ತು NH75 ಸೇರಿದಂತೆ ಪ್ರಮುಖ ರಸ್ತೆಗಳ ನಡುವಿನಲ್ಲಿ ಸೂಕ್ತವಾಗಿ ನೆಲೆಸಿದ್ದು, ಇದು ಬೆಂಗಳೂರಿನ ಪ್ರಮುಖ ವ್ಯಾಪಾರ ಜಿಲ್ಲೆಗಳಲ್ಲಿ ಸುಲಭ ಸಂಪರ್ಕವನ್ನು ಒದಗಿಸುತ್ತದೆ. ನಗರದ ಅಂತರರಾಷ್ಟ್ರೀಯ ಗೇಟ್‌ವೇ ಆಗಿರುವ ಕೆಂಪೇ ಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ ಸ್ವಲ್ಪ ದೂರದಲ್ಲಿರುವ ಈ ಸ್ಥಳವು ತ್ವರಿತ ದೇಶೀಯ ಮತ್ತು ಜಾಗತಿಕ ಪ್ರಯಾಣವನ್ನು ಸಕ್ರಿಯಗೊಳಿಸುತ್ತದೆ. ಇದಲ್ಲದೆ ಈ ಸ್ಥಳಕ್ಕೆ ಹೋಗಲು ಉತ್ತಮವಾಗಿ ಅಭಿವೃದ್ಧಿ ಹೊಂದಿದ ಸಾರ್ವಜನಿಕ ಸಾರಿಗೆ ಮತ್ತು ಯೋಜಿತ ಮೆಟ್ರೋ ಸೌಲಭ್ಯಗಳು ಸಹ ಇವೆ.

ಅನುಕೂಲಕತೆ, ಉತ್ಪಾದಕತೆ ಮತ್ತು ಸಹಯೋಗವನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ, 1220 ಚದರ ಮೀಟರ್ ಕೇಂದ್ರವು 163 ವರ್ಕ್ ಸ್ಟೇಷನ್ಸ್ ಮತ್ತು ಎರಡು ಆಧುನಿಕ ಮೀಟಿಂಗ್ ಕೋಣೆಗಳನ್ನು ಸಹ ಒಳಗೊಂಡಿದೆ. ಈ ವೈಶಿಷ್ಟ್ಯತೆಗಳು ಸಾಟಿರಹಿತ ಸಂಪರ್ಕ ಮತ್ತು ಕಾರ್ಯಚರಣೆ ಅನುಕೂಲತೆಗೆ ಹೆಚ್ಚಿನ ಆದ್ಯತೆ ನೀಡುವ ವೃತ್ತಿಪರರಿಗಾಗಿ, ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಿಗೆ, ನವೀನ ಸ್ಟಾರ್ಟ್ ಅಪ್ಸ್ಗಳಿಗೆ ಮತ್ತು ಮಲ್ಟಿ ನ್ಯಾಷನಲ್ ಕಾರ್ಪೊರೇಷನ್ಸ್ ಗಾಗಿ ಮತ್ತು ಬಹಳ ಸೂಕ್ತ ಕಾರ್ಯಸ್ಥಳ ವನ್ನಾಗಿಸುತ್ತದೆ.

ಈ ಪಾಲುದಾರಿಕೆಯ ಕುರಿತು ಎಂ.ಎಸ್. ರಾಮಯ್ಯ ಡೆವೆಲಪರ್ ಅಂಡ್ ಬಿಲ್ದರ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರು ಎಂ.ಎಸ್. ರಕ್ಷಾ ರಾಮ್ ಮಾತನಾಡಿ, “ಭಾರತದ ತಂತ್ರಜ್ಞಾನ ಮತ್ತು ನಾವೀನ್ಯದ ಚಿತ್ರಣದಲ್ಲಿ ಬೆಂಗಳೂರು ಒಂದು ಮುಖ್ಯ ಸ್ಥಾನವನ್ನು ಹೊಂದಿದೆ, ಇದು ತನ್ನ ವೈವಿಧ್ಯಮಯ ಸ್ಟಾರ್ಟ್ ಅಪ್ ವ್ಯವಸ್ಥೆಗಳಿಗಾಗಿ, ಕೌಶಲ್ಯಯುತ ಪ್ರತಿಭೆಗಳ ಆಳ ಸಮುದ್ರಕ್ಕಾಗಿ ಮತ್ತು ಉದ್ಯಮಶೀಲತೆಯ ಸಾಟಿಯಿಲ್ಲದ ಸಂಸ್ಕೃತಿಗಾಗಿ ಹೆಸರುವಾಸಿಯಾಗಿದೆ.

MSR ನಾರ್ತ್ ಟವರ್ ನಲ್ಲಿ ರೀಗಸ್ ಪರಿಚಯಿಸಲು ಇಂಟರ್ನ್ಯಾಷನಲ್ ವರ್ಕ್ ಪ್ಲೇಸ್ ಗ್ರೂಪ್ ಜೊತೆಗಿನ ನಮ್ಮ ಪಾಲುದಾರಿಕೆಯು ಈ ಕ್ರಿಯಾತ್ಮಕ ವ್ಯವಸ್ಥೆಯನ್ನು ಸಬಲೀ ಕರಣಗೊಳಿಸಲು ನಮ್ಮ ಹಂಚಿಕೊಂಡ ದೃಷ್ಟಿಕೋನವನ್ನು ಒತ್ತಿ ಹೇಳುತ್ತದೆ. ಈ ಸಹಭಾಗಿತ್ವವು ಬೆಂಗಳೂರಿನ ವಾಣಿಜ್ಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸು ವುದು ಮಾತ್ರವಲ್ಲದೆ ಇದು ತಂತ್ರಜ್ಞಾನ ಮತ್ತು ನಾವೀನ್ಯತೆಗಾಗಿ ಜಾಗತಿಕ ಕೇಂದ್ರವಾಗಿ ನಗರದ ನಿರಂತರ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ, ಆರ್ಥಿಕ ಸಮೃದ್ಧಿಯನ್ನು ಪೋಷಿಸುತ್ತದೆ ಮತ್ತು ವ್ಯವಹಾರಗಳು ಮತ್ತು ವೃತ್ತಿಪರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.” ಎಂದರು.

IWG ಅವರ ರೀಗಸ್ ಬ್ರ್ಯಾಂಡ್ ಇಂದಿನ ಮಿಶ್ರ ಕಾರ್ಯಸ್ಥಳದ ಬದಲಾಗುತ್ತಿರುವ ಅಗತ್ಯತೆ ಗಳನ್ನು ಪೂರೈಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ವೃತ್ತಿಪರ ಮತ್ತು ಅನುಕೂಲಕರ ಕಾರ್ಯಸ್ಥಳ ಪರಿಹಾರಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ರೀಗಸ್ ಸ್ಪೂರ್ತಿದಾಯಕ ಕಚೇರಿಗಳು, ಸಹಯೋಗದ ಮೀಟಿಂಗ್ ಕೊಠಡಿಗಳು ಮತ್ತು ಸಾಟಿರಹಿತ ಡಿಜಿಟಲ್ ಸೇವೆಗಳೊಂದಿಗೆ ಹೊಸ ಸ್ಟಾರ್ಟ್ ಅಪ್ಸ್ ನಿಂದ ಹಿಡಿದು ಜಾಗತಿಕ ಉದ್ಯಮಗಳವರೆಗೆ ವ್ಯವಹಾರಗಳನ್ನು ಸಶಕ್ತಗೊಳಿಸುತ್ತದೆ.