ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IT Raid: ಬೆಂಗಳೂರಿನ ಪ್ರತಿಷ್ಠಿತ ಬಟ್ಟೆ ಶೋರೂಮ್‌ಗೆ ಐಟಿ ದಾಳಿ

Bengaluru: ಚೆನ್ನೈಯಿಂದ ಬೆಂಗಳೂರಿಗೆ ಬಂದ ಐಟಿ ಅಧಿಕಾರಿಗಳು ಬಟ್ಟೆ ಶೋರೂಮ್‌ಗೆ ದಾಳಿ ನಡೆಸಿದ್ದಾರೆ. ಮಳಿಗೆಯಲ್ಲಿರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ನಗದು ವಹಿವಾಟು, ಆನ್‌ಲೈನ್ ವಹಿವಾಟು, ಮಳಿಗೆಯಲ್ಲಿರುವ ಬಟ್ಟೆಗಳು, ಮೌಲ್ಯ ಸೇರಿದಂತೆ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಬಟ್ಟೆ ಶೋರೂಮ್‌ಗೆ ಐಟಿ ದಾಳಿ

-

ಹರೀಶ್‌ ಕೇರ ಹರೀಶ್‌ ಕೇರ Sep 12, 2025 12:06 PM

ಬೆಂಗಳೂರು: ಇಂದು ಬೆಳಗ್ಗೆಯೇ ಬೆಂಗಳೂರಿನಲ್ಲಿ (Bengaluru) ಐಟಿ ದಾಳಿ (IT Raid) ನಡೆದಿದೆ. ನಗರದ ಪ್ರತಿಷ್ಠಿತ ಬಟ್ಟೆ ಶೋ ರೂಮ್ (Show room)​ ಆಗಿರುವ ಪೋಥಿಸ್ ಮಳಿಗೆ ಮೇಲೆ ಐಟಿ ದಾಳಿ ನಡೆದಿದೆ. ಮೈಸೂರು ರಸ್ತೆಯ ಟಿಂಬರ್ ಲೇಔಟ್, ಗಾಂಧಿನಗರದ ಅತೀ ದೊಡ್ಡ ಶೋ ರೂಮ್​ ಮೇಲೆ ಐಟಿ ದಾಳಿಯಾಗಿದೆ. 30ಕ್ಕೂ ಹೆಚ್ಚು ಐಟಿ ಅಧಿಕಾರಿಗಳು (Officers) ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತ್ಯೇಕ ತಂಡವಾಗಿ ಪೋಥಿಸ್ ಮಳಿಗೆ ಮೇಲೆ ದಾಳಿ ನಡೆಸಲಾಗಿದೆ. ಆದಾಯ ತೆರಿಗೆ ವಂಚನೆ ಹಿನ್ನಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಚೆನ್ನೈಯಿಂದ ಬೆಂಗಳೂರಿಗೆ ಬಂದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಾಂಧಿನಗರದಲ್ಲಿರುವ ಪೋಥಿಸ್ ಬಟ್ಟೆ ಮಳಿಗೆ ಮೇಲೆ 30 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಟಿಂಬರ್ ಲೇಔಟ್‌ನಲ್ಲಿರುವ ಪೋಥಿಸ್ ಮಳಿಗೆ ಮೇಲೆ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮಳಿಗೆಯಲ್ಲಿರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ನಗದು ವಹಿವಾಟು, ಆನ್‌ಲೈನ್ ವಹಿವಾಟು, ಮಳಿಗೆಯಲ್ಲಿರುವ ಬಟ್ಟೆಗಳು, ಮೌಲ್ಯ ಸೇರಿದಂತೆ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಪೋಥಿಸ್​ ಮಳಿಗೆಗಳು ಚೆನ್ನೈ ಉದ್ಯಮಿಗೆ ಸೇರಿದ ಮಳಿಗೆಗಳಾಗಿವೆ. ರೇಷ್ಮೆ ಸೀರೆಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದರು. ಆದರೆ ಇಂದು ಎಲ್ಲಾ ರೀತಿಯ ಉಡುಪುಗಳನ್ನು ಮಾರಾಟ ಮಾಡಲಾಗುತ್ತದೆ. ಚೆನ್ನೈನಲ್ಲಿರುವ ಪ್ರಮುಖ ಅಂಗಡಿಯನ್ನು ಪೋಥಿಸ್ ಪ್ಯಾಲೇಸ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ITR Filing 2025: ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದಾ? ಅದು ಹೇಗೆ ಇಲ್ಲಿದೆ ಮಾಹಿತಿ