ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಡುಗೋಡಿ ವೆನ್ನೆಲ್ಲಾ ಹತ್ಯೆ; ಕರುಳ ಕುಡಿಯನ್ನೇ ಕೊಂದ ಪ್ರಿಯಕರನಿಗೆ ನೆರವಾದ ಪಾಪಿ ತಾಯಿ ಪ್ರಿಯಾಂಕಾಗೆ ಜಾಮೀನು

Vennella Case: ಬೆಂಗಳೂರು ಕಾಡುಗೋಡಿಯ 5 ವರ್ಷದ ಬಾಲಕಿ ವೆನ್ನೆಲ್ಲಾ ಕೊಲೆ ಪ್ರಕರಣದ ಆರೋಪಿ, ತಾಯಿ ಪ್ರಿಯಾಂಕಾಗೆ ಜಾಮೀನು ಸಿಕ್ಕಿದೆ. ಪ್ರಿಯಾಂಕಾ ಪರ ವಕೀಲ ಪ್ರಸನ್ನ ವಾದ ಮಂಡಿಸಿ ಕೊಲೆಯಲ್ಲಿ ಪ್ರಿಯಾಂಕಾ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಪ್ರಿಯಾಂಕಾ ಮತ್ತು ಮೋಹನ್‌ (ಸಂಗ್ರಹ ಚಿತ್ರ)

ಬೆಂಗಳೂರು, ಜು. 9: ಇಡೀ ರಾಜ್ಯವನ್ನೇ ನಡುಗಿಸಿದ್ದ ಕಾಡುಗೋಡಿಯ 5 ವರ್ಷದ ಬಾಲಕಿ ವೆನ್ನೆಲ್ಲಾ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಆರೋಪಿ, ಮಗುವಿನ ತಾಯಿ ಪ್ರಿಯಾಂಕಾಗೆ ಜಾಮೀನು ಸಿಕ್ಕಿದೆ (Vennella Case). ಪ್ರಿಯಾಂಕಾ ತನ್ನ ಪ್ರಿಯಕರ ಮೋಹನ್‌ ಜತೆ ಸೇರಿ ವೆನ್ನೆಲ್ಲಾಳನ್ನು ಕೊಲೆ ಮಾಡಿದ್ದಳು. ಇದೀಗ ಆರೋಪಿ ಪ್ರಿಯಾಂಕಾ ಪರ ವಕೀಲ ಪ್ರಸನ್ನ ವಾದ ಮಂಡಿಸಿ ಕೊಲೆಯಲ್ಲಿ ಪ್ರಿಯಾಂಕಾ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ವೃತ್ತಿಯಲ್ಲಿ ವಕೀಲೆಯಾಗಿದ್ದ ಬೆಂಗಳೂರು ಮೂಲದ ಪ್ರಿಯಾಂಕಾಗೆ 2007ರಲ್ಲಿ ದಾವಣಗೆರೆಯ ಪ್ರವೀಣ್‌ ಜತೆ ಮದುವೆಯಾಗಿತ್ತು. ಈ ದಂಪತಿಗೆ ವೆನ್ನೆಲ್ಲಾ ಮತ್ತು ಇನ್ನೊಬ್ಬ ಪುತ್ರಿ ಇದ್ದಾರೆ. ಪ್ರಿಯಾಂಕಾ ಕೆಲವು ತಿಂಗಳ ಹಿಂದೆ ಪತಿ ಪ್ರವೀಣ್‌ಗೆ ವಿಚ್ಛೇದನ ನೀಡಿ ಪ್ರಿಯಕರ ಜಿ. ಮೋಹನ್‌ ಜತೆ ವಾಸವಾಗಿದ್ದಳು. ಕಿರಿಯ ಮಗಳು ವೆನ್ನೆಲ್ಲಾ ತನ್ನ ತಾಯಿಯೊಂದಿಗೆ ಇದ್ದಳು. ಇತ್ತ ಆರೋಪಿ ಮೋಹನ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆತನೂ ತನ್ನ ಕುಟುಂಬವನ್ನು ತೊರೆದು ಪ್ರಿಯಾಂಕಾ ಜೊತೆ ವಾಸಿಸುತ್ತಿದ್ದ.

ವೆನ್ನೆಲ್ಲಾ ಕೊಲೆ

ಮಾರ್ಚ್ 24ರಂದು ವೆನ್ನೆಲ್ಲಾ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ತನಿಖೆ ಆರಂಭಿಸಿದಾಗ ಮಗುವಿನ ತಾಯಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಮೋಹನ್‌ ಕೊಲೆ ಮಾಡಿರುವ ಸಂಗತಿ ಬಯಲಾಗಿತ್ತು. ಅಂದು ಸಂಜೆ ಮನೆಯಿಂದ ಕಾರಿನಲ್ಲಿ ಮೂವರು ಹೊರಗೆ ಹೋಗಿದ್ದರು. ಊಟ ಮುಗಿಸಿ ಪ್ರಿಯಾಂಕಾ ಶಾಪಿಂಗ್‌ ಹೊರಗೆ ಹೋಗಿದ್ದಾಗ ಐಸ್‌ಕ್ರೀಂ ಮೆಲ್ಲುತ್ತಿದ್ದ ವೆನ್ನೆಲ್ಲಾ ಕೈಯಿಂದ ಸ್ವಲ್ಪ ಜಾರಿ ಕಾರ್‌ ಸೀಟ್‌ ಮೇಲೆ ಬಿದ್ದಿತ್ತು.

ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ

ಇದರಿಂದ ಕೋಪಗೊಂಡ ಮೋಹನ್ ಮಗುವಿನ ಹೊಟ್ಟೆಕ್ಕೆ ಬಲವಾಗಿ ಒದ್ದಿದ್ದ. ನೋವಿನಿಂದ ಮಗು ಜೋರಾಗಿ ಕಿರುಚಿದಾಗ ಬಾಯಿಯನ್ನು ಎರಡೂ ಕೈಗಳಿಂದ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಈ ವಿಷಯ ತಿಳಿದಿದ್ದರೂ ಬಳಿಕ ಪ್ರಿಯಾಂಕಾ ಮಾತ್ರ ಪೊಲೀಸರ ಮುಂದೆ ಬಿರಿಯಾನಿ ತಿಂದ ಬಳಿಕ ಮಗು ಸಾವನ್ನಪ್ಪಿತು ಎಂದು ಸುಳ್ಳು ಹೇಳಿಕೆ ನೀಡಿದ್ದಳು.

ಮಗುವಿನದ್ದು ಸಹಜ ಸಾವು ಎಂದು ಸಾಬೀತು ಪಡಿಸಲು ಪ್ರಿಯಾಂಕಾ ಮತ್ತು ಮೋಹನ್​​ ಯತ್ನಿಸಿದ್ದರು. ʼʼನಾನೇ ರಾತ್ರಿ ಬಿರಿಯಾನಿ ತಿನ್ನಿಸಿ ಮಲಗಿಸಿದ್ದ ಮಗು ಏಕಾಏಕಿ ಮೃತಪಟ್ಟಿದ್ದಾಳೆ. ಏನಾಗಿದೆ ಗೊತ್ತಿಲ್ಲʼʼ ಎಂದು ನಾಟಕವಾಡಿದ್ದಳು. ಆದರೆ ತನಿಖೆ ವೇಳೆ ಕೊಲೆ ಸಾಬೀತಾಗಿತ್ತು. ಪ್ರಿಯಾಂಕಾ ಕೂಡ ತನಗೆ ಮಗುವಿನ ಮೈಬಣ್ಣ ಇಷ್ಟವಿಲ್ಲದ ಕಾರಣಕ್ಕೆ, ಕೊಲೆಗೆ ಸಹಕರಿಸಿದ್ದಾಗಿ ಬಾಯ್ಬಿಟ್ಟಿದ್ದಳು.

ತಲೆ ಮರೆಸಿಕೊಂಡಿದ್ದ ಪ್ರಿಯಾಂಕಾ

ಆರಂಭದಲ್ಲಿ ಮೋಹನ್‌ ಸೆರೆ ಸಿಕ್ಕರೂ ಪ್ರಿಯಾಂಕಾ ತಲೆ ಮರೆಸಿಕೊಂಡಿದ್ದಳು. ಪೊಲೀಸರು ತನ್ನನ್ನು ಹುಡುಕುತ್ತಿರುವುದು ತಿಳಿಯುತ್ತಿದ್ದಂತೆ ಮೈಸೂರಿನಿಂದ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ತೆರಳಿ ತಲೆಮರೆಸಿಕೊಂಡಿದ್ದಳು. ಕಾಡುಗೋಡಿ ಪೊಲೀಸರು ನಾಲ್ಕು ದಿನಗಳಿಂದ ಹಗಲಿರುಳು ಸತತ ಹುಡುಕಾಟ ನಡೆಸಿ ಸಕಲೇಶಪುರದಲ್ಲಿ ಆಕೆಯನ್ನು ಬಂಧಿಸಿದ್ದರು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author