ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka CM row: ವಿಜಯೇಂದ್ರ ಸಿಎಂ ಆಗೋಕೆ ಕಾಯ್ಕೊಂಡು ಕೂತಿದ್ದಾನೆ; ಅಶೋಕ್‌ಗೆ ಸಿಎಂ ಮಾತಿನ ಪಂಚ್‌

CM Siddaramaiah: ನೀವೇ ಸಿಎಂ ಆಗಿದ್ದರೆ ನಿಮ್ಮ ಪಕ್ಕದಲ್ಲಿ ಇರುವವರ ಕನಸು ನನಸಾಗೋದು ಯಾವಾಗ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ನಮ್ಮಲ್ಲಿ ಇರುವ ಎಲ್ಲಾ ಶಾಸಕರೂ ಸಿಎಂ ಆಗಲು ಅರ್ಹರೇ. ಎಲ್ಲರಿಗೂ ಯೋಗ್ಯತೆ ಇದೆ, ಆದರೆ ಅವಕಾಶಗಳು ಸಿಗಲ್ಲ ಎಂದು ಎಂದಿದ್ದಾರೆ.

ಬಿ.ವೈ.ವಿಜಯೇಂದ್ರ, ಆರ್‌.ಅಶೊಕ್‌ ಮತ್ತು ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ಸಿಎಂ ಬದಲಾವಣೆ ವಿಚಾರದ ಬಗ್ಗೆ ಸದನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಹೈಕಮಾಂಡ್‌ ಎಲ್ಲಿವರೆಗೂ ಸಿಎಂ ಆಗಿರಿ ಎನ್ನುವರೋ ಅಲ್ಲಿವರೆಗೆ ಸಿಎಂ ಆಗಿರ್ತೇನೆ ಎಂದರು. ಈ ವೇಳೆ ವಿಪಕ್ಷ ನಾಯಕ ಆರ್‌. ಅಶೋಕ್‌ ಮಾತನಾಡಿ, ನಿಮ್ಮ ಪಕ್ಕದಲ್ಲಿರುವವವರು ಕೂಡ ತುಂಬಾ ಕನಸುಗಳು ಇಟ್ಟುಕೊಂಡಿರುತ್ತಾರೆ ಎಂದು ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅಶೋಕ್‌ ನೀನು ಏನೇ ಕಿತಾಪತಿ ಮಾಡಿದರೂ ನಮ್ಮ ಪಕ್ಷದವರು ಅದಕ್ಕೆ ಮನ್ನಣೆ ಕೊಡಲ್ಲ. ಸಿಎಂ ಆಗಬೇಕು ಎಂದು ನಿನಗೂ ಕನಸು ಇರುತ್ತೆ, ಬೇರೆಯವರಿಗೂ ಕನಸು ಇರುತ್ತೆ. ನೋಡು ಅಲ್ಲಿ ವಿಜಯೇಂದ್ರ ಕಾಯ್ತಾ ಕೂತಿದ್ದಾರೆ. ನೀನು ಏನೇ ಮಾಡಿದರೂ ವಿಜಯೇಂದ್ರ ಯಾರಿಗೂ ಸೀಟ್‌ ಬಿಡಲ್ಲ ಎಂದು ನಗುತ್ತಲೇ ಹೇಳಿದರು. ಇಬ್ಬರು ನಾಯಕರ ಮಾತುಗಳು ಸದನವನ್ನು ನಗೆಗಡಲಲ್ಲಿ ತೇಲಿಸಿತು.