ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka Public Holidays List: 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟ; 18 ಸಾರ್ವತ್ರಿಕ, 19 ಪರಿಮಿತ ರಜೆಗೆ ಸಚಿವ ಸಂಪುಟ ಒಪ್ಪಿಗೆ

ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಿಗೆ ಈ ಸಾರ್ವತ್ರಿಕ ರಜೆಗಳು ಅನ್ವಯವಾಗಲಿವೆ. ಒಟ್ಟು 18 ಸಾರ್ವತ್ರಿಕ ರಜೆಗಳು ಮತ್ತು 19 ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಲಾಗಿದೆ. ಇನ್ನು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ 3 ದಿನ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಬೆಂಗಳೂರು: 2027ನೇ ಕ್ಯಾಲೆಂಡರ್ ವರ್ಷದ ಸಾರ್ವತ್ರಿಕ ರಜಾ ದಿನಗಳು ಹಾಗೂ ಪರಿಮಿತ ರಜಾ ದಿನಗಳ ಅಧಿಕೃತ ಪಟ್ಟಿಗೆ (Karnataka Public Holidays List 2027) ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಾಮಾನ್ಯವಾಗಿ ಬರುವ ಭಾನುವಾರ, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ, ಮುಂದಿನ ವರ್ಷದಲ್ಲಿ ಒಟ್ಟು 18 ಸಾರ್ವತ್ರಿಕ ರಜೆಗಳು ಮತ್ತು 19 ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಲಾಗಿದೆ.

ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಿಗೆ ಈ ಸಾರ್ವತ್ರಿಕ ರಜೆಗಳು ಅನ್ವಯವಾಗಲಿವೆ. ಸರ್ಕಾರಿ ನೌಕರರು ತಮ್ಮ ವಿವೇಚನೆಗೆ ತಕ್ಕಂತೆ ಪರಿಮಿತ ರಜೆಗಳ ಪಟ್ಟಿಯಿಂದ ನಿಗದಿತ ಸಂಖ್ಯೆಯ ರಜೆಗಳನ್ನು ಆಯ್ದುಕೊಳ್ಳಲು ಅವಕಾಶವಿರುತ್ತದೆ.

2027ರ ಸಾರ್ವತ್ರಿಕ ರಜೆಗಳ ಪಟ್ಟಿ

  • ಜನವರಿ 15: ಮಕರ ಸಂಕ್ರಾಂತಿ
  • ಜನವರಿ 26: ಗಣರಾಜ್ಯೋತ್ಸವ
  • ಮಾರ್ಚ್ 6: ಮಹಾ ಶಿವರಾತ್ರಿ
  • ಮಾರ್ಚ್ 10: ಖುತುಬ್-ಎ-ರಂಜಾನ್
  • ಮಾರ್ಚ್ 26: ಗುಡ್ ಫ್ರೈಡೇ
  • ಏಪ್ರಿಲ್ 7: ಚಾಂದ್ರಮಾನ ಯುಗಾದಿ
  • ಏಪ್ರಿಲ್ 14: ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
  • ಮೇ 1: ಕಾರ್ಮಿಕ ದಿನಾಚರಣೆ
  • ಮೇ 17: ಬಕ್ರೀದ್
  • ಜೂನ್ 16: ಮೊಹರಂ ಕಡೆ ದಿನ
  • ಸೆಪ್ಟೆಂಬರ್ 4: ವರಸಿದ್ಧಿ ವಿನಾಯಕ ವ್ರತ (ಗಣೇಶ ಚತುರ್ಥಿ)
  • ಸೆಪ್ಟೆಂಬರ್ 29: ಮಹಾಲಯ ಅಮಾವಾಸ್ಯೆ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ಅಕ್ಟೋಬರ್ 15: ವಾಲ್ಮೀಕಿ ಜಯಂತಿ
  • ಅಕ್ಟೋಬರ್ 28: ನರಕ ಚತುರ್ದಶಿ
  • ಅಕ್ಟೋಬರ್ 30: ದೀಪಾವಳಿ
  • ನವೆಂಬರ್ 1: ಕನ್ನಡ ರಾಜ್ಯೋತ್ಸವ
  • ನವೆಂಬರ್ 16: ಕನಕದಾಸ ಜಯಂತಿ

2027ರ ಪರಿಮಿತ ರಜೆಗಳ (RH) ಪಟ್ಟಿ:

  • ಜನವರಿ 1: ಹೊಸ ವರ್ಷಾರಂಭ
  • ಫೆಬ್ರವರಿ 15: ಮಧ್ವ ನವಮಿ
  • ಮಾರ್ಚ್ 5: ಜುಮತ್-ಉಲ್-ವಿದಾ
  • ಏಪ್ರಿಲ್ 15: ರಾಮನವಮಿ
  • ಮೇ 10: ರಾಮಾನುಜಾಚಾರ್ಯ ಜಯಂತಿ
  • ಮೇ 11: ಶಂಕರಾಚಾರ್ಯ ಜಯಂತಿ
  • ಮೇ 20: ಬುದ್ಧಪೂರ್ಣಿಮ
  • ಆಗಸ್ಟ್ 13: ವರಮಹಾಲಕ್ಷ್ಮಿ ವ್ರತ
  • ಆಗಸ್ಟ್ 16: ಋಗ್ ಉಪಾಕರ್ಮ
  • ಆಗಸ್ಟ್ 17: ಯಜುರ್ ಉಪಾಕರ್ಮ
  • ಆಗಸ್ಟ್ 24: ಕೃಷ್ಣ ಜನ್ಮಾಷ್ಟಮಿ
  • ಸೆಪ್ಟೆಂಬರ್ 3: ಸ್ವರ್ಣಗೌರಿ ವ್ರತ
  • ಸೆಪ್ಟೆಂಬರ್ 9: ಕನ್ಯಾ ಮರಿಯಂ ಜಯಂತಿ
  • ಸೆಪ್ಟೆಂಬರ್ 14: ಅನಂತ ಪದ್ಮನಾಭ ವ್ರತ
  • ಸೆಪ್ಟೆಂಬರ್ 15: ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ
  • ಸೆಪ್ಟೆಂಬರ್ 17: ವಿಶ್ವಕರ್ಮ ಜಯಂತಿ
  • ಅಕ್ಟೋಬರ್ 18: ತುಲಾ ಸಂಕ್ರಮಣ ಪುಣ್ಯಕಾಲ
  • ಡಿಸೆಂಬರ್ 13: ಹುತ್ತರಿ ಹಬ್ಬ
  • ಡಿಸೆಂಬರ್ 24: ಕ್ರಿಸ್‌ಮಸ್ ಈವ್

ಶಾಬೆ-ಬರಾತ್ (ಜ.24), ಶಬ್-ಎ-ಖಾದರ್ (ಮಾ.7), ಹೋಳಿ ಹಬ್ಬ (ಮಾ.21), ದೇವಾಂಗ ದಾಸಿಮಯ್ಯ ಜಯಂತಿ (ಏ.11), ತಿರು ಓಣಂ (ಸೆ.12) ಮತ್ತು ಗುರುನಾನಕ್ ಜಯಂತಿ (ನ.14) ಭಾನುವಾರದಂದು ಹಾಗೂ ಪವಿತ್ರ ಶನಿವಾರ (ಮಾ.27) ನಾಲ್ಕನೇ ಶನಿವಾರ ಬಂದಿರುವುದರಿಂದ ಪರಿಮಿತ ರಜೆ ಪಟ್ಟಿಯಲ್ಲಿ ಸೇರಿಸಿಲ್ಲ.

ಪಟ್ಟಿಯಿಂದ ಕೈಬಿಡಲಾದ ರಜೆಗಳು:

2027ರಲ್ಲಿ ಮಹಾವೀರ ಜಯಂತಿ (ಏಪ್ರಿಲ್ 18), ಬಸವೇಶ್ವರ ಜಯಂತಿ (ಮೇ 9), ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15), ಈದ್-ಮಿಲಾದ್ (ಸೆಪ್ಟೆಂಬರ್ 15) ಮತ್ತು ವಿಜಯದಶಮಿ (ಅಕ್ಟೋಬರ್ 10) ಭಾನುವಾರದಂದು ಬಂದಿವೆ. ಅಲ್ಲದೆ, ಮಹಾನವಮಿ/ಆಯುಧಪೂಜೆ (ಅಕ್ಟೋಬರ್ 9) ಎರಡನೇ ಶನಿವಾರ ಹಾಗೂ ಕ್ರಿಸ್‌ಮಸ್ (ಡಿಸೆಂಬರ್ 25) ನಾಲ್ಕನೇ ಶನಿವಾರ ಬಂದಿರುವುದರಿಂದ ಈ ರಜೆಗಳನ್ನು ಸಾರ್ವತ್ರಿಕ ರಜೆ ಪಟ್ಟಿಯಲ್ಲಿ ಪ್ರತ್ಯೇಕವಾಗಿ ತೋರಿಸಿಲ್ಲ.

ಕೊಡಗು ಜಿಲ್ಲೆಗೆ ವಿಶೇಷ ರಜೆ: 

ಇನ್ನು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸೆಪ್ಟೆಂಬರ್ 3 (ಶುಕ್ರವಾರ) ಕೈಲ್ ಮುಹೂರ್ತ, ಅಕ್ಟೋಬರ್ 18 (ಸೋಮವಾರ) ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 13 (ಸೋಮವಾರ) ಹುತ್ತರಿ ಹಬ್ಬದ ಪ್ರಯುಕ್ತ ಸ್ಥಳೀಯ ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದೆ.