ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Corporation, Boards: 34 ನಿಗಮ, ಮಂಡಳಿಗಳಿಗೆ ನೂತನ ಅಧ್ಯಕ್ಷರ ನೇಮಕ ಮಾಡಿದ ಸರ್ಕಾರ

Karnataka Government: ನೂತನ ಅಧ್ಯಕ್ಷರನ್ನು ನೇಮಕಗೊಂಡ ದಿನಾಂಕದಿಂದ ಮುಂದಿನ ಎರಡು ವರ್ಷಗಳ ಅವಧಿಯವರೆಗೆ ನೇಮಿಸಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಸ್ಥಾನದ ಗೊಂದಲ ಬಗೆಹರಿದಿದ್ದು, ರಾಜೂ ಕಾಗೆ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

34 ನಿಗಮ, ಮಂಡಳಿಗಳಿಗೆ ನೂತನ ಅಧ್ಯಕ್ಷರ ನೇಮಕ ಮಾಡಿದ ಸರ್ಕಾರ

-

Prabhakara R Prabhakara R Sep 26, 2025 9:47 PM

ಬೆಂಗಳೂರು: ರಾಜ್ಯದ 34 ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿಗಮ, ಮಂಡಳಿಗಳು (Corporation, Boards) ಅಧ್ಯಕ್ಷ ಸ್ಥಾನ ಪಟ್ಟಿ ಬಿಡುಗಡೆ ಬಳಿಕ ಗೊಂದಲ ಏರ್ಪಟ್ಟಿತ್ತು. ಎಐಸಿಸಿ ರವಾನಿಸಿದ್ದ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೊಂಚ ಮಾರ್ಪಾಡು ಮಾಡಿ ಅಧಿಕೃತ ಮುದ್ರೆ ಹಾಕಿದ್ದಾರೆ.

ಎಐಸಿಸಿಯಿಂದ ಒಟ್ಟು 39 ಹೆಸರಿನ ಬದಲಿಗೆ ಸಿಎಂ ಸಿದ್ದರಾಮಯ್ಯ ಅವರು 34 ಮಂದಿಗೆ ಅಧ್ಯಕ್ಷರ ಪಟ್ಟಿಗೆ ಅಂಕಿತ ಹಾಕಿದ್ದಾರೆ. ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಇಲಾಖೆಗಳಿಗೆ ಪಟ್ಟಿ ರವಾನೆ ಮಾಡಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಸ್ಥಾನದ ಗೊಂದಲ ವಿಚಾರಕ್ಕೆ ಸಂಬಂಧ ಪಟ್ಟಂತೆ ರಾಜೂ ಕಾಗೆ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಇನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರಾಗಿ ಅರುಣ್ ಕುಮಾರ್ ಪಾಟೀಲ್ ನೇಮಕವಾಗಿದ್ದಾರೆ. ಆದರೆ ಇದು ಎಐಸಿಸಿ ಪಟ್ಟಿಯಲ್ಲಿ ನೀಲಕಂಠ ಮುಳಗೆಗೆ ಹಂಚಿಕೆಯಾಗಿತ್ತು. ಈಗ ನೀಲಕಂಠ ಬದಲು ಅರುಣ್‌ ಕುಮಾರ್ ಪಾಟೀಲ್​ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಪಟ್ಟ ನೀಡಲಾಗಿದೆ.

ಶಿವಲೀಲಾ ವಿನಯ್‌ ಕುಲಕರ್ಣಿ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣೀಕರಣ ಸಂಸ್ಥೆಯ ಅಧ್ಯಕ್ಷರಾಗಿ ಲಾವಣ್ಯ ಬಲ್ಲಾಳ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಶಾಲೆಟ್ ಪಿಂಟೋ, ಮೈಸೂರು ಪೇಂಟ್ಸ್, ವಾರ್ನಿಶ್ ಲಿಮಿಟೆಡ್ ನಿಗಮಕ್ಕೆ ಎಚ್‌. ಡಿ ಗಣೇಶ್, ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕವಾಗಿದ್ದಾರೆ.

ನೂತನ ಅಧ್ಯಕ್ಷರನ್ನು ನೇಮಕಗೊಂಡ ದಿನಾಂಕದಿಂದ ಮುಂದಿನ ಎರಡು ವರ್ಷಗಳ ಅವಧಿಯವರೆಗೆ ನೇಮಿಸಲಾಗಿದೆ.

ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ಪಟ್ಟಿ

1.ಪಿ.ರಘು - ಸಫಾಯಿ ಕರ್ಮಚಾರಿ ಆಯೋಗ

2.ಶಿವಲೀಲಾ ವಿನಯ್‌ ಕುಲಕರ್ಣಿ - ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

3.ವಡ್ನಾಳ್‌ ಜಗದೀಶ್‌ - ಜೀವವೈವಿಧ್ಯ ಮಂಡಳಿ

4.ಮುರಳಿ ಅಶೋಕ್‌ - ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

5.ಡಾ.ಮೂರ್ತಿ - ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ

6.ಕರ್ನಲ್ ಮಲ್ಲಿಕಾರ್ಜುನ್‌ - ಮಾಜಿ ಸೈನಿಕರ ಕಲ್ಯಾಣ ಮಂಡಳಿ

7.ಡಾ.ಬಿ.ಸಿ.ಮುದ್ದುಗಂಗಾಧರ್‌ - ಮಾವು ಅಭಿವೃದ್ಧಿ ನಿಗಮ

8.‌ ಶಾಲೆಟ್‌ ಪಿಂಟೋ - ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

9. ಜಿ.ಎಚ್. ಮರಿಯೋಜಿ ರಾವ್‌ - ಮರಾಠ ಅಭಿವೃದ್ಧಿ ನಿಗಮ

10.ಎಂ.ಎ.ಗಫೂರ್‌ - ಕರಾವಳಿ ಅಭಿವೃದ್ಧಿ ಪ್ರಾಧಿಕಾರ

11.ಕೆ. ಹರೀಶ್‌ ಕುಮಾರ್‌ - ಮೆಸ್ಕಾಂ

12. ಎನ್‌. ಸಂಪಂಗಿ - ಕರ್ನಾಟಕ ರಾಜ್ಯ ಉಗ್ರಾಣ ನಿಗಮ

13.ವೈ. ಸಯೀದ್‌ ಅಹ್ಮದ್‌ -ದೇವರಾಜ ಅರಸು ಟ್ರಕ್‌ ಟರ್ಮಿನಲ್‌

14. ಮಹೇಶ್‌ ಎಂ. - ಕಾಡುಗೊಲ್ಲಅಭಿವೃದ್ಧಿ ನಿಗಮ

15. ಎಚ್‌.ಬಿ. ಮಂಜಪ್ಪ - ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ

16. ಭರಮಣ್ಣ ಉಪ್ಪಾರ - ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ

17.ಅಗಾ ಸುಲ್ತಾನ್‌ - ಕೇಂದ್ರ ಪರಿಹಾರ ಸಮಿತಿ

18.ಎಸ್‌.ಜಿ. ನಂಜಯ್ಯನಮಠ - ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ

19. ಅರುಣ್‌ ಕುಮಾರ್‌ ಪಾಟೀಲ್‌-ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

20. ಬಾಬು ಹೊನ್ನಾ ನಾಯ್ಕ್‌ - ಕಾಡಾ, ಭೀಮರಾಯನಗುಡಿ, ಕಲಬುರಗಿ

21. ಯುವರಾಜ್‌ ಕದಮ್‌ - ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ, ಬೆಳಗಾವಿ

22. ಪ್ರವೀಣ್‌ ಕುಮಾರ್‌ ಪಾಟೀಲ್‌- ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ

23. ಮಂಜುನಾಥ ಪೂಜಾರಿ - ನಾರಾಯಣ ಗುರು ಅಭಿವೃದ್ಧಿ ನಿಗಮ

24. ಎಂ.ಎಸ್‌. ಮುತ್ತುರಾಜ್‌ - ಸವಿತಾ ಸಮಾಜ ಅಭಿವೃದ್ಧಿ ನಿಗಮ

25. ನಂಜಪ್ಪ - ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ

26. ವಿಶ್ವಾಸ್‌ ಕುಮಾರ್‌ ದಾಸ್‌ - ಗಾಣಿಗ ಅಭಿವೃದ್ಧಿ ನಿಗಮ

27. ಎಸ್‌. ಗಂಗಾಧರ್‌ - ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್‌

28. ಪಟೇಲ್‌ ಶಿವಣ್ಣ -ಹಾಸನ ನಗರಾಭಿವೃದ್ಧಿ ಪ್ರಾಧಿಕಾರ

29. ಡಾ. ಶ್ರೀನಿವಾಸನ್‌ ವೇಲು - ಕುಂಬಾರ ಅಭಿವೃದ್ಧಿ ನಿಗಮ

30. ಟಿ.ಎಂ. ಶಹೀದ್‌ ತೆಕ್ಕಿಲ್‌ - ರಾಜ್ಯ ಕನಿಷ್ಠ ವೇತನ ಮಂಡಳಿ

31. ಚೇತನ್‌ ಕೆ. ಗೌಡ - ರಾಜ್ಯ ಜವಳಿ, ಮೂಲ ಸೌಕರ್ಯ ಅಭಿವೃದ್ಧಿ ನಿಮ

32. ಲಾವಣ್ಯ ಬಲ್ಲಾಳ್‌ ಜೈನ್‌ -ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆ

33. ಎಚ್‌.ಡಿ.ಗಣೇಶ್‌-ಮೈಸೂರು ಪೇಂಟ್ಸ್‌, ವಾರ್ನಿಷ್‌ ಲಿಮಿಟೆಡ್‌

34. ನಿಕೇತ್‌ ರಾಜ್‌- ಬಿಎಂಟಿಸಿ