ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯದ ಕ್ರೀಡಾ ಸಾಧಕರಿಗೆ ಗುಡ್‌ನ್ಯೂಸ್‌; ಸರ್ಕಾರಿ ಹುದ್ದೆಗಳಲ್ಲಿ ಶೇ. 2 ಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ

Reservation for Sportspersons: ಸರ್ಕಾರದ ಈ ನೂತನ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಇನ್ನು ಮುಂದೆ ಪ್ರಕಟವಾಗುವ ಎಲ್ಲ ಹೊಸ ನೇರ ನೇಮಕಾತಿ ಅಧಿಸೂಚನೆಗಳಿಗೂ ಅನ್ವಯವಾಗಲಿದೆ. ಹಿಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸಮತಳ ಮೀಸಲಾತಿ ರೋಸ್ಟರ್ ಯಾವ ಬಿಂದುವಿಗೆ ಕೊನೆಗೊಂಡಿತ್ತೋ, ನಂತರದ ಬಿಂದುವಿನಿಂದಲೇ ಮುಂದಿನ ನೇಮಕಾತಿಯನ್ನು ಮುಂದುವರಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳ ವಿವಿಧ ಹುದ್ದೆಗಳ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ. 2ರಷ್ಟು ಸಮತಳ ಮೀಸಲಾತಿ (Reservation for Sportspersons) ಕಲ್ಪಿಸುವ ನಿಟ್ಟಿನಲ್ಲಿ 100 ಬಿಂದುಗಳ ನೂತನ ಸಮತಳ ರೋಸ್ಟರ್ ಅನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು, 2026ರ ಅನ್ವಯ ನೇರ ನೇಮಕಾತಿಗಾಗಿ ಲಭ್ಯವಾಗುವ ಸ್ಥಾನಗಳಲ್ಲಿ ಸಾಮಾನ್ಯ ಅರ್ಹತೆ, ಪರಿಶಿಷ್ಟ ಜಾತಿ ಪ್ರವರ್ಗ-ಎ ಪರಿಶಿಷ್ಟ ಜಾತಿ ಪ್ರವರ್ಗ-ಬಿ, ಪರಿಶಿಷ್ಟ ಜಾತಿ ಪ್ರವರ್ಗ-ಸಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಾದ ಪ್ರವರ್ಗ-I, ಪ್ರವರ್ಗ-II ಎ, ಪ್ರವರ್ಗ- II ಬಿ, ಪ್ರವರ್ಗ III ಎ ಹಾಗೂ ಪ್ರವರ್ಗ-III ಬಿ ವರ್ಗಗಳಿಗಾಗಿ ವಿಂಗಡಿಸಿಕೊಂಡು, ಈ ಪ್ರತಿಯೊಂದು ನೇರ ನೇಮಕಾತಿ ಪ್ರವರ್ಗ (vertical reservation) ಕ್ಕೆ ಲಭ್ಯವಾಗುವ ರಿಕ್ತಸ್ಥಾನಗಳಿಗೆ ನೂತನ ಪರಿಷ್ಕರಣೆಯ ಪ್ರಕಾರ 100 ಬಿಂದುಗಳ ರೋಸ್ಟರ್ ಪೈಕಿ ಬಿಂದು ಸಂಖ್ಯೆ 21 ಮತ್ತು 61 ಅನ್ನು ಕ್ರೀಡಾ ಸಾಧಕರಿಗಾಗಿ ಪ್ರತ್ಯೇಕವಾಗಿ ಗುರುತಿಸಲಾಗಿದೆ.

ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ. ಈ ಆದೇಶವನ್ನು ಹೊರಡಿಸಿದ ನಂತರ ಯಾವುದೇ ನೇರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ಸಂದರ್ಭದಲ್ಲಿ ಹಿಂದಿನ ನೇರ ನೇಮಕಾತಿಯಲ್ಲಿ ಸಮತಳ ಮೀಸಲಾತಿ ರೋಸ್ಟರನ್ನು ಯಾವ ಬಿಂದುವಿನವರೆಗೆ ಜಾರಿಗೊಳಿಸಲಾಗಿತ್ತೋ, ಆ ನಂತರದ ಬಿಂದುವಿನಿಂದ ಪ್ರಾರಂಭಿಸತಕ್ಕದ್ದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಸಮತಳ ಮೀಸಲಾತಿ, ಆಸ್ಪದವನ್ನು ಕಲ್ಪಿಸಿರುವ ಅಧಿನಿಯಮ /ನಿಯಮ, ಮೀಸಲಾತಿಯ ಪ್ರಮಾಣವನ್ನು ಈ ಕೆಳಗೆ ವಿವರಿಸಲಾಗಿದೆ.

WhatsApp Image 2026-10-13 at 11.01.59 PM

WhatsApp Image 2026-10-13 at 11.02.11 PM