Karnataka State Film Awards: 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆ; ಕಿಚ್ಚ ಸುದೀಪ್ ಅತ್ಯುತ್ತಮ ನಟ, ಅನುಪಮಾ ಗೌಡ ಅತ್ಯುತ್ತಮ ನಟಿ
Karnataka State Film Awards: ಪೈಲ್ವಾನ್ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಟ ಮತ್ತು ತ್ರಯಂಬಕಂ ಸಿನಿಮಾಗಾಗಿ ಅನುಪಮಾ ಗೌಡ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ (Karnataka State Film Awards೦ ಆಯ್ಕೆಯಾಗಿದ್ದಾರೆ.
ಬೆಂಗಳೂರು: 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು (Karnataka State Fim Awards)ಕರ್ನಾಟಕ ಸರ್ಕಾರವು ಘೋಷಿಸಿದೆ. ಪೈಲ್ವಾನ್ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಟ ಮತ್ತು ತ್ರಯಂಬಕಂ ಸಿನಿಮಾಗಾಗಿ ಅನುಪಮಾ ಗೌಡ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಚಲನಚಿತ್ರ ಪ್ರಶಸ್ತಿ ಪುರಸ್ಕೃತರ ಪಟ್ಟಿ
1.ಅತ್ಯುತ್ತಮ ಚಿತ್ರ: ಮೋಹನದಾಸ
ಪಿ. ಶೇಷಾದ್ರಿ ನಿರ್ದೇಶನದ ಚಿತ್ರ
2.ದ್ವಿತಿಯ ಅತ್ಯುತ್ತಮ ಚಿತ್ರ : ಲವ್ ಮಾಕ್ ಟೈಲ್
ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ
3.ಅತ್ಯುತ್ತಮ ನಟ- ಸುದೀಪ್
ಪೈಲ್ವಾನ್ ಚಿತ್ರಕ್ಕಾಗಿ
4.ಅತ್ಯುತ್ತಮ ನಟಿ- ಅನುಪಮಾ ಗೌಡ
ತ್ರಯಂಬಕಂ ಸಿನಿಮಾಗಾಗಿ
5.ಅತ್ಯುತ್ತಮ ಪೋಷಕ ನಟ
ತಬಲಾ ನಾಣಿ (ಕಮೆಸ್ಟ್ರಿ ಆಫ್ ಕರಿಯಪ್ಪ)
6.ಅತ್ಯುತ್ತಮ ಪೋಷಕ ನಟಿ
ಅನುಷಾ ಕೃಷ್ಣ (ಬ್ರಾಹ್ಮಿಂ)
7.ತೃತಿಯ ಅತ್ಯುತ್ತಮ ಚಿತ್ರ : ಅರ್ಘ್ಯಂ
ವೈ ಶ್ರೀನಿವಾಸ್ ನಿರ್ದೇಶನಕ
ಈ ಸುದ್ದಿಯನ್ನೂ ಓದಿ | Rashmika Mandanna: ಮಹಾರಾಣಿ ಯೆಸುಬಾಯಿ ಅವತಾರದಲ್ಲಿ ರಶ್ಮಿಕಾ ಮಿಂಚು; ವಿಕ್ಕಿ ಕೌಶಲ್ ಜತೆಗಿನ 'ಛಾವಾ' ಚಿತ್ರದ ಪೋಸ್ಟರ್ ಔಟ್
ನಟ ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಚಿತ್ರ ಸೂಪರ್ ಹಿಟ್ ಆದ ಸಮಯದಲ್ಲೇ ನಟ ಸುದೀಪ್ ಅವರಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. 2019ರ ಅತ್ಯತ್ತಮ ನಟ ಪ್ರಶಸ್ತಿಯನ್ನು ನಟ ಕಿಚ್ಚ ಸುದೀಪ್ ಅವರು ತಮ್ಮ ಪೈಲ್ವಾನ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. 2024ರ ಕೊನೆಯ ವಾರದಲ್ಲಿ ಬಿಡುಗಡೆ ಕಂಡು ಜಯಭೇರಿ ಭಾರಿಸಿರುವ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು 2024ರ ಸೂಪರ್ ಹಿಟ್ ಚಿತ್ರ ಎಂಬ ಖ್ಯಾತಿ ಪಡೆದಿದೆ. ಇದೀಗ, 2019ರ ಸಿನಿಮಾ ಪೈಲ್ವಾನ್‌ಗಾಗಿ ನಟ ಸುದೀಪ್ ಅವರು ಪ್ರಶಸ್ತಿ ಪಡೆದಿದ್ದಾರೆ.
ಇನ್ನು ತ್ರಯಂಬಕಂ ಸಿನಿಮಾಗಾಗಿ ನಟಿ ಅನುಪಮಾ ಗೌಡ ಅವರು 2019ರ ಸಾಲಿನ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮನಮುಟ್ಟುವ ನಿರೂಪಣೆಯಿಂದ ಕರುನಾಡಿನಲ್ಲಿ ತಮ್ಮದೇ ಆದ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದಾರೆ. ನಟಿ ಹಾಗು ನಿರೂಪಕಿ ಅನುಪಮಾ ಗೌಡ ಇದೀಗ ಸಿನಿಮಾ ನಟನೆಗಾಗಿ ಪ್ರಶಸ್ತಿ ಪಡೆದಿದ್ದಾರೆ.