ಬೆಂಗಳೂರು: ದೇಶ, ರಾಜ್ಯ ರಾಜಕೀಯ, ಮಳೆ-ಬೆಳೆ ಸೇರಿ ವಿವಿಧ ವಿದ್ಯಮಾನಗಳ ಬಗ್ಗೆ ಭವಿಷ್ಯ ಹೇಳುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಇದೀಗ (Kodi Mutt Swamijiʼs Prediction) ಮತ್ತೊಂದು ಸ್ಫೋಟಕ ಭವಿಷ್ಯವಾಣಿ ನುಡಿದಿದ್ದಾರೆ.
ಯಲಹಂಕ ಸಮೀಪದ ಬಂಡಿಕೋಡಿಗೆಹಳ್ಳಿಯಲ್ಲಿರುವ ಶನೇಶ್ವರ ದೇವಸ್ಥಾನದ 4ನೇ ವರ್ಷದ ಲಕ್ಷದೀಪೋತ್ಸವದಲ್ಲಿ ಭಾಗಿಯಾಗಿದ್ದ ವೇಳೆ ಸ್ವಾಮೀಜಿಗಳು ಮಾತನಾಡಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಡಲಿದೆ. ಜನರು ನೀರಿಗೆ, ಅನ್ನಕ್ಕೆ ಕಷ್ಟ ಪಡಬೇಕಾಗುತ್ತೆ, ಹಿಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗಲಿದೆ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದರು.
ಶನೇಶ್ವರ ಅಂದ್ರೆ ಕೆಟ್ಟದ್ದು ಮಾಡುವ ದೇವರು ಅನ್ನೋ ಭಾವನೆ ಇದೆ. ಆದರೆ ಮನುಷ್ಯನ ಅತ್ಯಂತ ಆತ್ಮೀಯ ಸ್ನೇಹಿತ ಅಂದ್ರೆ ಅದು ಶನೇಶ್ವರ. ನವಗ್ರಹಗಳಲ್ಲಿ ಶನೇಶ್ವರನಿಗೆ ವಿಶೇಷ ಸ್ಥಾನ ಇದೆ. ಶನೇಶ್ವರ ಪ್ರೀತಿ ಗಳಿಸಿಕೊಂಡರೆ ಒಳಿತನ್ನು ಮಾಡುತ್ತಾನೆ ಎಂದು ಕೋಡಿಶ್ರೀಗಳು ಹೇಳಿದರು.
ಮಧುಗಿರಿಯ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಪ್ರಸಾದ ವಿನಿಯೋಗ
ಇನ್ನು, ಇದೇ ವೇಳೆ ನೇಪಾಳದ ಪ್ರವಾಹದ ಬಗ್ಗೆ ಮಾತನಾಡಿದ ಕೋಡಿಮಠ ಶ್ರೀಗಳು, ಮನುಷ್ಯನ ಸ್ವಾರ್ಥಕ್ಕೆ ಭೂಮಿ ಅಗೆಯುತ್ತಿದ್ದಾನೆ. ಭೂ ಗರ್ಭದೊಳಗಿನ ಬಂಡೆಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾನೆ. ಭೂಮಿಯೊಳಗಿನ ಬಂಡೆಯನ್ನು ಒಡೆಯುತ್ತಿರುವುದೇ ಸಾಕಷ್ಟು ಅನಾಹುತಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದರು.