ಬೆಂಗಳೂರು: ಉಳಿಕೆ ಮೂಲ ವೃಂದದ (RPC) 560 ಭೂಮಾಪಕರ ಹುದ್ದೆ (Land surveyors Exam) ಹಾಗೂ 505 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ (VAO Exam) ಕ್ರಮವಾಗಿ ಅ.2 ಮತ್ತು 4ರಂದು ಲಿಖಿತ ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರವೇಶ ಪತ್ರ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್ ಮೂಲಕ ಹಾಲ್ ಟಿಕೆಟ್ (KEA Exam Hall ticket) ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಭೂಮಾಪಕರ ಹುದ್ದೆಗಳಿಗೆ 92,701 ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ 4,11,656 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷಾ ಕೇಂದ್ರದ ಮಾಹಿತಿಯನ್ನು ನೋಡಿ, ಆ ಪ್ರಕಾರ ಪರೀಕ್ಷೆಗೆ ಹಾಜರಾಗಲು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಸೂಚಿಸಿದ್ದಾರೆ.
ಹಾಲ್ ಟಿಕೆಟ್ ಡೌನ್‌ಲೋಡ್ ಹೇಗೆ?
ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ, ಮುಖಪುಟದ ನೇಮಕಾತಿ ವಿಭಾಗದಲ್ಲಿ ಭೂಮಾಪಕ, ಆಡಳಿತಾಧಿಕಾರಿ (ಆರ್‌ಪಿಸಿ) ಲಿಂಕ್ ಮೇಲೆ ಕ್ಲಿಕ್ ಮಾಡಿ, ಅರ್ಜಿ ಸಂಖ್ಯೆ, ಅಭ್ಯರ್ಥಿ ಹೆಸರು ನಮೂದಿಸಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆಡಳಿತಾಧಿಕಾರಿ ಹುದ್ದೆ ಪರೀಕ್ಷೆ ಪ್ರವೇಶ ಪತ್ರಕ್ಕೆ ಈ ಲಿಂಕ್ KEA VAO_EXAM_PORTAL ಕ್ಲಿಕ್ ಮಾಡಿ.
ಭೂಮಾಪಕರ ಹುದ್ದೆ ಪರೀಕ್ಷೆ ಪ್ರವೇಶ ಪತ್ರಕ್ಕೆ ಈ ಲಿಂಕ್ KEA_Land surveyor EXAM_PORTAL/ ಕ್ಲಿಕ್ ಮಾಡಿ.
ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷೆ ಯಾವಾಗ?
ಸದ್ಯ ಉಳಿಕೆ ಮೂಲ ವೃಂದದ ಭೂಮಾಪಕರ ಹುದ್ದೆ ಮತ್ತು ಆಡಳಿತಾಧಿಕಾರಿ ಹುದ್ದೆ ಪರೀಕ್ಷೆಯ ಹಾಲ್ ಟಿಕೆಟ್ ಮಾತ್ರ ಬಿಡುಗಡೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ವೃಂದದ ಭೂಮಾಪಕರ ಹುದ್ದೆ ಪರೀಕ್ಷೆ ಅ. 24, 25ರಂದು ಹಾಗೂ ಆಡಳಿತಾಧಿಕಾರಿ ಹುದ್ದೆ ಪರೀಕ್ಷೆ ಅ. 25ರಂದು ನಡೆಯಲಿದೆ. ಪರೀಕ್ಷೆಗೆ ಒಂದು ವಾರ ಮೊದಲು ಪ್ರವೇಶ ಪತ್ರವನ್ನು ಕೆಇಎ ಬಿಡುಗಡೆ ಮಾಡಲಿದೆ.