A Khata: ಅ.22ರಿಂದ ಬೃಹತ್ ಇ ಖಾತಾ ಅಭಿಯಾನ; ಎ ಖಾತಾ, ಇ ಖಾತಾ ಮಾಡಿಸಿಕೊಳ್ಳಿ
E Khata: ಅಕ್ಟೋಬರ್ 22ರಿಂದ ನವಂಬರ್ 1ರವರೆಗೆ ಮೆಗಾ ಖಾತಾ ಆಂದೋಲನ ನಡೆಸಲಾಗುತ್ತೆ. ಈ ವೇಳೆ ಬಿಲ್ ಕಲೆಕ್ಟರ್, ಬೆಸ್ಕಾಂ ಮೀಟರ್ ರೀಡರ್, ಸ್ಕೂಲ್ ಟೀಚರ್ಗಳು ಪ್ರತಿಯೊಂದು ಮನೆಗೂ ಭೇಟಿ ನೀಡಿ, ಜನರು ಅವರ ಆಸ್ತಿಗಳಿಗೆ ಇ ಖಾತೆ ಪಡೆಯಲು ಸಹಾಯ ಮಾಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.


ಬೆಂಗಳೂರು: ಮಹಾನಗರದ (Bengaluru) ವ್ಯಾಪ್ತಿಯಲ್ಲಿ ಬಿ ಖಾತಾ (B Khata) ಆಸ್ತಿಗಳನ್ನು ಎ ಖಾತಾ (A Khata) ಆಸ್ತಿಯನ್ನಾಗಿ ಪರಿವರ್ತನೆ ಮಾಡಲು ರಾಜ್ಯ ಸರ್ಕಾರದ ಕ್ಯಾಬಿನೆಟ್ ಈಗಾಗಲೇ ಒಪ್ಪಿಗೆ ನೀಡಿದೆ. ಆದರೆ, ಬಹಳಷ್ಟು ಮಾಲೀಕರು ಇನ್ನೂ ಇ ಖಾತೆಯನ್ನು (E Khata) ಪಡೆದಿಲ್ಲ. ಹೀಗಾಗಿ ಅಕ್ಟೋಬರ್ ತಿಂಗಳಲ್ಲಿ ಮೆಗಾ ಇ ಖಾತಾ ಆಂದೋಲನ ನಡೆಸಲು ಬಿಬಿಎಂಪಿ (BBMP) ನಿರ್ಧರಿಸಿದೆ. ಇದರ ಜೊತೆಗೆ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಸ್ತಿಗಳಾಗಿ ಹೇಗೆ ಪರಿವರ್ತನೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸ್ಟಾಂಡರ್ಡ್ ಅಪರೇಟಿಂಗ್ ಪ್ರೊಸಿಜರ್ ಅನ್ನು ಬಿಡುಗಡೆ ಮಾಡಲು ಬಿಬಿಎಂಪಿ ಪ್ಲ್ಯಾನ್ ಮಾಡಿದೆ.
ಮಂಗಳವಾರ ಡಿಸಿಎಂ, ಬೆಂಗಳೂರು ನಗರಾಭಿವೃದ್ದಿ ಖಾತೆ ಸಚಿವ ಡಿ.ಕೆ ಶಿವಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಈ ವೇಳೆ, ಬೆಂಗಳೂರಿನಲ್ಲಿ ಒಟ್ಟಾರೆ 24 ಲಕ್ಷ ಸ್ವತ್ತುಗಳಿದ್ದು, ಇದುವರೆಗೂ 6.5 ಲಕ್ಷ ಸ್ವತ್ತು ಮಾಲೀಕರು ಮಾತ್ರವೇ ಇ ಖಾತೆ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಸಂಖ್ಯೆ ಹೆಚ್ಚಾಗಬೇಕೆಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಎಲ್ಲ ಸೌಲಭ್ಯಗಳು ಆನ್ ಲೈನ್ನಲ್ಲಿ ಲಭ್ಯವಾಗಬೇಕೆಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಇದರ ಜೊತೆಗೆ ಅಕ್ಟೋಬರ್ 22ರಿಂದ ನವಂಬರ್ 1ರವರೆಗೆ ಮೆಗಾ ಖಾತಾ ಆಂದೋಲನ ನಡೆಸಲಾಗುತ್ತೆ. ಈ ವೇಳೆ ಬಿಲ್ ಕಲೆಕ್ಟರ್, ಬೆಸ್ಕಾಂ ಮೀಟರ್ ರೀಡರ್, ಸ್ಕೂಲ್ ಟೀಚರ್ಗಳು ಪ್ರತಿಯೊಂದು ಮನೆಗೂ ಭೇಟಿ ನೀಡಿ, ಜನರು ಅವರ ಆಸ್ತಿಗಳಿಗೆ ಇ ಖಾತೆ ಪಡೆಯಲು ಸಹಾಯ ಮಾಡುತ್ತಾರೆ ಎಂದು ಡಿಸಿಎಂ ಡಿಕೆ. ಶಿವಕುಮಾರ್ ಹೇಳಿದ್ದಾರೆ.
ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಸ್ತಿಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಫಾಲೋ ಮಾಡಬೇಕಾದ ಸ್ಟಾಂಡರ್ಡ್ ಅಪರೇಟಿಂಗ್ ಪ್ರೊಸಿಜರ್ ಅನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲಾಗುತ್ತೆ. ಮುಂದಿನ 15 ದಿನಗಳಲ್ಲಿ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಸ್ತಿಗಳಾಗಿ ಪರಿವರ್ತಿಸಿಕೊಳ್ಳಲು ಪ್ರತ್ಯೇಕ ಆನ್ ಲೈನ್ ಪ್ಲಾಟ್ ಫಾರಂ ಬಿಡುಗಡೆ ಮಾಡಲಾಗುವುದು ಎಂದು ಬಿಬಿಎಂಪಿ ಚೀಫ್ ಕಮೀಶನರ್ ಮಹೇಶ್ವರ ರಾವ್ ಹೇಳಿದ್ದಾರೆ.
ಹೊಸ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ, ಅನಧಿಕೃತ ಬಡಾವಣೆಗಳಲ್ಲಿನ ಅರ್ಹ ರೆವಿನ್ಯೂ ಸೈಟ್, ಪ್ಲಾಟ್ಗಳಿಗೆ ಎ ಖಾತೆಯನ್ನು ನೀಡುತ್ತೇವೆ. ಅಕ್ರಮ ಕಟ್ಟಡಗಳ ಸಮಸ್ಯೆಯನ್ನು ಪ್ರತ್ಯೇಕವಾಗಿ ಬಗೆಹರಿಸಲಾಗುತ್ತೆ ಎಂದು ಬಿಬಿಎಂಪಿ ಚೀಫ್ ಕಮೀಷನರ್ ಮಹೇಶ್ವರ ರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ 7 ಲಕ್ಷ ಬಿ ಖಾತಾ ಸ್ವತ್ತುಗಳಿವೆ. ಇವುಗಳನ್ನು ಈಗ ಎ ಖಾತಾ ಸ್ವತ್ತುಗಳಾಗಿ ಪರಿವರ್ತಿಸಿಕೊಳ್ಳುವ ಅವಕಾಶ ಆಸ್ತಿ ಮಾಲೀಕರಿಗೆ ಸಿಕ್ಕಿದೆ.
ಇದನ್ನೂ ಓದಿ: A Khata: ಬೆಂಗಳೂರಿಗರಿಗೆ ಸಿಹಿ ಸುದ್ದಿ: ಬಿ-ಖಾತಾಗಳಿಗೆ ಎ-ಖಾತಾ ಕಾನೂನು ಮಾನ್ಯತೆ ಭಾಗ್ಯ