ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: 'ಸರಣಿ 2-2, ಪ್ರದರ್ಶನ 10/10'- ಭಾರತ ತಂಡಕ್ಕೆ ಸಚಿನ್‌ ವಿಶೇಷ ಸಂದೇಶ!

ಇಂಗ್ಲೆಂಡ್‌ ವಿರುದ್ಧ ಸೋಲುವ ಪಂದ್ಯದಲ್ಲಿ ಭಾರತ ತಂಡ 6 ರನ್‌ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಟೆಸ್ಟ್‌ ಸರಣಿಯನ್ನು 2-2 ಅಂತರದಲ್ಲಿ ಸಮಬಲ ಸಾಧಿಸಿತು. ಐದನೇ ಟೆಸ್ಟ್‌ ಗೆಲುವಿನ ಬೆನ್ನಲ್ಲೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ಭಾರತ ತಂಡವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

IND vs ENG: ಭಾರತ ತಂಡಕ್ಕೆ ಕ್ರಿಕೆಟ್‌ ದೇವರಿಂದ ವಿಶೇಷ ಸಂದೇಶ!

ಓವಲ್‌ ಟೆಸ್ಟ್‌ ಗೆದ್ದ ಭಾರತ ತಂಡವನ್ನು ಶ್ಲಾಘಿಸಿದ ಸಚಿನ್‌ ತೆಂಡೂಲ್ಕರ್‌.

Profile Ramesh Kote Aug 4, 2025 9:36 PM

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಐದನೇ ಹಾಗೂ ಟೆಸ್ಟ್‌ ಸರಣಿಯ(IND vs ENG) ಕೊನೆಯ ಪಂದ್ಯದಲ್ಲಿ 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಭಾರತ ತಂಡವನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ (Sachin Tendulkar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಐದನೇ ಪಂದ್ಯದ ಗೆಲುವಿನ ಮೂಲಕ ಟೀಮ್‌ ಇಂಡಿಯಾ ಟೆಸ್ಟ್‌ ಸರಣಿಯನ್ನು 2-2 ಸಮಬಲ ಮಾಡಿಕೊಂಡಿತು. ಆ ಮೂಲಕ ದೀರ್ಘಾವಧಿ ಪ್ರವಾಸವನ್ನು ಮುಗಿಸಿತು. ಅಂದ ಹಾಗೆ ಭಾರತ ತಂಡ, ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಪ್ರದರ್ಶನಕ್ಕೆ ಕ್ರಿಕೆಟ್‌ ದೇವರು ರೇಟಿಂಗ್‌ ನೀಡಿದ್ದಾರೆ. ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಭಾರತ ತಂಡದ ಪ್ರದರ್ಶನಕ್ಕೆ ಕ್ರಿಕೆಟ್‌ ದಂತಕತೆ 10ಕ್ಕೆ 10 ಅಂಕಗಳನ್ನು ನೀಡಿದ್ದಾರೆ.

ಇಲ್ಲಿನ ಕೆನಿಂಗ್ಟನ್‌ ಓವಲ್‌ನಲ್ಲಿ ಸೋಮವಾರ ಅಂತ್ಯವಾದ ಐದನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ನೀಡಿದ್ದ 374 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಇಂಗ್ಲೆಂಡ್‌ ತಂಡ, ನಾಲ್ಕನೇ ದಿನ, ಜೋ ರೂಟ್‌ ಹಾಗೂ ಹ್ಯಾರಿ ಬ್ರೂಕ್‌ ಅವರ ಶತಕಗಳ ಬಲದಿಂದ 6 ವಿಕೆಟ್‌ ನಷ್ಟಕ್ಕೆ 339 ರನ್‌ಗಳನ್ನು ಕಲೆ ಹಾಕಿತ್ತು. ಆದರೆ, ಐದನೇ ದಿನವಾದ ಸೋಮವಾರ ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಇಂಗ್ಲೆಂಡ್‌ ತಂಡ 6 ರನ್‌ಗಳಿಂದ ಸೋಲು ಒಪ್ಪಿಕೊಂಡಿತು ಹಾಗೂ ಸರಣಿ ಸೋಲಿನಿಂದ ಟೀಮ್‌ ಇಂಡಿಯಾ ಪಾರಾಯಿತು. ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನವನ್ನು ತೋರಿತು.

IND vs ENG: 5 ವಿಕೆಟ್‌ ಕಿತ್ತ ತಮ್ಮ ಬೌಲಿಂಗ್‌ ಪ್ಲ್ಯಾನ್‌ ರಿವೀಲ್‌ ಮಾಡಿದ ಮೊಹಮ್ಮದ್‌ ಸಿರಾಜ್‌!

ಭಾರತ ತಂಡವನ್ನು ಹೊಗಳಿದ ಕ್ರಿಕೆಟ್‌ ದೇವರು

ಐದನೇ ಟೆಸ್ಟ್‌ ಗೆದ್ದ ಭಾರತ ತಂಡ ಸರಣಿಯನ್ನು ಸಮಬಲಗೊಳಿಸಿದ ಬಳಿಕ ಕ್ರಿಕೆಟ್‌ ದೇವರು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. "ಟೆಸ್ಟ್ ಕ್ರಿಕೆಟ್ ನಿಜಕ್ಕೂ ರೋಮಾಂಚನಕಾರಿ. ಸರಣಿ 2–2, ಪ್ರದರ್ಶನ 10/10! ಭಾರತದಿಂದ ಸೂಪರ್‌ಮೆನ್‌! ಎಂತಹ ಗೆಲುವು, ಇಂಡಿಯಾ," ಎಂದು ಸಚಿನ್ ತೆಂಡೂಲ್ಕರ್ ಬರೆದಿದ್ದಾರೆ.



ಶುಭಮನ್‌ ಗಿಲ್‌ ಹೇಳಿದ್ದೇನು?

ಪಂದ್ಯದ ನಂತರ ಮಾತನಾಡಿದ ನಾಯಕ ಶುಭಮನ್ ಗಿಲ್, ಪಂದ್ಯದ ಕೊನೆಯ ಕ್ಷಣಗಳವರೆಗೂ ಬಿಟ್ಟುಕೊಡಲು ನಿರಾಕರಿಸಿದ ತಂಡದ ಪಾತ್ರವನ್ನು ಶ್ಲಾಘಿಸಿದರು. ಮೊಹಮ್ಮದ್ ಸಿರಾಜ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ, ಕೊನೆಯ ದಿನದಂದು 3 ವಿಕೆಟ್‌ಗಳನ್ನು ಪಡೆದರು. ಒಟ್ಟಾರೆಯಾಗಿ, ಸಿರಾಜ್ ಟೆಸ್ಟ್ ಪಂದ್ಯದಲ್ಲಿ 9 ಮತ್ತು ಸರಣಿಯಲ್ಲಿ 26 ವಿಕೆಟ್‌ಗಳನ್ನು ಪಡೆದು, ಎರಡೂ ತಂಡಗಳಲ್ಲಿ ಅತ್ಯುತ್ತಮ ಬೌಲರ್ ಆಗಿ ಪ್ರವಾಸವನ್ನು ಮುಗಿಸಿದರು.

IND vs ENG: ಒಂದು ಕೈಯಲ್ಲಿ ಬ್ಯಾಟಿಂಗ್‌ಗೆ ಬಂದು ಅಭಿಮಾನಿಗಳ ಹೃದಯ ಗೆದ್ದ ಕ್ರಿಸ್‌ ವೋಕ್ಸ್‌!

ಓವಲ್‌ನಲ್ಲಿ ನಡೆದ ಈ ಅದ್ಭುತ ಗೆಲುವು ಸರಣಿಗೆ ಸೂಕ್ತವಾದ ಅಂತ್ಯವಾಗಿತ್ತು, ಇದು ಶುಭಮನ್ ಗಿಲ್ ಯುಗವನ್ನು ಪ್ರಾರಂಭಿಸಿತು. ಯುವ ಬ್ಯಾಟ್ಸ್‌ಮನ್ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದರು, 5 ಟೆಸ್ಟ್ ಪಂದ್ಯಗಳಲ್ಲಿ 750 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದರು. ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳಲ್ಲಿ ಗಿಲ್ ನೇತೃತ್ವದ ಭಾರತ ತಂಡವು ತೀವ್ರವಾಗಿ ಹೋರಾಡಿತು, ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸೇವೆಗಳನ್ನು ಹೊಂದಿರದ ಹೊಸ ಭಾರತೀಯ ತಂಡದ ಉತ್ಸಾಹವನ್ನು ಎತ್ತಿ ತೋರಿಸಿತು.