Killer BMTC: ಮತ್ತೊಬ್ಬ ಬಾಲಕಿಯ ಬಲಿ ತೆಗೆದುಕೊಂಡ ಕಿಲ್ಲರ್ ಬಿಎಂಟಿಸಿ
Bengaluru: ಬೈಕ್ ಸ್ಕಿಡ್ ಆಗಿ ಬಾಲಕಿ ತನ್ವಿಕೃಷ್ಣ ಕೆಳಗೆ ಬಿದ್ದಿದ್ದಾಳೆ. ಕೆಳಗೆ ಬಿದ್ದ ಬಾಲಕಿ ಮೇಲೆಯೇ ಬಿಎಂಟಿಸಿ ಬಸ್ ಹರಿದಿದೆ. ಬಸ್ ಚಕ್ರಕ್ಕೆ ಸಿಲುಕಿ ಬಾಲಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಬಸ್ ಚಾಲಕನ ಅಜಾಗರೂಕತೆ ಕಾರಣವೇ ಎಂದು ಪರಿಶೀಲಿಸಲಾಗುತ್ತಿದೆ.


ಬೆಂಗಳೂರು : ಬೆಂಗಳೂರಿನಲ್ಲಿ (Bengaluru) ಕಿಲ್ಲರ್ ಬಿಎಂಟಿಸಿ (Killer BMTC) ಬಸ್‌ಗೆ ಮತ್ತೊಂದು ಬಲಿಯಾಗಿದ್ದು, ಬಸ್ ಹರಿದು ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಯಲಹಂಕದ ಕೋಗಿಲು ಕ್ರಾಸ್ ಮಾರುತಿ ನಗರದಲ್ಲಿ ಬಿಎಂಟಿಸಿ ಬಸ್ ಹರಿದು ಬಾಲಕಿ ಸಾವನ್ನಪ್ಪಿದ್ದಾಳೆ. 11 ವರ್ಷದ ಬಾಲಕಿ ತನ್ವಿಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ತನ್ವಿಕೃಷ್ಣ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು.
ಬೈಕ್ ಸ್ಕಿಡ್ ಆಗಿ ಬಾಲಕಿ ತನ್ವಿಕೃಷ್ಣ ಕೆಳಗೆ ಬಿದ್ದಿದ್ದಾಳೆ. ಕೆಳಗೆ ಬಿದ್ದ ಬಾಲಕಿ ಮೇಲೆಯೇ ಬಿಎಂಟಿಸಿ ಬಸ್ ಹರಿದಿದೆ. ಬಸ್ ಚಕ್ರಕ್ಕೆ ಸಿಲುಕಿ ಬಾಲಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಬಸ್ ಚಾಲಕನ ಅಜಾಗರೂಕತೆ ಕಾರಣವೇ ಎಂದು ಪರಿಶೀಲಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್ಸುಗಳಿಗೆ ಅನೇಕರು ಬಲಿಯಾಗಿದ್ದಾರೆ. ಇತ್ತೀಚೆಗೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದ ಬಳಿ 62 ವರ್ಷದ ಹಿರಿಯ ನಾಗರಿಕರೊಬ್ಬರು ಎಲೆಕ್ಟ್ರಿಕ್ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು. ರೇಷ್ಮೆ ಸಂಸ್ಥೆಯ ಮೆಟ್ರೋ ಸ್ಟೇಷನ್ ಬಳಿ ಕನಕಪುರ ಮಾರ್ಗದಲ್ಲಿ ಸಂಚರಿಸುವ ಬಸ್ಸೊಂದು ದ್ವಿಚಕ್ರ ವಾಹನವೊಂದಕ್ಕೆ ಗುದ್ದಿ ಅದರ ಮೇಲೆ ಹರಿದುಹೋದ ಕಾರಣ ಪಿಲಿಯನ್ ರೈಡರ್ ಆಗಿದ್ದ ಮಹಿಳೆ ಮೃತಪಟ್ಟಿದ್ದರು. ಪೀಣ್ಯದ ಎರಡನೇ ಹಂತದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಐವರ ಮೇಲೆ ಚಾಲಕ ಬಿಎಂಟಿಸಿ ಬಸ್ ಹತ್ತಿಸಿದ್ದ ಪರಿಣಾಮ 25 ವರ್ಷದ ಸುಮ ಎನ್ನುವ ಮಹಿಳೆ ಸಾವನ್ನಪ್ಪಿ ನಾಲ್ಕು ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: Killer BMTC: ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಹಿರಿಯ ಜೀವ ಬಲಿ