ಬೆಂಗಳೂರು: ಕೊಟಕ್ ಮಹಿಂದ್ರಾ ಬ್ಯಾಂಕ್ ಲಿ.(“ಕೆಎಂಬಿಎಲ್”/ “ಕೊಟಕ್”) ಇಂದು ತನ್ನ ಮುಂಚೂಣಿಯ ಸಿ.ಎಸ್.ಆರ್. ಉಪಕ್ರಮ ಕೊಟಕ್ ಬಿಝ್ ಲ್ಯಾಬ್ಸ್ ಆಕ್ಸಲರೇಟರ್ ಪ್ರೋಗ್ರಾಂನ 2ನೇ ಋತುವನ್ನು ಪ್ರಕಟಿಸಿದ್ದು ಇದು ಪ್ರಾರಂಭಿಕ ಆದಾಯದ ಹಂತದಲ್ಲಿರುವ ಸ್ಟಾರ್ಟಪ್ ಗಳಿಗೆ ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ ಮತ್ತು ಕೆಟಲಿಟಿಕ್ ಫಂಡಿಂಗ್ ಮಾಡಲು ವಿನ್ಯಾಸ ಗೊಳಿಸಲಾಗಿದೆ.
ಅಕ್ಟೋಬರ್ 2025ರಿಂದ ನವೆಂಬರ್ 2026ರವರೆಗೆ ನಡೆಯಲಿರುವ 2ನೇ ಋತುವು ಭಾರತದಾದ್ಯಂತ 75+ ಸ್ಟಾರ್ಟಪ್ ಗಳಿಗೆ ಬೆಂಬಲಿಸಲಿದ್ದು ಅದರಲ್ಲಿ ಡೀಪ್-ಟೆಕ್, ಸುಸ್ಥಿರತೆ, ಸ್ವಚ್ಛ ಶಕ್ತಿ, ಫಿನ್ಟೆಕ್, ಡಿಜಿಟಲ್ ತಂತ್ರಜ್ಞಾನ, ಎಡ್ಟೆಕ್, ಅಗ್ರಿಟೆಕ್ ಮತ್ತು ಹೆಲ್ತ್ ಟೆಕ್ ಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ. ಈ ಕಾರ್ಯಕ್ರಮವು ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ತನ್ನ ರಾಷ್ಟ್ರೀಯ ಹೆಜ್ಜೆ ಗುರುತು ವಿಸ್ತರಿಸಲಿದೆ ಮತ್ತು ಐಐಟಿ ದೆಹಲಿಯ ಫೌಂಡೇಷನ್ ಫಾರ್ ಇನ್ನೊವೇಷನ್ ಅಂಡ್ ಟೆಕ್ನಾಲಜಿ ಟ್ರಾನ್ಸ್ಫರ್ (ಎಫ್.ಐ.ಟಿ.ಟಿ)ಯನ್ನು ಹೊಸ ಇನ್ ಕ್ಯುಬೇಷನ್ ಪಾರ್ಟ್ನರ್ ಆಗಿ ಸ್ವಾಗತಿಸಿದೆ, ಐಐಎಂಎ ವೆಂಚರ್ಸ್, ಎನ್.ಎಸ್.ಆರ್.ಸಿ.ಇ.ಎಲ್-ಐಐಎಂ ಬೆಂಗಳೂರು ಮತ್ತು ಟಿ-ಹಬ್ ಗಳನ್ನು ಸೇರ್ಪಡೆ ಮಾಡಿಕೊಂಡಿವೆ. ಉದ್ಯಮಗಳ ಆಯ್ಕೆ ಮತ್ತು ಆಕ್ಸಲರೇಷನ್ ಬೆಂಬಲ ವನ್ನು ಇನ್ ಕ್ಯುಬೇಟರ್ ಗಳು ನಿರ್ವಹಿಸಲಿದ್ದಾರೆ.
1ನೇ ಹಂತ: ಸ್ಪಷ್ಟವಾದ ಪರಿಣಾಮಕ್ಕೆ ಚಾಲನೆ
ತನ್ನ ಮೊದಲ ವರ್ಷ ಕೊಟಕ್ ಬಿಝ್ ಲ್ಯಾಬ್ಸ್ ಭಾರತದ ಸ್ಟಾರ್ಟಪ್ ಕ್ಷೇತ್ರದಲ್ಲಿ ತನ್ನದೇ ಗುರುತು ಮೂಡಿಸಿದೆ:
- ದೇಶಾದ್ಯಂತ 1,500+ ಅರ್ಜಿಗಳನ್ನು ಸ್ವೀಕರಿಸಲಾಗಿದೆ
- ಔಟ್ ರೀಚ್ ಮತ್ತು ನಾಲೆಡ್ಜ್ ಕಾರ್ಯಕ್ರಮಗಳ ಮೂಲಕ 500+ ಸಂಸ್ಥಾಪಕರನ್ನು ಒಳಗೊಳ್ಳಲಾಗಿದೆ
- 55 ಸ್ಟಾರ್ಟಪ್ ಗಳಿಗೆ ರಚನಾತ್ಮಕ ಮಾರ್ಗದರ್ಶನ ಮತ್ತು ಇನ್ ಕ್ಯುಬೇಷನ್ ಮೂಲಕ ಉತ್ತೇಜಿಸಲಾಗಿದೆ
- 32 ಉದ್ಯಮಗಳು ಬಂಡವಾಳದ ನೆರವು ಪಡೆದಿದ್ದು ಅವರ ಮುಂದಿನ ಹಂತದ ಪ್ರಗತಿಗೆ ಶಕ್ತಿ ತುಂಬಿದೆ
- 14 ನಗರಗಳಲ್ಲಿ ರೋಡ್ ಶೋಗಳು, ನೆಟ್ವರ್ಕಿಂಗ್ ಮಿಕ್ಸರ್ ಗಳು, ಕಾರ್ಯಾಗಾರಗಳು ಇತ್ಯಾದಿಗಳ ಮೂಲಕ ಸಕ್ರಿಯಗೊಳಿಸಲಾಗಿದೆ
- 2ನೇ ಹಂತ:
ತನ್ನ ಎರಡನೇ ವರ್ಷದಲ್ಲಿ ಕೊಟಕ್ ಬಿಝ್ ಲ್ಯಾಬ್ಸ್ ಈ ಉಪಕ್ರಮ ಉತ್ತೇಜಿಸುವ ಗುರಿ ಹೊಂದಿದೆ:
- 800+ ಸ್ಟಾರ್ಟಪ್ ಗಳನ್ನು ಔಟ್ ರೀಚ್ ಮತ್ತು ನಾಲೆಡ್ಜ್ ಕಾರ್ಯಕ್ರಮಗಳ ಮೂಲಕ ಸಕ್ರಿಯತೆಯ ಗುರಿ
- ರಚನಾತ್ಮಕ ಮಾರ್ಗದರ್ಶನ ಮತ್ತು ಇನ್ ಕ್ಯುಬೇಷನ್ ಮೂಲಕ 75+ ಸ್ಟಾರ್ಟಪ್ ಗಳಿಗೆ ಉತ್ತೇಜನದ ನಿರೀಕ್ಷೆ
- 60+ ಉದ್ಯಮಗಳು ಬಂಡವಾಳದ ಬೆಂಬಲ ಪಡೆಯಲಿದ್ದು ಅವುಗಳ ಮುಂದಿನ ಹಂತದ ಪ್ರಗತಿಗೆ ವೇಗ ತುಂಬಲಿದೆ
- 20+ ನಗರಗಳಲ್ಲಿ ರೋಡ್ ಶೋಗಳು, ನೆಟ್ವರ್ಕಿಂಗ್ ಮಿಕ್ಸರ್ ಗಳು, ಕಾರ್ಯಾಗಾರಗಳು ಇತ್ಯಾದಿಗಳ ಮೂಲಕ ಸಕ್ರಿಯಗೊಳಿಸುವ ಗುರಿ
“ಕೊಟಕ್ ಸದಾ ಭಾರತದಲ್ಲಿ ಉದ್ಯಮಶೀಲತೆಯ ಸ್ಫೂರ್ತಿಯನ್ನು ಉತ್ತೇಜಿಸುವುದರಲ್ಲಿ ನಂಬಿಕೆ ಇರಿಸಿದೆ, ಅದು ಬರೀ ಮೆಟ್ರೋಗಳಲ್ಲಿ ಮಾತ್ರವಲ್ಲದೆ ಆವಿಷ್ಕಾರ ವಿಸ್ತರಿಸುತ್ತಿರುವ ಟೈಯರ್-2 ಮತ್ತು ಟೈಯರ್-3 ನಗರಗಳಲ್ಲೂ ಸೇರಿದೆ” ಎಂದು ಕೊಟಕ್ ಮಹಿಂದ್ರಾ ಬ್ಯಾಂಕ್ ಲಿ.ಯ ಸಿ.ಎಸ್.ಆರ್ ಅಂಡ್ ಇ.ಎಸ್.ಜಿ.ಯ ಮುಖ್ಯಸ್ಥ ಹಿಮಾನ್ಷು ನಿವ್ಸರ್ಕಾರ್ ಹೇಳಿದರು. “ಕೊಟಕ್ ಬಿಝ್ ಲ್ಯಾಬ್ಸ್ ಆಕ್ಸಲರೇಟರ್ ಕಾರ್ಯಕ್ರಮದ 2ನೇ ಋತುವಿನ ಮೂಲಕ ನಾವು ದೊಡ್ಡ ಕನಸು ಕಾಣುವ ಮತ್ತು ದಿಟ್ಟವಾಗಿ ನಿರ್ಮಿಸುವ ಸಂಸ್ಥಾಪಕರಿಗೆ ನಮ್ಮ ಬದ್ಧತೆಯನ್ನು ವಿಸ್ತರಿಸುತ್ತಿದ್ದೇವೆ” ಎಂದರು.
“ಕೊಟಕ್ ಬಿಝ್ ಲ್ಯಾಬ್ಸ್ ಭಾರತದ ಭವಿಷ್ಯವನ್ನು ರೂಪಿಸುವ ಮಹತ್ತರ ಕನಸುಗಳಿಗೆ ಶಕ್ತಿ ನೀಡುವ ನಮ್ಮ ವಿಧಾನವಾಗಿದೆ” ಎಂದು ಕೊಟಕ್ ಮಹಿಂದ್ರಾ ಬ್ಯಾಂಕ್ ಲಿ.ಯ ಅಫ್ಲುಯೆಂಟ್, ಎನ್.ಆರ್.ಐ ಮತ್ತು ಬಿಸಿನೆಸ್ ಬ್ಯಾಂಕಿಂಗ್ ಮುಖ್ಯಸ್ಥ ಹಾಗೂ ಚೀಫ್ ಮಾರ್ಕೆಟಿಂಗ್ ಆಫೀಸರ್ ರೋಹಿತ್ ಭಾಸಿನ್ ಹೇಳಿದರು. “ನೀವು ಸರಿಯಾದ ಉದ್ದೇಶ, ಸರಿಯಾದ ಆಲೋಚನೆಗಳನ್ನು ಹೊಂದಿದ್ದರೆ ಮ್ಯಾಜಿಕ್ ಸಂಭವಿಸುತ್ತದೆ. ಅದು `ಹೌಸ್ಲಾ ಹೈ ತೋ ಹೋ ಜಾಯೇಗಾ’ ಕ್ರಿಯಾ ಶೀಲವಾಗಿರುವ ಸ್ಫೂರ್ತಿಯಾಗಿದೆ” ಎಂದರು.
ಎನ್.ಎಸ್.ಆರ್.ಸಿ.ಇ.ಎಲ್. ಸಿಇಒ ಆನಂದ್ ಶ್ರೀ ಗಣೇಶ್, “ಭಾರತದ ಚಲನಶೀಲ ಸ್ಟಾರ್ಟಪ್ ಇಕೊಸಿಸ್ಟಂಗೆ ಕೊಟಕ್ ಬಿಝ್ ಲ್ಯಾಬ್ಸ್ ಸೀಸನ್ 2ರ ಮೂಲಕ ಸಬಲೀಕರಿಸಲು ಮತ್ತೊಮ್ಮೆ ಕೊಟಕ್ ಮಹಿಂದ್ರಾ ಬ್ಯಾಂಕ್ ಜೊತೆಯಲ್ಲಿ ಸಹಯೋಗಕ್ಕೆ ನಾವು ಬಹಳ ಸಂತೋಷ ಹೊಂದಿದ್ದೇವೆ. ವಿಸ್ತಾರ ಕ್ಷೇತ್ರಗಳಲ್ಲಿ ಆಳವಾದ ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ ಮತ್ತು ಕೆಟಲಿಟಿಕ್ ಫಂಡಿಂಗ್ ಮೂಲಕ ಈ ಉಪಕ್ರಮವು ಟೈಯರ್-2 ಮತ್ತು ಟೈಯರ್-3 ನಗರಗಳಲ್ಲಿ ಪರಿವರ್ತನೀಯ ಆವಿಷ್ಕಾರಕ್ಕೆ ವೇಗ ನೀಡುತ್ತದೆ. ಎನ್.ಎಸ್.ಆರ್.ಸಿ.ಇ.ಎಲ್.ನಲ್ಲಿ ನಮ್ಮ ಉದ್ದೇಶ ಭಾರತದ ಪ್ರಗತಿಯನ್ನು ಮುನ್ನಡೆಸುವ ಪರಿಣಾಮಕಾರಿ ಪರಿಹಾರಗಳನ್ನು ನಿರ್ಮಿಸುವ ದಿಟ್ಟ ಉದ್ಯಮಗಳನ್ನು ಪೋಷಿಸಲು ಕೊಟಕ್ ಧ್ಯೇಯೋದ್ದೇಶಕ್ಕೆ ಹತ್ತಿರದಲ್ಲಿ ಕೆಲಸ ಮಾಡುವುದಾಗಿದೆ” ಎಂದರು.
ಐಐಎಂಎ ವೆಂಚರ್ಸ್ ಪಾರ್ಟ್ನರ್ ಇನ್ ಕ್ಯುಬೇಷನ್ ಚಿಂತನ್ ಬಕ್ಷಿ, “ಕೊಟಕ್ ಬಿಝ್ ಲ್ಯಾಬ್ಸ್ ಅನ್ನು ಪ್ರತ್ಯೇಕವಾಗಿ ಇರಿಸಿರುವುದು ಅದರ ಟೈಯರ್-2 ಮತ್ತು ಟೈಯರ್-3 ನಗರಗಳ ಸ್ಟಾರ್ಟಪ್ ಗಳಿಗೆ ಕೆಲ ಅತ್ಯಂತ ಕಠಿಣ ಸಾಮಾಜಿಕ ಮತ್ತು ಪಾರಿಸರಿಕ ಸವಾಲುಗಳನ್ನು ಪರಿಹರಿಸಲು ತಂತ್ರಜ್ಞಾನ ಬಳಸುವ ಸಂಸ್ಥಾಪಕರಿಗೆ ತೀವ್ರ ಮತ್ತು ರಚನಾತ್ಮಕ ಬೆಂಬಲ ನೀಡುವುದು. ಐಐಎಂಎ ವೆಂಚರ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಗುಜರಾತ್, ರಾಜಸ್ಥಾನ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಸ್ಟಾರ್ಟಪ್ ಗಳ ಸಂಸ್ಥಾಪಕರಿಗೆ ಹಲವು ಹಂತಗಳ ಬೆಂಬಲ ನೀಡುವಂತೆ ರೂಪಿಸಲಾಗಿದ್ದು ಇದು ಸ್ಥಳೀಯ ಏಂಜೆಲ್ ಇನ್ವೆಸ್ಟರ್ ಗಳನ್ನು ಮತ್ತು ಎಚ್.ಎನ್.ಐ.ಗಳನ್ನು ಸಕ್ರಿಯಗೊಳಿಸುವುದು, ಐಐಎಂಎಯಲ್ಲಿ ಬೂಟ್ ಕ್ಯಾಂಪ್ ಆಯೋಜಿಸು ವುದು ಮತ್ತು ರಚನಾತ್ಮಕ ಮಾರ್ಗದರ್ಶನ ಮತ್ತು ತಾಂತ್ರಿಕ ನೆರವು ನೀಡುವುದಾಗಿದೆ” ಎಂದರು.
ಕೊಟಕ್ ಬಿಝ್ ಲ್ಯಾಬ್ಸ್ ಆಕ್ಸಲರೇಟರ್ ಪ್ರೋಗ್ರಾಮ್ ನ ಸೀಸನ್ 1ರಲ್ಲಿ 32 ಹೆಚ್ಚಿನ ಸಾಮರ್ಥ್ಯದ ಸ್ಟಾರ್ಟಪ್ ಗಳು ಅಗ್ರಿಟೆಕ್, ಕ್ಲೈಮೇಟ್ ಟೆಕ್, ಫಿನ್ಟೆಕ್, ಎಡ್ ಟೆಕ್, ಆರೋಗ್ಯಸೇವೆ, ಸ್ಥಳೀಯ ಕಲೆ ಮತ್ತು ಕರಕುಶಲತೆ, ಡೀಪ್ ಟೆಕ್, ಕ್ಲೀನ್ ಟೆಕ್ ಮತ್ತು ಸುಸ್ಥಿರತೆಯಲ್ಲಿ ಮಹತ್ತರ ಪರಿಹಾರಗಳಿಗೆ ಅನುದಾನಗಳನ್ನು ನೀಡಲಾಗಿದೆ. ಈ ಉದ್ಯಮಗಳು ಉದ್ಯೋಗಗಳನ್ನು ಸೃಷ್ಟಿಸಿವೆ, ಫಾಲೋ-ಆನ್ ಬಂಡವಾಳ ಸಂಗ್ರಹಿಸಿವೆ ಮತ್ತು ಚತುರತೆ ಹಾಗೂ ಉದ್ದೇಶದಿಂದ ನಿಜ ಜೀವನದ ಸವಾಲುಗಳನ್ನು ಪರಿಹರಿಸುತ್ತಿವೆ. ಸೀಸನ್ 1ರ ಯಶಸ್ಸು ಕೊಟಕ್ ಗೆ ತನ್ನ ಪ್ರಯತ್ನಗಳನ್ನು ವಿಸ್ತರಿಸಲು, ಸೀಸನ್ 2ರ ಕಾರ್ಯಕ್ರಮದ ವ್ಯಾಪ್ತಿ ತ್ತು ಮಹತ್ವಾಕಾಂಕ್ಷೆ ವಿಸ್ತರಿಸಲು ಸ್ಫೂರ್ತಿ ನೀಡಿದೆ.
ಟಿ-ಹಬ್ ಸಿಇಒ ಕವಿಕೃತ್, “ಕೊಟಕ್ ಫಲಿತಾಂಶ-ಕೇಂದ್ರಿತ ಕಾರ್ಯಕ್ರಮವು ಹೇಗೆ ಸಿ.ಎಸ್.ಆರ್. ಪರಿಣಾಮಕ್ಕೆ ಆದ್ಯತೆ ನೀಡುವ ಸ್ಟಾರ್ಟಪ್ ಗಳನ್ನು ಸಕ್ರಿಯವಾಗಿಸಬಹುದು ಎನ್ನುವುದನ್ನು ಮರು ಅನ್ವೇಷಿಸಿದೆ. ಟಿ-ಹಬ್ ನೊಂದಿಗೆ ನಿರ್ಮಿಸುತ್ತಿರುವವರು ಅವರ ಪ್ರಗತಿಯ ಯೋಜನೆಗಳನ್ನು ಪರಿಷ್ಕರಿಸಲು ಮಾರ್ಗದರ್ಶಕರೊಂದಿಗೆ ಕೆಲಸ ಮಾಡುತ್ತಿದ್ದು ಸಾಮರ್ಥ್ಯಗಳನ್ನು ಸೃಷ್ಟಿಸಲು ಬಂಡವಾಳ ತೊಡಗಿಸುತ್ತಿದ್ದಾರೆ ಮತ್ತು ಕಾರ್ಯಕ್ರಮವು ಅವರ ಉತ್ಪನ್ನವು ಮಾರುಕಟ್ಟೆಗೆ ಹೊಂದಿಕೊಳ್ಳುವುದನ್ನು ಮತ್ತಷ್ಟು ಮೌಲ್ಯೀಕರಿಸುತ್ತದೆ. ಈ ಸ್ಟಾರ್ಟಪ್ ಗಳು, ಕೊಟಕ್ ಮತ್ತು ಟಿ-ಹಬ್ ನಡುವಿನ ಸಹಯೋಗದ ಮೂಲಕ ನಾವು ಮುಂದಿನ ಸಮೂಹವನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ” ಎಂದರು.
ಎಫ್.ಐ.ಟಿ.ಟಿ. ಐಐಟಿ ದೆಹಲಿಯ ಎಂ.ಡಿ. ಡಾ.ನಿಖಿಲ್ ಅಗರ್ವಾಲ್, ನಾವು ದಿಟ್ಟ, ಆವಿಷ್ಕಾರ ಪ್ರೇರಿತ ಸ್ಟಾರ್ಟಪ್ ಗಳೊಂದಿಗೆ ಕೈ ಜೋಡಿಸಲು ಮತ್ತು ಅವರಿಗೆ ಜಾಗತಿಕ ಮಹತ್ವಾಕಾಂಕ್ಷೆ ಯೊಂದಿಗೆ ವಿಸ್ತರಿಸಲು ಮತ್ತು ಸಾಮಾಜಿಕ ಪರಿಣಾಮ ತರಲು ಉತ್ಸುಕರಾಗಿದ್ದೇವೆ- ಏಕೆಂದರೆ ನಮ್ಮ ಧ್ಯೇಯೋದ್ದೇಶದ ಕೇಂದ್ರದಲ್ಲಿ ಮತ್ತು ಕೊಟಕ್ ನಂಬಿಕೆಯಲ್ಲಿ ಹೌಸ್ಲಾ ಹೈ ತೋ ಹೊ ಜಾಯೇಗಾ ಇದೆ” ಎಂದರು.
ಭಾರತವು ಈಗ ಮೂರನೇ ಅತ್ಯಂತ ದೊಡ್ಡ ಸ್ಟಾರ್ಟಪ್ ಇಕೊಸಿಸ್ಟಂ ಆಗಿದ್ದು ಕೊಟಕ್ ಬಿಝ್ ಲ್ಯಾಬ್ಸ್ ಆಕ್ಸಲರೇಟರ್ ಪ್ರೋಗ್ರಾಮ್ ಅನ್ನು ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ ಮತ್ತು ಮೂಲ ಬಂಡವಾಳದ ಪ್ರಮುಖ ಅಂತರಗಳನ್ನು ತುಂಬಲು ವಿಶಿಷ್ಟವಾಗಿ ರೂಪಿಸಲಾಗಿದೆ.
ಕೊಟಕ್ ಬಿಝ್ ಲ್ಯಾಬ್ಸ್ ಆಕ್ಸಲರೇಟರ್ ಪ್ರೋಗ್ರಾಮ್ ಕೊಟಕ್ ಮಹಿಂದ್ರಾ ಬ್ಯಾಂಕ್ ಲಿಮಿಟೆಡ್ ನ ಸಿ.ಎಸ್.ಆರ್. ಉಪಕ್ರಮವಾಗಿದೆ.