ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Uday Kotak: "ಭಾರತೀಯ ಗೃಹಿಣಿಯರು ವಿಶ್ವದ ಅತ್ಯಂತ ʼಸ್ಮಾರ್ಟ್‌ʼ ಫಂಡ್‌ ಮ್ಯಾನೇಜರ್‌ಗಳು"; ಮಹಿಳೆಯರನ್ನು ಹೊಗಳಿದ ಉದಯ್‌ ಕೋಟಕ್‌

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದೀಗ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ ಗಡಿ ದಾಟಿದೆ. ಜನ ಸಾಮಾನ್ಯರು ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕರಾದ ಉದಯ್‌ ಕೋಟಕ್‌ ಅವರು ಚಿನ್ನದ ಬೆಲೆಯೇರಿಕೆ ಕುರಿತು ಮಾತನಾಡಿ, ಭಾರತೀಯ ಮಹಿಳೆಯರು ವಿಶ್ವದ ಅತ್ಯಂತ ಸ್ಮಾರ್ಟ್‌ ಫಂಡ್‌ ಮ್ಯಾನೇಜರ್‌ಗಳು ಎಂದು ಶ್ಲಾಘಿಸಿದ್ದಾರೆ.

ಭಾರತೀಯ ಮಹಿಳೆಯರು ಅತ್ಯಂತ ಸ್ಮಾರ್ಟ್‌ ಫಂಡ್‌ ಮ್ಯಾನೇಜರ್‌ಗಳು;ಉದಯ್‌ ಕೋಟಕ್

Profile Vishakha Bhat Apr 22, 2025 6:49 PM

ನವದೆಹಲಿ: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದೀಗ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ ಗಡಿ ದಾಟಿದೆ. ಜನ ಸಾಮಾನ್ಯರು ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕರಾದ ಉದಯ್‌ ಕೋಟಕ್‌ ಅವರು ಚಿನ್ನದ ಬೆಲೆಯೇರಿಕೆ ಕುರಿತು ಮಾತನಾಡಿದ್ದು, ಭಾರತೀಯ ಮಹಿಳೆಯರು ವಿಶ್ವದ ಅತ್ಯಂತ ಸ್ಮಾರ್ಟ್‌ ಫಂಡ್‌ ಮ್ಯಾನೇಜರ್‌ಗಳು ಎಂದು ಶ್ಲಾಘಿಸಿದ್ದಾರೆ. ದಾಖಲೆಯ ಹೆಚ್ಚಿನ ದರದ ಹೊರತಾಗಿಯೂ ಮಾರುಕಟ್ಟೆಯ ಭಾವನೆಯು ಲವಲವಿಕೆಯಿಂದ ಇನ್ನೂ ಉಳಿದಿದೆ ಎಂದು ಅವರು ಹೇಳಿದ್ದಾರೆ.



ಪಂಪ್ ಪ್ರೈಮಿಂಗ್, ಹೈ ಡೆಫಿಸಿಟ್‌ ಫಂಡಿಂಗ್‌ಗಳನ್ನು ಬೆಂಬಲಿಸುವ ಸರ್ಕಾರಗಳು, ಕೇಂದ್ರ ಬ್ಯಾಂಕ್‌ಗಳು, ಅರ್ಥಶಾಸ್ರಜ್ಞರು ಭಾರತದಿಂದ ಪಾಠ ಕಲಿಯಬೇಕು ಎಂದು ಅವರು ಹೇಳಿದ್ದಾರೆ. ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಪ್ರಕಾರ, ಭಾರತೀಯ ಮಹಿಳೆಯರು ಒಟ್ಟಾರೆಯಾಗಿ ಅಂದಾಜು 24 ಸಾವಿರದಿಂದ 25 ಸಾವಿರ ಟನ್‌ಗಷ್ಟು ಚಿನ್ನವನ್ನು ಆಭರಣದ ರೂಪದಲ್ಲಿ ಹೊಂದಿದ್ದಾರೆ. ವಿಶ್ವದ ಶೇ 11 ರಷ್ಟು ಚಿನ್ನ ಭಾರತೀಯರ ಬಳಿಯಿದೆ. ಅದರಲ್ಲಿಯೂ ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಚಿನ್ನವಿದೆ ಎಂದು ವರದಿ ಹೇಳಿದೆ. ಭಾರತದಲ್ಲಿ ಚಿನ್ನ ಕೊಳ್ಳುವುದು ಕೇವಲ ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಇದು ಆರ್ಥಿಕತೆಯನ್ನು ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿಸುತ್ತದೆ.

2020–21ರ ವಿಶ್ವ ಚಿನ್ನದ ಮಂಡಳಿಯ ಅಧ್ಯಯನವು ಭಾರತೀಯ ಕುಟುಂಬಗಳು 21,000 ರಿಂದ 23,000 ಟನ್‌ಗಳ ನಡುವೆ ಚಿನ್ನದ ನಿಕ್ಷೇಪವನ್ನು ಹೊಂದಿದ್ದವು ಎಂದು ಅಂದಾಜಿಸಲಾಗಿದೆ, ಅಂದಿನಿಂದ ಇದು ತೀವ್ರವಾಗಿ ಹೆಚ್ಚಾಗಿದೆ. ಇದು ಭಾರತದ GDP ಯ ಸುಮಾರು 40% ರಷ್ಟನ್ನು ಬೆಂಬಲಿಸುತ್ತದೆ ಎಂದು ಅಂದಾಜಿಸಲಾಗಿದೆ.

ಮಂಗಳವಾರ ಚಿನ್ನದ ಬೆಲೆ ಭಾರತದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದು, ಇದೇ ಮೊದಲ ಬಾರಿಗೆ ಬಂಗಾರದ ಬೆಲೆ ಲಕ್ಷ ರೂಪಾಯಿಯನ್ನು ದಾಟಿದೆ. ಮಂಗಳವಾರ 24 ಕ್ಯಾರೆಟ್‌ 10 ಗ್ರಾಂ ಶುದ್ಧ ಚಿನ್ನದ ಬೆಲೆ 1 ಲಕ್ಷದ 1 ಸಾವಿರದ 350 ರೂಪಾಯಿ ಆಗಿದೆ. ಅಂದ್ರೇ 1 ಗ್ರಾಂ ಚಿನ್ನಕ್ಕೆ ಬರೋಬ್ಬರಿ 10 ಸಾವಿರ ರೂಪಾಯಿ ಆದಂತಾಗಿದೆ. ಸೋಮವಾರ ಈ ಬೆಲೆ 98 ಸಾವಿರದ 350 ರೂಪಾಯಿ ಇತ್ತು.

ಈ ಸುದ್ದಿಯನ್ನೂ ಓದಿ: Gold Price Today: ಸಾರ್ವಕಾಲಿಕ ಏರಿಕೆ ಕಂಡ ಚಿನ್ನದ ದರ; 1ಲಕ್ಷ ರೂ. ಗಡಿ ದಾಟಿದ ರೇಟ್‌!

ಒಂದೇ ದಿನಕ್ಕೆ ಮೂರು ಸಾವಿರ ರೂಪಾಯಿ ಏರಿಕೆಯಾಗಿದ್ದರಿಂದ ಚಿನ್ನದ ಬೆಲೆ ಲಕ್ಷ ದಾಟಿದೆ. ಇನ್ನು, 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂಗೆ 92 ಸಾವಿರದ 900 ರೂಪಾಯಿ ಆಗಿದ್ದು, ಇದು ಕೂಡ ಶೀಘ್ರದಲ್ಲೇ ಲಕ್ಷದ ಗಡಿ ಮುಟ್ಟುತ್ತೆ ಎಂದು ಹೇಳಲಾಗುತ್ತಿದೆ. 18 ಕ್ಯಾರೆಟ್‌ ಗೋಲ್ಡ್‌ ಬೆಲೆ 76 ಸಾವಿರ ರೂಪಾಯಿ ಇದ್ದು, ಇದು ಕೂಡ ಒಂದೇ ದಿನದಲ್ಲಿ ಮೂರು ಸಾವಿರ ರೂಪಾಯಿ ಹೆಚ್ಚಾಗಿದೆ. ಬೆಳ್ಳಿಯ ದರ ಕೂಡ ಕೆಜಿಗೆ 1 ಲಕ್ಷದ 1 ಸಾವಿರ ರೂಪಾಯಿ ಇದ್ದು, ಸದ್ಯಕ್ಕೆ ಅದು ಕೂಡ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ.