ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lalbagh Flower Show: ನಾಳೆಯಿಂದ ಲಾಲ್​​ಬಾಗ್​ನಲ್ಲಿ ಗಣರಾಜ್ಯೋತ್ಸವ ಫ್ಲವರ್ ಶೋ: ಈ ಬಾರಿ ʼತೇಜಸ್ವಿ ವಿಸ್ಮಯʼ! ಟಿಕೆಟ್​ ದರವೆಷ್ಟು?

ತೋಟಗಾರಿಕೆ ಇಲಾಖೆಯಿಂದ ಆಯೋಜಿಸುತ್ತಿರುವ 219ನೇ ಪ್ರದರ್ಶನ ಇದಾಗಿದೆ. ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ 'ತೇಜಸ್ವಿ ವಿಸ್ಮಯ' ವಿಷಯವನ್ನಾಧರಿಸಿದ ಈ ಪ್ರದರ್ಶನದಲ್ಲಿ ಗಾಜಿನ ಮನೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ನೆಚ್ಚಿನ ಕಾಡನ್ನು ನಿರ್ಮಿಸಲಾಗುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಹತ್ತು-ಹಲವು ಆಕರ್ಷಣೆಗಳಿದ್ದು, ಒಟ್ಟಾರೆ 3 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಲಾಗುತ್ತಿದೆ.

ಲಾಲ್‌ಬಾಗ್‌ ಫ್ಲವರ್‌ ಶೋ ಸಿದ್ಧತೆ

ಬೆಂಗಳೂರು, ಜ.13: ಲಾಲ್‌ಬಾಗ್‌ನಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ (Lalbagh Flower Show) ನಾಳೆ (ಜ.14) ಉದ್ಘಾಟನೆಗೊಳ್ಳಲಿದೆ. ಗಣರಾಜ್ಯೋತ್ಸವ (Republic Day) ದಿನಾಚರಣೆ ಅಂಗವಾಗಿ ತೋಟಗಾರಿಕಾ ಇಲಾಖೆ ಜನವರಿ 14ರಿಂದ 26ರವರೆಗೆ 219ನೇ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿದೆ. ಈ ಬಾರಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಜೀವನಕ್ಕೆ ಸಂಬಂಧಿಸಿದಂತೆ ಫ್ಲವರ್ ಶೋ ಆಯೋಜಿಸಲಾಗಿದ್ದು, ಜ.14ರ ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ‌ ಹಾಗೂ ಸಾಹಿತಿ ತೇಜಸ್ವಿ ಕುಟುಂಬ ಸದಸ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ಆಯೋಜಿಸುತ್ತಿರುವ 219ನೇ ಪ್ರದರ್ಶನ ಇದಾಗಿದೆ. ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ 'ತೇಜಸ್ವಿ ವಿಸ್ಮಯ' ವಿಷಯವನ್ನಾಧರಿಸಿದ ಈ ಪ್ರದರ್ಶನದಲ್ಲಿ ಗಾಜಿನ ಮನೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ನೆಚ್ಚಿನ ಕಾಡನ್ನು ನಿರ್ಮಿಸಲಾಗುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಹತ್ತು-ಹಲವು ಆಕರ್ಷಣೆಗಳಿದ್ದು, ಒಟ್ಟಾರೆ 3 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಲಾಗುತ್ತಿದೆ.

''ತೇಜಸ್ವಿ ಅವರ ಬದುಕು -ಬರಹ, ಸಾಮಾಜಿಕ ಕಳಕಳಿ, ರೈತ ಚಳವಳಿ, ಪರಿಸರ ಕುರಿತು ಅವರಿಗಿದ್ದ ಕಾಳಜಿಯನ್ನು ಈ ಬಾರಿಯ ಫಲಪುಷ್ಪ ಪ್ರದರ್ಶನ ಬಿಂಬಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.14 ರಂದು ಸಂಜೆ 4 ಗಂಟೆಗೆ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಜ.15ರಿಂದ 26ರವರೆಗೆ ಪ್ರದರ್ಶನ ನಡೆಯಲಿದೆ,'' ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಆರ್‌. ಗಿರೀಶ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗಾಜಿನ ಮನೆಯಲ್ಲಿ ಕಾಡು

ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ (ಉದ್ಯಾನ, ತೋಟಗಳು ಮತ್ತು ಪುಷ್ಪಾಭಿವೃದ್ಧಿ) ಡಾ. ಎಂ. ಜಗದೀಶ್‌ ಮಾತನಾಡಿ, ''ಕಿಕ್ಕಿರಿದ ಕಾಡುಗಳಿಂದ ಆವೃತವಾದ 45X45 ಅಡಿ ವಿಸ್ತೀರ್ಣದ 25 ಅಡಿ ಎತ್ತರದ ಬೃಹತ್‌ ಬೆಟ್ಟ, ಜಲಪಾತದ ಮಾದರಿ ಜತೆಗೆ, ಅದರ ತಪ್ಪಲಿನಲ್ಲಿ ತೇಜಸ್ವಿಯವರ 'ನಿರುತ್ತರ' ಮನೆಯ ಪುಷ್ಪಮಾದರಿ ಬರಲಿದೆ. ಅದರ ಮುಂದೆ 4 ಅಡಿ ಎತ್ತರದ ತೇಜಸ್ವಿ-ರಾಜೇಶ್ವರಿಯವರ ಪ್ರತಿಮೆಗಳು, ತೇಜಸ್ವಿಯವರ ಸ್ಕೂಟರ್‌ ಮತ್ತು ಕರ್ವಾಲೊ ಕಾದಂಬರಿ ಪಾತ್ರವಾದ ಕಿವಿ ನಾಯಿ, ಕರಿಯಪ್ಪ, ಮಂದಣ್ಣರ ಪಾತ್ರ, ಏರೋಪ್ಲೇನ್‌ ಚಿಟ್ಟೆ ಮೊದಲಾದ ಪ್ರಾಣಿ ಪಕ್ಷಿ- ಕೀಟಗಳ ಪುಷ್ಪ ಮಾದರಿಗಳು ಇರಲಿವೆ. ಬೆಟ್ಟದ ಬಲಭಾಗದ ತಪ್ಪಲಿನಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕಟ್ಟಡದ ಪುಷ್ಪ ಮಾದರಿ ಇರಲಿವೆ,'' ಎಂದರು.

ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಸಂಗೊಳ್ಳಿ ರಾಯಣ್ಣ- ಕಿತ್ತೂರು ಚೆನ್ನಮ್ಮ

''ನಿರುತ್ತರ ಮನೆ, ತೇಜಸ್ವಿ ಪ್ರತಿಷ್ಠಾನದ ಕಟ್ಟಡ, ಜೇನುಹುಳು, ಬಣ್ಣದ ಚಿಟ್ಟೆಗಳು, ಕಪ್ಪೆ, ಜೀರುಂಡೆ ಮತ್ತು ಬಸವನ ಹುಳಗಳೂ ಸೇರಿದಂತೆ ಹಲವು ಪುಷ್ಪಾಕೃತಿಗಳನ್ನು ನಿರ್ಮಿಸಲು ಒಂದು ಬಾರಿಗೆ 4.50 ಲಕ್ಷದಂತೆ ಎರಡು ಬಾರಿಗೆ 9 ಲಕ್ಷ ಹೂಗಳನ್ನು ಬಳಸಲಾಗುವುದು,'' ಎಂದು ಜಗದೀಶ್‌ ತಿಳಿಸಿದರು.

ಕಾಡುಪ್ರಾಣಿಗಳ ಪ್ರತಿಕೃತಿ

ಇದೇ ಮೊದಲ ಬಾರಿಗೆ ಪರಿಸರ ಮತ್ತು ಕಾಡು ಪ್ರಾಣಿಗಳ ಕುರಿತಾದ ಎರಡು ಬೃಹತ್‌ ಸ್ತಬ್ದ ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಕಾಡು ಪ್ರಾಣಿಗಳ ಪ್ರತಿಕೃತಿಗಳು ಲಾಲ್‌ಬಾಗ್‌ನಾದ್ಯಂತ ಸಂಚರಿಸುತ್ತಾ ನೋಡುಗರಿಗೆ ಖುಷಿ ಕೊಡಲಿವೆ.

ಉದ್ಯಾನನಗರಿ ಬೆಂಗಳೂರು ಮುಕುಟಕ್ಕೆ ಮತ್ತೊಂದು ಗರಿ; ಲಾಲ್‌ಬಾಗ್, ಕಬ್ಬನ್ ಪಾರ್ಕ್ ಬಳಿಕ ತಲೆ ಎತ್ತಲಿದೆ 3ನೇ ದೊಡ್ಡ ಉದ್ಯಾನವನ

ಜ.15ರಿಂದ 26ರವರೆಗೆ ಲಾಲ್‌ಬಾಗ್‌ನಲ್ಲಿ ನಿತ್ಯವೂ ಸಂಜೆ 5 ರಿಂದ 7ರವರೆಗೆ ಮಳಿಗೆಗಳ ಪಕ್ಕದ ಹುಲ್ಲು ಹಾಸಿನ ಮೇಲೆ ನನ್ನ ತೇಜಸ್ವಿಯವರ ಕರ್ವಾಲೊ, ಜುಗಾರಿ ಕ್ರಾಸ್‌ ಸೇರಿದಂತೆ ತೇಜಸ್ವಿಯವರ ಪ್ರಸಿದ್ಧ ನಾಟಕಗಳು, ಸಿನಿಮಾ- ಸಾಹಿತ್ಯ ಕುರಿತಾದ ಸಂವಾದಗಳು ನಡೆಯಲಿವೆ. ಜತೆಗೆ, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯೂ ಇರಲಿದೆ.

ಪ್ರವೇಶ ಶುಲ್ಕ ಎಷ್ಟು?

ವಯಸ್ಕರಿಗೆ ವಾರದ ದಿನಗಳಲ್ಲಿ 80 ರೂ. ಹಾಗೂ ರಜಾ ದಿನಗಳಲ್ಲಿ 100 ರೂ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲೂ 30 ರೂ. ಆನ್‌‍ಲೈನ್‌ನಲ್ಲೂ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಶಾಲಾ ಸಮವಸ್ತ್ರ ಧರಿಸಿ ಬರುವ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರುತ್ತದೆ.

ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ಪ್ರದರ್ಶನ

ಎಲ್‌ಇಡಿ ಸ್ಕ್ರೀನ್‌‍ಗಳನ್ನು ಬಳಸಿ ಲಾಲ್‌‍ಬಾಗ್‌‍ನ ಆಯ್ದ 6 ಸ್ಥಳಗಳಲ್ಲಿ ತೇಜಸ್ವಿಯವರ ಬದುಕು-ಬರಹ ಸಾಧನೆಗಳನ್ನು ಬಿಂಬಿಸುವ ಫೋಟೋಗಳು, ವಿಡಿಯೊಗಳು, ಎಐ ವಿಡಿಯೊ ತುಣುಕುಗಳು ಫಲಪುಷ್ಪ ಪ್ರದರ್ಶನದ ಅವಧಿಯುದ್ದಕ್ಕೂ ಪ್ರದರ್ಶನಗೊಳ್ಳಲಿವೆ.

ಹರೀಶ್‌ ಕೇರ

View all posts by this author