ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿಂದುಳಿದ, ದಲಿತ ಸಮುದಾಯಗಳ 24 ಮಠಗಳಿಗೆ ಯಲಹಂಕ ಕ್ಷೇತ್ರದಲ್ಲಿ ಭೂಮಿ

SR Vishwanath: ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿ 24 ಹಿಂದುಳಿದ ಹಾಗೂ ದಲಿತ ಸಮುದಾಯಗಳ ಮಠಗಳಿಗೆ ಭೂಮಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭೂಮಿ ಪಡೆದ 24 ಮಠಾಧೀಶರು ಸೋಮವಾರ ಬೆಳಗ್ಗೆ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಮನೆಗೆ ಆಗಮಿಸಿ ಆಶೀರ್ವದಿಸಿದ್ದಾರೆ.

ಶಾಸಕ ಎಸ್.ಆರ್. ವಿಶ್ವನಾಥ್ ಅವರ ನಿವಾಸಕ್ಕೆ ಆಗಮಿಸಿದ ಮಠಾಧೀಶರು.

ಬೆಂಗಳೂರು, ಮಾ.2: ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿ 24 ಹಿಂದುಳಿದ ಹಾಗೂ ದಲಿತ ಸಮುದಾಯಗಳ ಮಠಗಳಿಗೆ ಭೂಮಿ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಭೂಮಿ ಪಡೆದ 24 ಮಠಾಧೀಶರು ಶಾಸಕ ಎಸ್.ಆರ್. ವಿಶ್ವನಾಥ್ (SR Vishwanath) ಅವರ ಮನೆಗೆ ಆಗಮಿಸಿ ಆಶೀರ್ವದಿಸಿದರು.‌

ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಮಾತನಾಡಿದ ಶಾಸಕ ಎಸ್.ಆರ್. ವಿಶ್ವನಾಥ್, ʼʼಇದೊಂದು ಸುಯೋಗದ ದಿನವೆಂದು ಭಾವಿಸುತ್ತೇನೆ. ರಾಜ್ಯದ ಹಿಂದುಳಿದ ಹಾಗೂ ದಲಿತ ಸಮುದಾಯಗಳ ಸುಮಾರು 24 ಮಠಾಧೀಶರಿಗೆ ಯಲಹಂಕ ಕ್ಷೇತ್ರದಲ್ಲಿ ಒಂದೇ ಕಡೆಯಲ್ಲಿ ಜಾಗ ನೀಡಿರುವುದು ಸಂತೋಷ ಉಂಟು ಮಾಡಿದ್ದು, ಈ ಎಲ್ಲ ಮಠಾಧೀಶರ ಆಶೀರ್ವಾದ, ಹರಕೆ ನಮ್ಮ ಕ್ಷೇತ್ರದ ಮೇಲಿರಲಿ. ಮಠ ಮಾನ್ಯಗಳ ಸೇವೆಯಿಂದಲೇ ನಮ್ಮ ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಹಲವು ಸಾಮಾಜಿಕ ಚಟುವಟಿಕೆಗಳಾಗಿವೆ. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ಮಠಮಾನ್ಯಗಳ ಕೊಡುಗೆ ಪ್ರಶಂಸಾರ್ಹವಾದುದು. ಧರ್ಮದ ಜತೆಗೆ ಶಿಕ್ಷಣದ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತಿರುವ ಹಿಂದುಳಿದ ಹಾಗೂ ದಲಿತ ಸಮುದಾಯಗಳ 24 ಮಠಗಳಿಗೆ ಯಲಹಂಕ ಕ್ಷೇತ್ರದಲ್ಲಿ ಭೂಮಿ ನೀಡಿರುವುದು ಹೆಮ್ಮೆಯ ವಿಷಯ. ಧರ್ಮದ ಬೆಳವಣಿಗೆ, ಸಂಸ್ಕೃತಿ, ಪರಂಪರೆಯ ಪ್ರಗತಿಗೆ ಈ ಎಲ್ಲ ಮಠಾಧೀಶರು ಹೆಚ್ಚಿನ ರೀತಿಯಲ್ಲಿ ಶ್ರಮಿಸುವಂತಾಗಲಿ, ತನ್ಮೂಲಕ ನಮ್ಮ ದೇಶ ನಮ್ಮ ಸಮಾಜಕ್ಕೆ ಒಳಿತಾಗಲಿʼʼ ಎಂದು ತಿಳಿಸಿದರು.

ಚಿತ್ರದುರ್ಗದ ಮಾದರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ʼʼಧರ್ಮ ಸಂರಕ್ಷಣೆ, ಸಾಮಾಜಿಕ ಪ್ರಗತಿಗಾಗಿ, ಯಲಹಂಕ ಕ್ಷೇತ್ರದಲ್ಲಿ ಒಂದೇ ಕಡೆ ರಾಜ್ಯದ 24 ದಲಿತ ಹಾಗೂ ಹಿಂದುಳಿದ ಮಠಗಳಿಗೆ ಭೂಮಿ ನೀಡಿರುವುದು ರಾಜ್ಯದಲ್ಲಿ ಇದೇ ಪ್ರಥಮʼʼ ಎಂದು ಹೇಳಿ ಶಾಸಕ ಎಸ್.ಆರ್. ವಿಶ್ವನಾಥ್ ಅವರಿಗೆ ಹರಿಸಿದರು.

ರಾಯಭಾರಿಗಳ ಜತೆ ಮಾತುಕತೆ, ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಪ್ರಹ್ಲಾದ ಜೋಶಿ

ಎಸ್.ಆರ್. ವಿಶ್ವನಾಥ್ ಅವರ ಕುಟುಂಬದ ವತಿಯಿಂದ ಎಲ್ಲ 24 ಮಠಾಧೀಶರಿಗೆ ಗುರುವಂದನೆ ಸಲ್ಲಿಸಲಾಯಿತು. ಬಿಜೆಪಿ ಮುಖಂಡರಾದ ಎಸ್.ಎನ್. ರಾಜಣ್ಣ, ಎಂ. ಮುನಿರಾಜು, ವಿ.ಎಂ. ಈಶ್ವರ್, ವಿ. ಪವನ್ ಕುಮಾರ್, ಅದ್ದೆ ವಿಶ್ವನಾಥಪುರ ಮಂಜುನಾಥ್, ಚೊಕ್ಕನಹಳ್ಳಿ ವೆಂಕಟೇಶ್, ಎ.ಸಿ. ಮುನಿಕೃಷ್ಣಪ್ಪ, ಎಸ್.ಜಿ. ಪ್ರಶಾಂತ್ ರೆಡ್ಡಿ, ಬಿ. ಶ್ರೀನಿವಾಸಯ್ಯ, ಮುನಿದಾಸಪ್ಪ, ಲಿಂಗನಹಳ್ಳಿ ವೆಂಕಟೇಶ್, ಎಚ್.ಸಿ. ರಾಜೇಶ್, ರಾಮಚಂದ್ರರೆಡ್ಡಿ, ಶಿವಾನಂದ ಸತೀಶ್ ರೆಡ್ಡಿ, ಎಚ್.ಎಸ್. ಕಿರಣ್, ಮುನಿರಾಜು, ಮುನಿಕೃಷ್ಣ ಮಲ್ಲೇಶ್, ಕೆ. ಬಾಬು, ಯಲಹಂಕ ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.