ಬೆಂಗಳೂರು, ಜ.21: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಕೀಲರ ಸಂಘದ ರಾಜ್ಯಮಟ್ಟದ ಸಮಾವೇಶ ಹಾಗೂ 2ನೇ ವರ್ಷದ ವಾರ್ಷಿಕೋತ್ಸವ ಕುರಿತು ಚರ್ಚಿಸಲು ಬೆಂಗಳೂರಿನ ಗಾಂಧಿ ನಗರದ (Bengaluru News) ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ. ಮುನಿಯಪ್ಪ, ದೇಶದ ಎಲ್ಲ ಬಾರ್ ಕೌನ್ಸಿಲ್‌ನಲ್ಲಿ ಮತ್ತು ಅದರ ಚುನಾವಣೆಗಳಲ್ಲಿ ಮೀಸಲಾತಿ ಇಲ್ಲ, ಅದಕ್ಕಾಗಿ ಹೋರಾಟ ಮಾಡಬೇಕಿದೆ. ಹಾಗೆಯೇ ಬಾರ್ ಕೌನ್ಸಿಲ್ ಮತ್ತು ವಕೀಲರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮ ಪಡಬೇಕು ಎಂದು ಕರೆ ನೀಡಿದರು.
ರಾಜ್ಯದ ಎಲ್ಲ ಕೋರ್ಟ್‌ಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಫೋಟೋವನ್ನು ಅಳವಡಿಸಬೇಕು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದವರ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು. ಏಪ್ರಿಲ್‌ನಲ್ಲಿ ರಾಜ್ಯಮಟ್ಟದ ಸಮಾವೇಶ ಮಾಡಲು ರಾಜ್ಯಾದ್ಯಂತ ಸಂಘವನ್ನು ಬೆಳೆಸಲು ಎಲ್ಲರೂ ಶ್ರಮಿಸಬೇಕು. ಎಲ್ಲ ವಕೀಲರು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ದೇಶಕ್ಕೆ ಮಾದರಿಯಾಗುವ ಸಂಘವನ್ನು ಕಟ್ಟಬೇಕು. ಮುಂದಿನ ಪೀಳಿಗೆಗೆ ಈ ಸಂಘ ಆದರ್ಶವಾಗಬೇಕು. ಸಂಘದ ಕೇಂದ್ರ ಕಚೇರಿಯನ್ನು ಮಾಡುವಲ್ಲಿ ಎಲ್ಲರೂ ಕೆಲಸ ಮಾಡಬೇಕು, ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಹೈಕೋರ್ಟ್ ಹಿರಿಯ ನ್ಯಾಯವಾದಿ ಬಾಲನ್ ಮಾತನಾಡಿ, ದೇಶದ ಎಲ್ಲ ಹೈಕೋರ್ಟ್‌ಗಳಲ್ಲಿ ಮೀಸಲಾತಿ ಹೆಚ್ಚಿಸಬೇಕು. ನ್ಯಾಯಾಂಗದ ಎಲ್ಲ ಹುದ್ದೆಗಳಲ್ಲಿ ಮೀಸಲಾತಿ ಜಾರಿ ಮಾಡಬೇಕು. ಈ ದೇಶವನ್ನು ಕಟ್ಟಿದವರು ನಾವು, ಈ ಸಂಘಟನೆಯ ಅವಶ್ಯಕತೆ ಇದೆ ಎಂದು ಹೇಳಿದರು.
ನ್ಯಾಯವಾದಿ ಲೋಕನಾಥ್ ಮಾತನಾಡಿ, ಕರಿ ಕೋಟ್ ಹಾಕಿದವರನ್ನು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ. ನಮ್ಮಲ್ಲಿ ಜ್ಞಾನ , ಬುದ್ಧಿ, ಕೌಶಲ್ಯವಿದೆ. ಆದರೆ ನಾವು ಒಗ್ಗಟ್ಟಾಗದಿದ್ದರೆ ಬೆಳೆಯಲು ಆಗುವುದಿಲ್ಲ ಎಂದು ಹೇಳಿದರು.
ಆನೇಕಲ್ ವಕೀಲರ ಸಂಘದ ಅಧ್ಯಕ್ಷರಾದ ಫಟಾಫಟ್ ಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ ಹಲವಾರು ದಲಿತ ಸಂಘಟನೆಗಳು ಇವೆ. ಅವರೆಲ್ಲರನ್ನೂ ಒಂದೆಡೆ ಸೇರಿಸಬೇಕು. ರಾಜ್ಯದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಸರಿ ಮಾಡಲು ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಬಾರ್ ಕೌನ್ಸಿಲ್‌ನಲ್ಲಿ ಕಡಿಮೆಯೆಂದರೂ ಇಬ್ಬರು ಸದಸ್ಯರನ್ನು ಚುನಾಯಿಸಬೇಕು ಎಂದು ತಿಳಿಸಿದರು.
KEA Group C Exam Hall Ticket: ಜ.25ರ ಎಸ್‌ಡಿಎ ಸೇರಿ ಗ್ರೂಪ್-ಸಿ ಹುದ್ದೆಗಳ ಪರೀಕ್ಷೆ ಪ್ರವೇಶ ಪತ್ರ ಪ್ರಕಟ
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಡಾ.ವೆಂಕಟೇಶ್ ಕೆ.ಪಿ., ಪ್ರಧಾನ ಕಾರ್ಯದರ್ಶಿ ಮುನಿರಾಜ್ ಎಸ್.ಎಂ, ಖಜಾಂಚಿ ಟಿ.ಎಲ್. ನಾಗರಾಜು, ನ್ಯಾಾಯವಾದಿಗಳಾದ ಜ್ಯೋತಿ ಮಳಲಿ, ಮಂಜುಳ ಟಿ., ಮೋಹನ್ ಕುಮಾರ್, ಚಿಕ್ಕವೆಂಟಯ್ಯ, ನಾಗರಾಜ್, ಪ್ರವೀಣ ಮುಗುಳಿ, ಕೆ. ವೆಂಕಟೇಶ್, ಹೊಸಕೋಟೆ ಕೃಷ್ಣಪ್ಪ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
![]()
ನಾನು ಬಾಬಾ ಸಾಹೇಬರ ಆಶಯದಂತೆ ಬೆಳೆದು ಬಂದವನು. ನನ್ನ ಸಿನಿಮಾಗಳಲ್ಲೂ ಅವರ ಆಶಯಗಳನ್ನು ತೋರಿಸುವ ಕೆಲಸವನ್ನು ಮಾಡಿದ್ದೇನೆ.
- ಜಡೇಶ್, ಚಲನಚಿತ್ರ ನಿರ್ದೇಶಕ.