ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಘೋರ ಘಟನೆ; 14 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ!

Bengaluru News: ಬೆಂಗಳೂರು ನಗರದ ವೈಟ್‌ಫೀಲ್ಡ್ ಬಳಿಯ ಇಮ್ಮಡಿ ಹಳ್ಳಿಯ ಮನೆಯಲ್ಲಿ ದುರ್ಘಟನೆ ನಡೆದಿದೆ. ಮಗಳ ಉಸಿರುಗಟ್ಟಿಸಿ ಕೊಂದ ಬಳಿಕ, ತಾಯಿ ಕೂಡ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ತಾಯಿ ಸುವರ್ಣ, ಮಗಳು ಕಾರುಣ್ಯ

ಬೆಂಗಳೂರು: ರಾಜಧಾನಿಯಲ್ಲಿ ಘೋರ ಘಟನೆ ನಡೆದಿದ್ದು, 14 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ನಗರದ (Bengaluru News) ವೈಟ್‌ಫೀಲ್ಡ್ ಬಳಿಯ ಇಮ್ಮಡಿ ಹಳ್ಳಿಯ ಮನೆಯಲ್ಲಿ ನಡೆದಿದೆ. ಸುವರ್ಣ (40) ಮತ್ತು ಪುತ್ರಿ ಕಾರುಣ್ಯ (14) ಮೃತರು.

ಮಗಳು ಕಾರುಣ್ಯಾಳ ಉಸಿರುಗಟ್ಟಿಸಿ ತಾಯಿ ಸುವರ್ಣ ಕೊಲೆ ಮಾಡಿದ್ದಾರೆ. ಬಳಿಕ ಆಕೆಯೂ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಸುವರ್ಣ ಅವರ ಅತ್ತೆ, ಮಾವ ಮನೆಯಲ್ಲಿ ಇದ್ದರು. ಈ ವೇಳೆ ಕೋಣೆಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಒಂದು ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ವೈಟ್‌ಫೀಲ್ಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಈ ಒಂದು ಘಟನೆಗೆ ಏನು ಕಾರಣ ಎನ್ನುವುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿ ಸಾವು

ಚಿಕ್ಕಮಗಳೂರು, ಏ.14: ಜಿಲ್ಲೆಯ (chikkamagaluru) ಹೆಬ್ಬಳ್ಳಿ ಗ್ರಾಮದಲ್ಲಿ ಆಟವಾಡುತ್ತಿದ್ದ ಹತ್ತು ವರ್ಷದ ಬಾಲಕಿಯೊಬ್ಬಳನ್ನು ವಿಧಿ ವಿಚಿತ್ರ ರೀತಿಯಲ್ಲಿ ಬಲಿ ಪಡೆದಿದೆ. ಮನೆಯಲ್ಲಿ ಸೀರೆಯಿಂದ ಕಟ್ಟಿದ್ದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ಬಾಲಕಿ, ಅಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಬಿಗಿದುಕೊಂಡು (strangled) ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿವಾಸಿಯಾದ ಪುಟ್ಟ ಕಂದಮ್ಮ ಲೇಖನಾ (10) ಮೃತಪಟ್ಟ ದುರ್ದೈವಿ. ಮನೆಯಲ್ಲಿ ಪೋಷಕರು ಇಲ್ಲದ ಸಮಯದಲ್ಲಿ ಬಾಲಕಿ ಸೀರೆಯಿಂದ ತಯಾರಿಸಿದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದಳು. ಆಟವಾಡುತ್ತಾ ಜೋಕಾಲಿಯಲ್ಲಿ ಗಿರಕಿ ಹೊಡೆಯುವಾಗ ಅಥವಾ ಆಕಸ್ಮಿಕವಾಗಿ ಕಾಲು ಜಾರಿದಾಗ, ಸೀರೆಯು ಆಕೆಯ ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡಿದೆ. ಇದರಿಂದಾಗಿ ಬಾಲಕಿಗೆ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಆರೋಗ್ಯ ತಪಾಸಣೆಗೆ ಹೋದವರಲ್ಲಿ ದೀರ್ಘಕಾಲದಿಂದಿದ್ದ ಕಾಯಿಲೆ ಪತ್ತೆ

ಕೆಲಸ ಮುಗಿಸಿ ಪೋಷಕರು ಮನೆಗೆ ಬಂದಾಗ ಮಗು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆಟವಾಡುತ್ತಿದ್ದ ಮಗು ಹೆಣವಾಗಿ ಬಿದ್ದಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.