ಬೆಂಗಳೂರು, ಏ.29: ಬೆಂಗಳೂರಿನ ಸಪ್ತಕ ಸಂಸ್ಥೆ (Sapthak Bangalore) ವತಿಯಿಂದ ಮೇ 2 ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರು ನಗರದ (Bengaluru News) ಮಲ್ಲೇಶ್ವರದಲ್ಲಿರುವ ಸೇವಾ ಸದನದಲ್ಲಿ ಗಾಯನ- ಸನ್ಮಾನ- ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಗಾಯಕ ಚೈತನ್ಯ ಭಟ್ಟ, ತಬಲಾ ಕಲಾವಿದ ವಿಘ್ನೇಶ ಕಾಮತ ಮತ್ತು ಹಾರ್ಮೋನಿಯಂ ವಾದಕ ಮಧುಸೂದನ ಭಟ್ಟ ಅವರ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಸನ್ಮಾನ ಕಾರ್ಯಕ್ರಮದಲ್ಲಿ ಎಪ್ಪತ್ತರ ವಸಂತದಲ್ಲಿರುವ ಪಂ. ಪರಮೇಶ್ವರ ಹೆಗಡೆ, ಕಲ್ಬಾಗ ಅವರಿಗೆ ಸಪ್ತಕ ಸಂಸ್ಥೆ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಗುವುದು.
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 'ಬೆಂಗಳೂರಿನ ಆತ್ಮ' ಕಲಾತ್ಮಕ ಶಿಲ್ಪ ಅನಾವರಣ; ಟರ್ಮಿನಲ್-2ರ ಸೌಂದರ್ಯಕ್ಕೆ ಹೊಸ ಮೆರುಗು
ಬಳಿಕ ಭಾರತೀ ಪ್ರತಾಪ ಅವರ ಗಾಯನ ಕಾರ್ಯಕ್ರಮ ನಡೆಯಲಿದ್ದು, ಅವರಿಗೆ ತಬಲಾ ಕಲಾವಿದ ಜಗದೀಶ ಕುರ್ತಕೋಟಿ, ಹಾಗೂ ಹಾರ್ಮೋನಿಯಂ ಅಶ್ವಿನ್ ವಾಲ್ವಾಲ್ಕರ್ ಸಾಥ್ ನೀಡಲಿದ್ದಾರೆ ಎಂದು ಸಪ್ತಕ ಸಂಸ್ಥೆಯ ಜಿ.ಎಸ್. ಹೆಗಡೆ ಅವರು ತಿಳಿಸಿದ್ದಾರೆ.