ಬೆಂಗಳೂರು: ಇಂದಿನಿಂದ ನೂತನ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸೀಮಿತ ಓಡಾಟ ಅರಂಭಿಸಲಿವೆ. ನಿನ್ನೆ (ಆಗಸ್ಟ್ 10) ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಮಾರ್ಗದ ಮೆಟ್ರೋ ಲೈನ್ ಉದ್ಘಾಟನೆ ಮಾಡಿದ್ದರು. ಇಂದಿನಿಂದ ಸಾರ್ವಜನಿಕರ ಪ್ರವೇಶ ನೀಡುವುದಾಗಿ ಬಿಎಂಆರ್ಸಿಎಲ್ (BMRCL) ಪ್ರಕಟಿಸಿದೆ. ಸಿಲ್ಕ್ ಬೋರ್ಡ್‌ನ ಟ್ರಾಫಿಕ್ ಸಮಸ್ಯೆಯಿಂದ ನೊಂದು ಬೆಂದಿದ್ದ ಬೆಂಗಳೂರಿಗರಿಗೆ (Bengaluru) ಇದು ತುಸು ನಿರಾಳ ನೀಡಲಿದೆ. ಇದರ ಟಿಕೆಟ್ ದರಗಳು (yellow line ticket rates) ಮತ್ತಿತರ ವಿವರಗಳು ಇಲ್ಲಿವೆ.
ಇಂದಿನಿಂದ ಯೆಲ್ಲೋ ಮಾರ್ಗದ ರೈಲು ಸಾರ್ವಜನಿಕರಿಗೆ ಲಭ್ಯವಿರಲಿದೆ. ಇಂದು ಬೆಳಗ್ಗೆ 6:30ರಿಂದ ಸಂಚಾರ ಶುರುವಾಗಿದೆ. ಒಂದು ದಿಕ್ಕಿನಲ್ಲಿ 35 ನಿಮಿಷಗಳ ಸಂಚಾರ ಸಮಯ ಇದ್ದು, ಹಳದಿ ಮಾರ್ಗ ಒಟ್ಟು 16 ಮೆಟ್ರೋ ನಿಲ್ದಾಣಗಳನ್ನ ಹೊಂದಿದೆ. ಡೆಲ್ಟಾ ಎಲೆಕ್ಟ್ರಾನಿಮ್ ನಿಂದ ಬೊಮ್ಮಸಂದ್ರದವರೆಗೂ ಮೆಟ್ರೋ ಸಂಚಾರ ನಡೆಸಲಿದೆ. ರಾತ್ರಿ 11:15ಕ್ಕೆ ಕೊನೆಯ ರೈಲು ಸಂಚರಿಸಲಿದೆ. ಭಾನುವಾರದಂದು ಬೆಳಗ್ಗೆ 6:30ರ ಬದಲು 7 ಗಂಟೆಗೆ ಮೆಟ್ರೋ ಸಂಚಾರ ಆರಂಭವಾಗಲಿದೆ.
15 ರೈಲುಗಳ ಪೈಕಿ ಸದ್ಯ ಮೂರು ರೈಲುಗಳು ಲಭ್ಯಸದ್ಯದ 20-25 ನಿಮಿಷಗಳ ಅಂತರದಲ್ಲಿ ರೈಲು ಸಂಚಾರ ಸಾಧ್ಯತೆ ಇದೆ. ನಿತ್ಯ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸೋ ನಿರೀಕ್ಷೆ ಇದ್ದು, ರೈಲುಗಳ ಸಂಖ್ಯೆ ಹೆಚ್ಚಾದ್ರೆ ಪ್ರತಿ ದಿನ 8 ಲಕ್ಷ ಮಂದಿ ಪ್ರಯಾಣಿಸೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಟಿಕೆಟ್ ದರಗಳು ಎಷ್ಟಿವೆ?
ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣದ ನಡುವಿನ ಪ್ರಯಾಣದ ದರ 60 ರೂಪಾಯಿ ಇರಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
- ಕನಿಷ್ಠ ದರ -10 ರೂ.
- ಗರಿಷ್ಠ ದರ - 60 ರೂ.
- ಟೋಕನ್ -60 ರೂ.
- ಸ್ಮಾರ್ಟ್ ಕಾರ್ಡ್- 57 ರೂ.
ಹಳದಿ ಮಾರ್ಗದಿಂದ ಅನುಕೂಲಗಳೇನು?
- ಬೆಂಗಳೂರಿನ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಿಂದ ಬೆಂಗಳೂರಿನ ಕೇಂದ್ರ ಭಾಗಕ್ಕೆ ಸಂಪರ್ಕ
- ಮೆಟ್ರೋ ಬಳಸೋದ್ರಿಂದ ಟ್ರಾಫಿಕ್ ಸಮಸ್ಯೆ ಕಡಿಮೆ ಸಾಧ್ಯತೆ
- HSR ಲೇಔಟ್, BTM ಲೇಔಟ್, ಸಿಂಗಸಂದ್ರ, ಬೊಮ್ಮನಹಳ್ಳಿ,
- ಜಯನಗರ, ತಿಲಕ್‌ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಅನುಕೂಲ
- ಪ್ರತಿಷ್ಠಿತ ಜಯದೇವ ಆಸ್ಪತ್ರೆ, ಇನ್ಫೋಸಿಸ್‌ಗೆ ತೆರಳುವ ಸಾವಿರಾರು ಜನರಿಗೆ ಅನುಕೂಲ
- ಬೆಂಗಳೂರಿನಿಂದ ಹೊಸೂರುಭಾಗಕ್ಕೆ ತೆರಳುವ ಪ್ರಯಾಣಿಕರಿಗೂ ಅನುಕೂಲ
ಹಳದಿ ಮಾರ್ಗದ ನಿಲ್ದಾಣಗಳು
- ಬೊಮ್ಮಸಂದ್ರ
- ಹೆಬ್ಬಗೋಡಿ
- ಹುಸ್ಕೂರ್ ರಸ್ತೆ
- ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ
- ಎಲೆಕ್ಟ್ರಾನಿಕ್ ಸಿಟಿ
- ಬೆರತೇನ ಅಗ್ರಹಾರ
- ಹೊಸ ರೋಡ್
- ಸಿಂಗಸಂದ್ರ
- ಕೂಡ್ಲು ಗೇಟ್
- ಹೊಂಗಸಂದ್ರ
- ಬೊಮ್ಮನಹಳ್ಳಿ
- ಸೆಂಟ್ರಲ್ ಸಿಲ್ಕ್ ಬೋರ್ಡ್
- ಬಿಟಿಎಂ ಲೇಔಟ್
- ಜಯದೇವ ಆಸ್ಪತ್ರೆ
- ರಾಗಿ ಗುಡ್ಡ ದೇವಸ್ಥಾನ
ಜಯದೇವ ಆಸ್ಪತ್ರೆ ಬಳಿ ಪಿಂಕ್ ಲೈನ್‌ಗೆ ಇಂಟರ್‌ಚೇಂಜ್
ಇದನ್ನೂ ಓದಿ: Namma Metro Yellow Line: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸೋಮವಾರದಿಂದ ಸಂಚಾರ, ಏನೇನು ವಿಶೇಷತೆ?