ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Liquor price hike: ರಾಜ್ಯದಲ್ಲಿ ನೂತನ ಅಬಕಾರಿ ಸುಂಕ ನೀತಿ ಜಾರಿ; ಕೆಲ ಬ್ರ್ಯಾಂಡ್‌ಗಳ ಮದ್ಯದ ದರ ಭಾರಿ ಹೆಚ್ಚಳ!

ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ AIB ಆಧಾರಿತ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪರಿಷ್ಕೃತ ದರಗಳಲ್ಲಿ ಜನಪ್ರಿಯ ಇಂಡಿಯನ್ ಮೇಡ್ ಲಿಕರ್ ಬ್ರ್ಯಾಂಡ್‌ಗಳು ಮತ್ತು ಬಿಯರ್ ಬ್ರ್ಯಾಂಡ್‌ಗಳ ದರಗಳನ್ನು ಒಳಗೊಂಡಿದ್ದು, ಅವುಗಳ ಪ್ಯಾಕ್ ಗಾತ್ರ, ಮದ್ಯಾಂಶದ ಪ್ರಮಾಣ ಮತ್ತು ಸ್ಲ್ಯಾಬ್ ವ್ಯವಸ್ಥೆಯ ಆಧಾರದ ಮೇಲೆ ದರಗಳು ಬದಲಾಗಲಿವೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣ ಆಧರಿಸಿ ಸುಂಕ ವಿಧಿಸುವ ನೂತನ ಅಬಕಾರಿ ಸುಂಕ ನೀತಿಯು ರಾಜ್ಯದಲ್ಲಿ ಜಾರಿಗೆ ಬಂದಿದೆ. ಇದರಿಂದ ಆಲ್ಕೋಹಾಲ್ ಪ್ರಮಾಣ ಹೆಚ್ಚಿರುವ ಎಲ್ಲ ಮದ್ಯಗಳ ಮಾರಾಟ ಬೆಲೆ (Liquor price hike) ಏರಿಕೆಯಾಗಿದೆ. ಹೊಸ ಆದೇಶದ ಹಲವು ಬ್ರ್ಯಾಂಡ್‌ಗಳ ಮದ್ಯದ ದರದಲ್ಲಿ ಏರಿಕೆ ಕಂಡುಬಂದಿದ್ದರೆ, ಕೆಲ ಬ್ರ್ಯಾಂಡ್‌ಗಳ ಮದ್ಯದ ದರ ಇಳಿಕೆಯಾಗಿದೆ.

ಈ ಬಗ್ಗೆ ರಾಜ್ಯ ಅಬಕಾರಿ ಇಲಾಖೆಯು ಭಾನುವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಸಿಎಂ ಸಿದ್ದರಾಮಯ್ಯ ಅವರ 2026-27ರ ಬಜೆಟ್ ಘೋಷಣೆಯಂತೆ ಭಾರತದಲ್ಲೇ ಮೊದಲ ಬಾರಿಗೆ ಈ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಮದ್ಯದ ಬೆಲೆಗಳನ್ನು ಸಮತೋಲನಗೊಳಿಸುವುದು, ಕರ್ನಾಟಕದ ಗ್ರಾಹಕರಿಗೆ ಕಡಿಮೆ ದರದಲ್ಲಿ ಮದ್ಯ ಲಭ್ಯವಾಗುವಂತೆ ಮಾಡುವುದು ಹಾಗೂ ನೆರೆಯ ರಾಜ್ಯಗಳ ದರಗಳಿಗೆ ಹೊಂದಾಣಿಕೆ ಮಾಡುವುದು ಈ ನೀತಿಯ ಉದ್ದೇಶವಾಗಿದೆ ಎಂದು ಇಲಾಖೆ ತಿಳಿಸಿದೆ.

ಭಾರತದಲ್ಲೇ ಮೊದಲ ಬಾರಿಗೆ 2026ರ ಮೇ 11ರಿಂದ ಕರ್ನಾಟಕದಲ್ಲಿ AIB ಆಧಾರಿತ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಮದ್ಯ ತೆರಿಗೆ ವ್ಯವಸ್ಥೆಯ ‘ಗೋಲ್ಡ್ ಸ್ಟ್ಯಾಂಡರ್ಡ್’ ಎಂದು ಪರಿಗಣಿಸಲಾಗಿದೆ. ಹೊಸ ನೀತಿಯಡಿ ಸರ್ಕಾರದ ನೇರ ಬೆಲೆ ನಿಗದಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ಉತ್ಪನ್ನಗಳನ್ನು ಯಾವ ದರದ ವಿಭಾಗದಲ್ಲಿ ಇರಿಸಬೇಕು ಎಂಬುದನ್ನು ಉತ್ಪಾದಕರಿಗೆ ಬಿಡಲಾಗಿದೆ ಎಂದು ತಿಳಿಸಲಾಗಿದೆ.

ಪರಿಷ್ಕೃತ ದರಗಳಲ್ಲಿ ಜನಪ್ರಿಯ ಇಂಡಿಯನ್ ಮೇಡ್ ಲಿಕರ್ (IML) ಬ್ರ್ಯಾಂಡ್‌ಗಳು ಮತ್ತು ಬಿಯರ್ ಬ್ರ್ಯಾಂಡ್‌ಗಳ ದರಗಳನ್ನು ಒಳಗೊಂಡಿದ್ದು, ಅವುಗಳ ಪ್ಯಾಕ್ ಗಾತ್ರ, ಮದ್ಯಾಂಶದ ಪ್ರಮಾಣ ಮತ್ತು ಸ್ಲ್ಯಾಬ್ ವ್ಯವಸ್ಥೆಯ ಆಧಾರದ ಮೇಲೆ ದರಗಳು ಬದಲಾಗಲಿವೆ.

ನೂತನ ಸುಂಕ ನೀತಿಯಿಂದ ಕಡಿಮೆ ಬೆಲೆಯ ಮದ್ಯಗಳ ದರ ಅತಿಹೆಚ್ಚು ಏರಿಕೆಯಾಗಿದೆ. ಈ ಮೊದಲು 180 ಎಂ.ಎಲ್‌ನ (ಕ್ವಾರ್ಟರ್) ವಿಸ್ಕಿಯ ಟೆಟ್ರಾಪ್ಯಾಕ್‌ನ ಬೆಲೆ 70 ರೂ. ಇದ್ದದ್ದು, 95-98 ರೂ.ರವರೆಗೆ ಏರಿಕೆಯಾಗಿದೆ. ಅದೇ ರೀತಿ 135 ರೂ.ಗೆ ಸಿಗುತ್ತಿದ್ದ ಕ್ವಾರ್ಟರ್ ವಿಸ್ಕಿಗೆ ಈಗ 160 ರೂ. ನೀಡಬೇಕಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ; ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ?

ಬಿಯ‌ರ್ ಬೆಲೆ ಇಳಿಕೆ

ಆಲ್ಕೋಹಾಲ್ ಪ್ರಮಾಣ ಆಧರಿಸಿ ಅಬಕಾರಿ ಸುಂಕ ವಿಧಿಸುವ ನೀತಿಯ ಕಾರಣಕ್ಕೆ ಬಿಯ‌ರ್ ಬೆಲೆಯಲ್ಲಿ ಇಳಿಕೆಯಾಗಿದೆ. ಆಲ್ಕೋಹಾಲ್ ಪ್ರಮಾಣ ಶೇ 5ರಿಂದ ಶೇ 8ರಷ್ಟು ಇರುವ ಬಿಯರ್‌ಗಳ ಬೆಲೆಯಲ್ಲಿ 25ರಿಂದ 80 ರೂ.ರವರೆಗೂ ಇಳಿಕೆಯಾಗಿದೆ. ಆದರೆ ಆಲ್ಕೋಹಾಲ್ ಪ್ರಮಾಣ ಶೇ 10-15ರಷ್ಟು ಇರುವ ಸ್ಟ್ರಾಂಗ್ ಬಿಯರ್ ಬೆಲೆಯಲ್ಲಿ 20 ರೂ.ವರೆಗೆ ಏರಿಕೆಯಾಗಿದೆ. ಬಿಯರ್ ಅಲ್ಲದ, ಆಲ್ಕೋಹಾಲ್‌ಭರಿತ ಪೇಯಗಳ ಬೆಲೆಯಲ್ಲಿಯೂ ₹20ವರೆಗೆ ಇಳಿಕೆಯಾಗಿದೆ.

ವಿವಿಧ ಬ್ರ್ಯಾಂಡ್‌ ಮದ್ಯ ಪರಿಷ್ಕೃತ ದರ ಪಟ್ಟಿ

liquor price hike

liquor price hike 2

liquor price hike 3