ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಜಾಗೃತಿ ಸಭೆಗೆ ಗೈರಾಗಿದ್ದ ಕೆಪಿಸಿಸಿ ಪದಾಧಿಕಾರಿಗಳ (KPCC Office Bearers) ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶಿಸ್ತುಕ್ರಮ ಕೈಗೊಂಡಿದ್ದಾರೆ. ಮೂವರು ಉಪಾಧ್ಯಕ್ಷರು ಹಾಗೂ 29 ಪ್ರಧಾನ ಕಾರ್ಯದರ್ಶಿಗಳನ್ನು ವಜಾ ಮಾಡಿದ್ದು, ನಿಕೇತ್ ರಾಜ್ ಮೌರ್ಯ, ಭಾವನಾ ರಾಮಣ್ಣ ಸೇರಿ ಹಲವು ಪ್ರಮುಖರನ್ನು ಕೆಪಿಸಿಸಿ ಪದಾಧಿಕಾರಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.
ಮೇ 24 ರಂದು ಬೆಂಗಳೂರಿನ ಹೊರವಲಯದಲ್ಲಿ ಎಸ್‌ಐಆರ್ ಪ್ರಕ್ರಿಯೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಪಕ್ಷ ಸಂಘಟನೆ ಕುರಿತಂತೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.ಈ ಸಭೆಗೆ ಪದಾಧಿಕಾರಿಗಳು ಗೈರು ಹಾಜರಾಗಿದ್ದನ್ನು ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಅದರಂತೆ ಡಿಕೆ ಶಿವಕುಮಾರ್ ಅವರು ಈ ಕ್ರಮ ಕೈಗೊಂಡಿದ್ದಾರೆ.
ಕೆಪಿಸಿಸಿ ಹುದ್ದೆಯಿಂದ ಬಿಡುಗಡೆಯಾದ ಉಪಾಧ್ಯಕ್ಷರು
- ಕೆ. ಶಿವಮೂರ್ತಿ-ದಾವಣಗೆರೆ
- ಬಾಬುರಾವ್ ಜಾಗೀರ್ದಾರ್-ಕಲಬುರಗಿ
- ಎಂ.ಸಿ. ವೇಣುಗೋಪಾಲ್-ಬೆಂಗಳೂರು
ಕೆಪಿಸಿಸಿ ಹುದ್ದೆಯಿಂದ ಬಿಡುಗಡೆಯಾದ ಪ್ರಧಾನ ಕಾರ್ಯದರ್ಶಿಗಳು
- ಎನ್.ಐ. ಕೋಡಳ್ಳಿ-ಬೆಳಗಾವಿ
- ಭಾವನಾ ರಾಮಣ್ಣ-ಬೆಂಗಳೂರು
- ಕೆ.ಸಿ. ಪ್ರಭಾಕರ್ ರೆಡ್ಡಿ- ಬೆಂಗಳೂರು
- ತಿಬ್ಬೇಗೌಡ- ಬೆಂಗಳೂರು
- ಜುಲ್ಫಿಕರ್ ಅಹಮದ್- ಬೆಂಗಳೂರು
- ಶಂಕರ್ ದೊಡ್ಡಿ- ಬೀದರ್
- ರೇಖಾ ಹುಲಿಯಪ್ಪ- ಚಿಕ್ಕಮಗಳೂರು
- ಎಚ್.ಎ. ಷಣ್ಮುಖಪ್ಪ ಚಿತ್ರದುರ್ಗ
- ಎಂ. ರಾಮಪ್ಪ- ಮೈಸೂರು
- ವಡ್ನಾಲ್ ಜಗದೀಶ್- ದಾವಣಗೆರೆ
- ಷಣ್ಮುಖಪ್ಪ ಶಿವಳ್ಳಿ- ಧಾರವಾಡ
- ಮಲ್ಲಿಕಾರ್ಜುನ್ ಅಕ್ಕಿ- ಧಾರವಾಡ
- ಸ್ವಾತಿ ಮಳಗಿ ಹುಬ್ಬಳ್ಳಿ
- ಅಲ್ತಾಫ್ ನವಾಜ್ ಕಿತ್ತೂರು- ಹುಬ್ಬಳ್ಳಿ
- ನಾಗೇಶ್ವರ ರಾವ್- ಕಲಬುರಗಿ
- ರಮೇಶ್ ಮರಗೋಳ್- ಕಲಬುರಗಿ
- ಚಂದ್ರಕಲಾ ಪ್ರಸನ್ನ- ಕೊಡಗು
- ಸಿ.ಆರ್. ಮನೋಹರ್- ಕೋಲಾರ
- ಹೆಚ್.ಆರ್. ಶ್ರೀನಾಥ್- ಕೊಪ್ಪಳ
- ಹೆಚ್. ತ್ಯಾಗರಾಜ್- ಮಂಡ್ಯ
- ಎಲ್. ಪದ್ಮನಾಭ- ಬೆಂಗಳೂರು
- ನಿಕೇತ್ ರಾಜ್ ಮೌರ್ಯ- ತುಮಕೂರು
- ಸಿ.ಬಿ. ಶಶಿಧರ್- ತುಮಕೂರು
- ವೆಂಕಟೇಶ್ ಹೆಗಡೆ ಹೊಸಬಾಳೆ- ಉತ್ತರ ಕನ್ನಡ
- ವಿ.ವೈ. ಘೋರ್ಪಡೆ- ಬಳ್ಳಾರಿ
- ಮಕ್ಬುಲ್ ಬಾಗವಾನ್- ವಿಜಯಪುರ
- ಮೊಹಮ್ಮದ್ ಇಸ್ಮಾಯಿಲ್ ತಮಟಗಾರ- ಹುಬ್ಬಳ್ಳಿ
- ಬನ್ನಿಕೋಡ್- ಹಾವೇರಿ
- ಸಂಜಯ್ ಜಾಗೀರ್ದಾರ್- ಕಲಬುರಗಿ