ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nikhil Kumaraswamy: ಕಸ ಗುಡಿಸುವ ವಾಹನಗಳ ಬಾಡಿಗೆ; ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ವಾ? ಎಂದು ನಿಖಿಲ್‌ ವಾಗ್ದಾಳಿ

Bengaluru's road-sweeping machine: ಹುಬ್ಬಳ್ಳಿ ಧಾರವಾಡದಲ್ಲಿ ಇದೇ ಸರ್ಕಾರ ಕಸ ಗುಡಿಸುವ ಮಷಿನ್‌ನನ್ನು 01 ಕೋಟಿ 45 ಲಕ್ಷ ರೂ.ಗೆ ಎರಡು ಯಂತ್ರಗಳನ್ನು ಖರೀದಿ ಮಾಡಿದ್ದರು. ಯಾಕೆ ಬೇಕಾಬಿಟ್ಟಿಯಾಗಿ 613 ಕೋಟಿ ರೂ. ಖರ್ಚು ಮಾಡಿ ಬಾಡಿಗೆ ತಗೋತೀರಾ? ಸ್ವಂತಕ್ಕೆ ಖರೀದಿ ಮಾಡಬಹುದೆಂದು ವರದಿ ನೀಡಿದೆ. ಇದಕ್ಕೆ ಉತ್ತರ ಕೊಡಿ. ಲೋಕಯುಕ್ತಗೆ ಯಾಕೆ ಹೋಗಬೇಕು? ನಿಮಗೆ ಪರಿಜ್ಞಾನ ಇಲ್ವಾ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಧ್ಯಮಗಳ ಜತೆ ಮಾತನಾಡಿದರು.

ಬೆಂಗಳೂರು, ನ.20: ಉಪಮುಖ್ಯಮಂತ್ರಿಗಳೇ, ಕಸ ಗುಡಿಸುವ ಯಂತ್ರಗಳ ಬಗ್ಗೆ ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಮಾಡಿದ್ದೇನೆ. ನಿಮಗೆ ಪ್ರಶ್ನೆ ಮಾಡಿದ್ದಲ್ಲ, ನೀವು ಕುಳಿತಿರುವ ಹುದ್ದೆ ಬೆಂಗಳೂರು ಉಸ್ತುವಾರಿಯವರಿಗೆ ಕೇಳಿದ್ದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿಕೆಗೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಟಾಂಗ್ ನೀಡಿದ್ದಾರೆ. ಹುಬ್ಬಳ್ಳಿ ಧಾರವಾಡದಲ್ಲಿ ಇದೇ ಸರ್ಕಾರ, ಎರಡು ಕಸ ಗುಡಿಸುವ ವಾಹನಗಳನ್ನು 1.45 ಕೋಟಿ ರೂ.ಗಳಿಗೆ ಖರೀದಿ ಮಾಡಿತ್ತು. ಈಗ ಯಾಕೆ ಬೇಕಾಬಿಟ್ಟಿಯಾಗಿ 613 ಕೋಟಿ ರೂ. ಖರ್ಚು ಮಾಡಿ ಬಾಡಿಗೆ ಯಂತ್ರ ತಗೋತೀರಾ? ಎಂದು ಪ್ರಶ್ನಿಸಿದ್ದಾರೆ.

ಕಸ ಗುಡಿಸುವ ವಾಹನಗಳನ್ನು ಸ್ವಂತಕ್ಕೆ ಖರೀದಿ ಮಾಡಬಹುದೆಂದು ವರದಿ ಇದೆ. ಇದಕ್ಕೆ ಡಿಸಿಎಂ ಉತ್ತರ ಕೊಡಬೇಕು. ಲೋಕಾಯುಕ್ತಾಗೆ ಯಾಕೆ ಹೋಗಬೇಕು? ನಿಮಗೆ ಪರಿಜ್ಞಾನ ಇಲ್ವಾ? ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ 2028ರ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಉಳಿಯೋದಿಲ್ಲ. ಬಿಹಾರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಯನ್ನು ಒಪ್ಪಿಕೊಂಡಿದ್ದಾರೆ. ಇದು ಕಾಂಗ್ರೆಸ್ ಪತನದ ದಿನಗಳು ಅಂತ ಜನರು ಸಂದೇಶ ಕೊಟ್ಟಿದ್ದಾರೆ. ಈ‌ ಸಂದೇಶ ಕಾಂಗ್ರೆಸ್ ನಾಯಕರಿಗೆ ‌ನಿದ್ದೆಗೆಡಿಸಿದೆ ಎಂದು ಹೇಳಿದರು.

ಒಂದಂಕಿಗೆ ಕಾಂಗ್ರೆಸ್ ಬಂದು ನಿಂತಿದೆ

ಜೆಡಿಎಸ್‌ ಪಕ್ಷದ ಬಗ್ಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರು ಮಾತಾಡಿದ್ರು. 18 ಇದೆ ಒಂದಂಕಿಗೆ ಬಂದು ಜೆಡಿಎಸ್ ನಿಲ್ಲುತ್ತದೆ ಎಂದು ಲೇವಡಿ ಮಾಡಿದ್ರು. ಈಗ ಒಂದಂಕಿಗೆ ಕಾಂಗ್ರೆಸ್ ಬಂದು ನಿಂತಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು. ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಉಳಿಯೋದಿಲ್ಲ. ಈಗಲಾದರೂ ಕಾಂಗ್ರೆಸ್‌ನವರು ಎಚ್ಚೆತ್ತುಕೊಳ್ಳಬೇಕು. ಇನ್ನೊಂದು ಪಕ್ಷವನ್ನು ಲಘುವಾಗಿ ತೆಗೊಳೋದು, ಅವಹೇಳನ ಮಾಡೋದು ಬಿಡಬೇಕು. ಜನತೆ ಅಧಿಕಾರ ಕೊಟ್ಟಾಗ ಕಾಂಗ್ರೆಸ್ ಅವರು ತಗ್ಗಿ ಬಗ್ಗಿ ಅಧಿಕಾರ ನಡೆಸಬೇಕು ವಾಗ್ದಾಳಿ ನಡೆಸಿದರು.

ಸರ್ಕಾರಕ್ಕೆ 2.5 ವರ್ಷ ತುಂಬಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ಕೇವಲ ಜಾಹೀರಾತುಗಳಿಗೆ ಸೀಮಿತವಾಗಿರುವ ಸರ್ಕಾರ. ರಾಜ್ಯದ ಜನರ ತೆರಿಗೆ ಹಣವನ್ನು ಉಪಯೋಗ ಮಾಡಿಕೊಳ್ತಿದ್ದಾರೆ. ವೈಫಲ್ಯಗಳು ಮತ್ತು ಭ್ರಷ್ಟಾಚಾರಕ್ಕೆ ಉತ್ತರ ಕೊಡಬೇಕು. ಅಭಿವೃದ್ಧಿ ಅನ್ನೋದು ರಾಜ್ಯದಲ್ಲಿ ಶೂನ್ಯವಾಗಿದೆ ಎಂದು ಟೀಕಿಸಿದರು.

ದೇವೇಗೌಡರು ಹಾಗೂ ಕುಮಾರಣ್ಣನ ಸಾಧನೆ ಎಕ್ಸಿಬಿಷನ್ ಮಾಡುತ್ತೇವೆ

ಮಾಜಿ ಪ್ರಧಾನಿ ದೇವೇಗೌಡ ಅವರ ಹೋರಾಟದ ಪ್ರತಿಫಲವಾಗಿ ಪ್ರಾದೇಶಿಕ ಪಕ್ಷ ಸ್ಥಾಪನೆ ಆಯ್ತು. ಚುನಾವಣೆಗಳಲ್ಲಿ ಸೋಲು- ಗೆಲವು ನೊಡಿರುವ ಪಕ್ಷ. ಸೋಲಿನಿಂದ ನಮ್ಮ ನಾಯಕರು, ಕಾರ್ಯಕರ್ತರು ಕುಗ್ಗಿಲ್ಲ. ಬದಲಾಗಿ ಪಕ್ಷವನ್ನು ಬಲವಾಗಿ ಕಟ್ಟುತ್ತೇವೆ ಎಂಬ ಆತ್ಮಸ್ಥೈರ್ಯ ಇದೆ ಎಂದು ಹೇಳಿದರು.

ಇದೇ ನ. 21 ಮತ್ತು 22 ರಂದು ಜೆಡಿಎಸ್ ಪಕ್ಷದ ಬೆಳ್ಳಿಹಬ್ಬ ಕಾರ್ಯಕ್ರಮ ಇದೆ. ನಾಳೆ ಧ್ವಜಾರೋಹಣ ಇದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಹಾಗೂ ಕುಮಾರಣ್ಣ ಮತ್ತು ಬೇರೆ ಬೇರೆ ರಾಜ್ಯದ ಅಧ್ಯಕ್ಷರು ಬರುತ್ತಾರೆ. ನ.21ರಂದು ಶಾಸಕರ ಸಭೆ ಮಾಡಲಾಗುತ್ತದೆ.‌ ನ.22ರಂದು ರಜತ ಮಹೋತ್ಸವ ಇದೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | Rourkela Steel Plant: 9,000 ಕೋಟಿ ವೆಚ್ಚದಲ್ಲಿ ರೂರ್ಕೆಲಾ ಉಕ್ಕು ಸ್ಥಾವರದ ಆಧುನೀಕರಣ, ವಿಸ್ತರಣೆಗೆ ಎಚ್‌ಡಿಕೆ ಚಾಲನೆ

ತಾಲೂಕು, ಜಿಲ್ಲಾ ಮಟ್ಟದಲ್ಲೂ ವರ್ಷವಿಡೀ ಆಚರಣೆ ಮಾಡಬೇಕು

ಪ್ರಾದೇಶಿಕ ಪಕ್ಷ ಎರಡು ರಾಷ್ಟ್ರೀಯ ಪಕ್ಷದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ದೇವೇಗೌಡ ಅವರ ವೈಯಕ್ತಿಕ ಬದುಕು, ರಾಜಕೀಯ ನಡೆಯನ್ನು ನಾಳೆ ಎಕ್ಸಿಬಿಷನ್ ಮೂಲಕ ತೋರಿಸಲಾಗುವುದು. ತಾಲೂಕು, ಜಿಲ್ಲಾ ಮಟ್ಟದಲ್ಲೂ ವರ್ಷ ಇಡೀ ಆಚರಣೆ ಮಾಡಬೇಕೆಂಬ ಆದೇಶವಾಗಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.