ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದುಬೈಯಲ್ಲಿ ಮನೆ ಮಾಡುವವರಿಗೊಂದು ಸಿಹಿ ಸುದ್ದಿ; ಮನೆ ಖರೀದಿಗೆ ಶೇ. 100ರಷ್ಟು ಸಾಲ ಕೊಡಲು ಒಂದಾದ ಪರ್ವ-ಗೋಲ್‌ ಸಂಸ್ಥೆಗಳು

ದುಬೈಯಲ್ಲಿ ಮನೆ ಖರೀದಿಸಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಶೇ. 100ರಷ್ಟು ಸಾಲ ಕೊಡಲು ಕರ್ನಾಟಕದ ಎರಡು ಕಂಪನಿಗಳು ಮುಂದೆ ಬಂದಿವೆ. ದುಬೈನಲ್ಲಿ ಕನ್ನಡಿಗರಿಗಾಗಿ ಕನ್ನಡಿಗರೇ ಕಟ್ಟಿರುವ ಪರ್ವ ರಿಯಲ್ ಎಸ್ಟೇಟ್ ಕಂಪನಿ ಹಾಗೂ ಬೆಂಗಳೂರಿನ ಗೋಲ್ ಕಾರ್ಪೋರೇಷನ್ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ಮನೆ ಖರೀದಿಗೆ ಶೇ. 100ರಷ್ಟು ಸಾಲ ಕೊಡಲು ಒಂದಾದ ಪರ್ವ-ಗೋಲ್‌ ಸಂಸ್ಥೆ

-

Ramesh B Ramesh B Sep 4, 2025 7:38 PM

ಬೆಂಗಳೂರು: ದುಬೈಯಲ್ಲಿ ಮನೆ ಖರೀದಿಸುವವರಿಗೆ ಶೇ. 100ರಷ್ಟು ಸಾಲ ಕೊಡಲು ಕನ್ನಡದ ಎರಡು ಕಂಪನಿಗಳು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ದುಬೈನಲ್ಲಿ ಕನ್ನಡಿಗರಿಗಾಗಿ ಕನ್ನಡಿಗರೇ ಕಟ್ಟಿರುವ ಪರ್ವ ರಿಯಲ್ ಎಸ್ಟೇಟ್ ಕಂಪನಿ ಹಾಗೂ ಬೆಂಗಳೂರಿನ ಗೋಲ್‌ ಕಾರ್ಪೋರೇಷನ್ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ಪರ್ವ ರಿಯಲ್ ಎಸ್ಟೇಟ್ ಮೂಲಕ ದುಬೈಯಲ್ಲಿ ಮನೆ ಖರೀದಿಸಲು ಮುಂದಾಗುವವರಿಗೆ ಸಾಲ ಸೌಲಭ್ಯವನ್ನು ಗೋಲ್ ಕಾರ್ಪೋರೇಷನ್ ಒದಗಿಸುವುದು ಈ ಒಪ್ಪಂದದ ಪ್ರಮುಖ ಅಂಶ. ದುಬೈನಲ್ಲಿ ಯಾವುದೇ ಆಸ್ತಿ ಖರೀದಿಗೆ ಶೇ.100ರಷ್ಟು ಸಾಲ ಸೌಲಭ್ಯ ಒದಗಿಸುವುದು ಒಪ್ಪಂದದ ಎರಡನೇ ಪ್ರಮು ಖಾಂಶ ಎಂದು ಪರ್ವ ರಿಯಲ್ ಎಸ್ಟೇಟ್ ಸಹ ಸಂಸ್ಥಾಪಕ ಶಶಿಧರ್ ನಾಗರಾಜಪ್ಪ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Amit Shah: ಅಗತ್ಯ ಬಿದ್ದರೆ ಧರ್ಮಸ್ಥಳ ಕೇಸ್‌ ಎನ್‌ಐಎಗೆ: ಸಂತರ ನಿಯೋಗಕ್ಕೆ ಅಮಿತ್‌ ಶಾ ಭರವಸೆ

ನಿರ್ಮಾಣ ಹಂತದಲ್ಲಿರುವ ಫ್ಲಾಟ್, ವಿಲ್ಲಾಗಳ ಖರೀದಿಗೆ ಶೇ. 40ರಷ್ಟು ಹಣವನ್ನು ಮುಂಗಡವಾಗಿ ಕಟ್ಟಬೇಕಾಗುತ್ತದೆ. ಈ ಸಂಪೂರ್ಣ ಮುಂಗಡ ಹಣವನ್ನು ಗೋಲ್‌ ಕಾರ್ಪೋರೇಷನ್ ಒದಗಿಸಲಿದೆ. ಅಲ್ಲದೇ, ನಿರ್ಮಾಣ ಪೂರ್ಣಗೊಂಡ ಮೇಲೆ ಉಳಿದ ಶೇ. 60ರಷ್ಟು ಹಣವನ್ನೂ ಸಾಲದ ರೂಪದಲ್ಲಿ ಗೋಲ್ ಕಾರ್ಪೋರೇಷನ್ ಒದಗಿಸಲಿದೆ. ಅಂದರೆ ಆಸ್ತಿಯ ಸಂಪೂರ್ಣ ಮೌಲ್ಯವನ್ನು ಸಾಲದ ರೂಪದಲ್ಲಿಯೇ ದುಬೈನಲ್ಲಿ ಮನೆ ಖರೀದಿಸಬಹುದು. ಇದರೊಂದಿಗೆ ನಿರ್ಮಾಣ ಪೂರ್ಣಗೊಂಡಿರುವ ಮನೆಗಳ ಖರೀದಿಗೆ ಶೇ.100ರಷ್ಟು ಸಾಲವನ್ನೂ ಗೋಲ್ ಕಾರ್ಪೋರೇಷನ್ ಒದಗಿಸಲಿದೆ. ದುಬೈನಲ್ಲಿ ಕನ್ನಡಿಗರಿಗೆ ಇಂತಹ ಸಾಲ ಸೌಲಭ್ಯವನ್ನು ಗೋಲ್ ಕಾರ್ಪೋರೇಷನ್ ಪರ್ವ ರಿಯಲ್ ಎಸ್ಟೇಟ್ ಮೂಲಕ ಮಾತ್ರ ಒದಗಿಸಲಿದೆ ಎಂದೂ ಶಶಿಧ‌ರ್ ನಾಗರಾಜಪ್ಪ ವಿವರಿಸಿದ್ದಾರೆ.

Parva 1

ಗೋಲ್ ಕಾರ್ಪೋರೇಷನ್ 15 ವರ್ಷಗಳ ಹಿಂದೆ ಸ್ಥಾಪನೆಯಾಗಿ ಸಕ್ರಿಯವಾಗಿ ಹಣಕಾಸು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ʼʼನನಗೆ ಈ ಕ್ಷೇತ್ರದಲ್ಲಿ 20 ವರ್ಷದ ಅನುಭವ ಇದೆ. ಗೋಲ್ ಕಾರ್ಪೋರೇಷನ್ ಭಾರತದ 68 ಬ್ಯಾಂ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡು ಹಣಕಾಸು ಸೇವೆಯಲ್ಲಿ ತೊಡಗಿದೆ. ಈಗ ಪರ್ವ ಜತೆ ಮಾಡಿಕೊಂಡಿರುವ ಒಪ್ಪಂದ ಸಂಪೂರ್ಣ ಗ್ರಾಹಕ ಸ್ನೇಹಿಯಾಗಿದೆ. ಬ್ಯಾಂಕುಗಳ ಹಣ ಹಾಕಿ, ಗ್ರಾಹಕ ಲಾಭ ಮಾಡಿಕೊಳ್ಳುವ ಯೋಜನೆಯಾಗಿದೆ. ಬ್ಯಾಂಕಿನ ಬಡ್ಡಿಯನ್ನು ದುಬೈಯ ಬಾಡಿಗೆ ಆದಾಯ ತುಂಬಿಕೊಡಲಿದೆ. ರಿಯಲ್ ಎಸ್ಟೇಟ್‌ನ ವಾರ್ಷಿಕ ದರ ಏರಿಕೆ ಲಾಭ ಸಂಪೂರ್ಣವಾಗಿ ಹೂಡಿಕೆದಾರರಿಗೆ ದೊರೆಯಲಿದೆ. ಸಾಲ ತುಂಬುವ ಶಕ್ತಿ ತೋರಿಸಿ, ಬ್ಯಾಂಕಿನ ಹಣ ಹಾಕಿ ದುಬೈನಲ್ಲಿ ಆಸ್ತಿ ಮಾಡಬಹುದುʼʼ ಎಂದು ಗೋಲ್ ಕಾರ್ಪೋರೇಷನ್‌ ಸಂಸ್ಥಾಪಕ ಅಧ್ಯಕ್ಷ ಎ.ಆರ್. ನಾಯಕ್ ವಿವರಿಸಿದರು.

Parva 2

ಬಡ್ಡಿಯ ಪ್ರಮಾಣವೂ ಕಡಿಮೆ

ಭಾರತದಲ್ಲಿ ಮನೆ ಸಾಲದ ಮೇಲಿನ ಬಡ್ಡಿ ಶೇ. 7ರಿಂದ ಶೇ. 9ರವರೆಗೂ ಇದೆ. ದುಬೈನಲ್ಲಿ ಮನೆ ಖರೀದಿಸುವ ಸಾಲಕ್ಕೆ ಗೋಲ್ ಕಾರ್ಪೋರೇಷನ್ ಶೇ. 5ರಿಂದ ಶೇ. 6ರಷ್ಟು ಬಡ್ಡಿ ವಿಧಿಸಲಿದೆ. ಭಾರತದಲ್ಲಿ ಮನೆಯ ಬಾಡಿಗೆ ಶೇ. 5ರಷ್ಟು ಇದ್ದರೆ, ದುಬೈನಲ್ಲಿ ಶೇ. 8ರಷ್ಟಿದೆ. ಹೀಗಾಗಿ ಜೇಬಿನಿಂದ ಒಂದೂ ಪೈಸೆ ಖರ್ಚು ಮಾಡದೇ ನಮ್ಮ ಕೆಲಸ, ಆದಾಯದ ಗ್ಯಾರಂಟಿ ಮೂಲಕ ದುಬೈನಲ್ಲಿ ಆಸ್ತಿ ಕೊಳ್ಳುವ ಅವಕಾಶವನ್ನು ಪರ್ವ ರಿಯಲ್ ಎಸ್ಟೇಟ್ ಹಾಗೂ ಗೋಲ್ ಕಾರ್ಪೋರೇಷನ್ ಒದಗಿಸಲು ಕೆಲಸ ಆರಂಭಿಸಿವೆ ಎರಡೂ ಕಂಪನಿಗಳು.

Parva 3

image

ಕನ್ನಡಿಗರಿಗಾಗಿ ಕನ್ನಡಿಗರೇ ಕಟ್ಟಿರುವ ಪರ್ವ ಗ್ರೂಪ್‌ನೊಂದಿಗೆ ಮತ್ತೊಂದು ಕನ್ನಡಿಗರ ಕಂಪನಿ ಗೋಲ್ ಗೋಲ್ ಕಾರ್ಪೋರೇಷನ್ ಕೈ ಜೋಡಿಸಿರೋದು ನಮ್ಮ ಶಕ್ತಿ ಹೆಚ್ಚಿಸಿದೆ. ಬೆಂಗಳೂರು ಬೆಲೆಯಲ್ಲೇ ದುಬೈನಲ್ಲಿ ಮನೆ ಕೊಳ್ಳಬಹುದು ಎಂಬ ಘೋಷವಾಕ್ಯದೊಂದಿಗೆ ಹೊರಟಿರುವ ಪರ್ವ ರಿಯಲ್ ಎಸ್ಟೇಟ್ ಜತೆ ಗೋಲ್ ಕಾರ್ಪೋರೇಷನ್ ಸೇರಿಕೊಂಡಿದೆ. ಇದರಿಂದ ಕನ್ನಡಿಗರು ಸ್ವಂತ ದುಡ್ಡಿಲ್ಲದೆಯೂ ದುಬೈನಲ್ಲಿ ಮನೆ ಕೊಳ್ಳಬಹುದು. ಶೇ. 100ರಷ್ಟು ಸಾಲದ ಹಣದಲ್ಲೇ ದುಬೈನಲ್ಲಿ ಮನೆ ಮಾಲೀಕರಾಗಬಹುದು.

- ನಿಲೇಶ್, ಸಂಸ್ಥಾಪಕರು, ಪರ್ವ ಗ್ರೂಪ್ಸ್, ದುಬೈ