Eid Jewel Trend 2025: ಈದ್ ಸೀಸನ್ನಲ್ಲಿ ಬಂತು ಜಗಮಗಿಸುವ ಇಯರಿಂಗ್ಸ್
Eid-e-Milad: ಈದ್ ಮಿಲಾದ್ ಹಬ್ಬದ ಸಂಭ್ರಮಕ್ಕೆ ಸಾಥ್ ನೀಡುವ ಜಗಮಗಿಸುವ ಇಯರಿಂಗ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಈ ಸಾಲಿನಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ? ಎಂಬುದರ ಬಗ್ಗೆ ಜ್ಯುವೆಲ್ ಡಿಸೈನರ್ಗಳು ಇಲ್ಲಿ ತಿಳಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್ -


ಈದ್ ಟ್ರೆಂಡ್ನಲ್ಲಿರುವ ಇಯರಿಂಗ್ಸ್
ಈದ್ ಮಿಲಾದ್ ಹಬ್ಬದ ಸಂಭ್ರಮಕ್ಕೆ ಸಾಥ್ ನೀಡುವ ಜಗಮಗಿಸುವ ಇಯರಿಂಗ್ಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಇದೀಗ ಟ್ರೆಂಡಿಯಾಗಿವೆ. ನೋಡಲು ಆಕರ್ಷಕವಾಗಿ ಕಾಣುವ ನಾನಾ ವಿನ್ಯಾಸದ ಈ ಬಿಗ್ ಇಯರಿಂಗ್ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಫೆಸ್ಟೀವ್ ಸೀಸನ್ನಲ್ಲಿ ಟ್ರೆಂಡ್ನಲ್ಲಿರುವ ಇಯರಿಂಗ್ಗಳಲ್ಲಿ ಇದೀಗ ಬಿಗ್ ಚಾಂದ್ಬಾಲಿ, ಶ್ಯಾಂಡೆಲಿಯರ್ ಡ್ಯಾಂಗ್ಲಿಂಗ್ಸ್, ಕುಂದನ್ ಹ್ಯಾಂಗಿಂಗ್ಸ್, ಟರ್ಕಿಶ್ ಇಯರಿಂಗ್ಸ್, ಬಾಲಿವುಡ್ ಸ್ಟೈಲ್ ಕುಂದನ್ ಇಯರಿಂಗ್ಸ್ ಸೇರಿವೆ. ಲೆಕ್ಕವಿಲ್ಲದಷ್ಟು ಡಿಸೈನ್ನಲ್ಲಿ ಇವು ಬಿಡುಗಡೆಗೊಂಡಿದ್ದು, ಫ್ಯಾನ್ಸಿ ಶಾಪ್ಗಳಲ್ಲಿ ಮಾತ್ರವಲ್ಲ, ಆನ್ಲೈನ್ನಲ್ಲೂ ದೊರೆಯುತ್ತಿವೆ.

ಬಿಗ್ ಚಾಂದಬಾಲಿ
ಬಿಗ್ ಮಲ್ಟಿ ಲೇಯರ್ ಲುಕ್ ಇರುವಂತಹ ಚಾಂದಬಾಲಿ ಇದೀಗ ಹೆಚ್ಚು ಟ್ರೆಂಡ್ನಲ್ಲಿವೆ. ಒಂದರ ಬದಲು ಎರಡು ಚಂದ್ರನ ಆಕಾರದೊಂದಿಗೆ ಸಾಲು ಸಾಲು ಮುತ್ತಿನ ಲೈನ್ಗಳಿಂದ ಸಿಂಗಾರಗೊಂಡಿರುವಂತವು ಬಂದಿವೆ.

ಮಿನುಗುವ ಶ್ಯಾಂಡೆಲಿಯರ್ ಡ್ಯಾಂಗ್ಲಿಂಗ್ಸ್
ಭುಜವನ್ನು ಮುಟ್ಟುವ ಉದ್ದನೆಯ ಶ್ಯಾಂಡೆಲಿಯರ್ ಇಯರಿಂಗ್ಗಳಲ್ಲಿ ಇದೀಗ ಮುತ್ತು, ಬೀಡ್ಸ್ ಹಾಗೂ ನಾನಾ ವರ್ಣದ ಮಣಿಗಳಿರುವ ಗ್ರ್ಯಾಂಡ್ ಲುಕ್ ನೀಡುವ ಡಿಸೈನ್ನವು ಈ ಹಬ್ಬದ ಸೀಸನ್ನಲ್ಲಿ ಚಾಲ್ತಿಯಲ್ಲಿವೆ.

ಕನ್ನಡಿಗಳ ಕುಂದನ್ ಹ್ಯಾಂಗಿಂಗ್ಸ್
ಚಿಕ್ಕ ಚಿಕ್ಕ ಕನ್ನಡಿಯಂತೆ ಕಾಣುವ ಕುಂದನ್ ಡಿಸೈನ್ನ ದೊಡ್ಡದಾದ ಕಿವಿಯೊಲೆ ಹಾಗೂ ಅದಕ್ಕೆ ಅಟ್ಯಾಚ್ ಆದಂತಿರುವ ಹ್ಯಾಂಗಿಂಗ್ಸ್ ಇದೀಗ ಮನಮೋಹಕ ವಿನ್ಯಾಸದಲ್ಲಿ ಎಂಟ್ರಿ ನೀಡಿವೆ.

ಗೋಲ್ಡ್ ಕೋಟೆಡ್ ಇಯರಿಂಗ್ಸ್
ನೋಡಲು ವಿಭಿನ್ನ ವಿನ್ಯಾಸ ಎಂದೆನಿಸುವ ಟರ್ಕಿಶ್ ವಿನ್ಯಾಸದ ಇಯರಿಂಗ್ಗಳು ಕಂಪ್ಲೀಟ್ ಗೋಲ್ಡ್ ಕೋಟೆಡ್ ಹಾಗೂ ಇಮಿಟೇಷನ್ ಆಭರಣಗಳ ಕೆಟಗರಿಯಲ್ಲಿ ಸಿಗುತ್ತವೆ. ಇವು ಗೋಲ್ಡನ್ ಲುಕ್ಗೆ ಸಹಕಾರಿ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.