ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ; ಜುಲೈ ತಿಂಗಳಲ್ಲಿ ಕರೆಂಟ್‌ ಬಿಲ್‌ ಬರೋದಿಲ್ಲ

BESCOM: ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮನೆ-ಮನೆ ಮಾಹಿತಿ ಪರಿಶೀಲನೆಗೆ ಮೀಟರ್ ರೀಡರ್‌ಗಳು ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಗೃಹ ಬಳಕೆ ಗ್ರಾಹಕರಿಗೆ ಭೌತಿಕ ಬಿಲ್ ನೀಡುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಬೆಂಗಳೂರು, ಜು.28: ಗೃಹ ಜ್ಯೋತಿ ಯೋಜನೆ (Gruha Jyothi Scheme) ಫಲಾನುಭವಿಗಳ ಮನೆ-ಮನೆ ಮಾಹಿತಿ ಪರಿಶೀಲನೆಗೆ ಮೀಟರ್ ರೀಡರ್‌ಗಳು ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಗೃಹ ಬಳಕೆ ಗ್ರಾಹಕರಿಗೆ ಭೌತಿಕ ಬಿಲ್ ನೀಡುವುದಿಲ್ಲ ಎಂದು ಬೆಸ್ಕಾಂ (BESCOM) ತಿಳಿಸಿದೆ. ಜುಲೈ ತಿಂಗಳಲ್ಲಿ ಗ್ರಾಹಕರಿಗೆ ಭೌತಿಕ ಬಿಲ್ ನೀಡದೆ, ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧಾರದ ಮೇಲೆ ಸರಾಸರಿ ಬಿಲ್ ನೀಡಲಾಗಿದ್ದು, ಬಿಲ್ ಮೊತ್ತವನ್ನು ಎಸ್ಎಂಎಸ್ ಹಾಗೂ ಇಮೇಲ್ ಮೂಲಕ ಗ್ರಾಹಕರಿಗೆ ಕಳುಹಿಸಲಾಗಿದೆ.

ಆದರೆ ಎಚ್‌ಟಿ ಗ್ರಾಹಕರು, 40 HP ಮತ್ತು ಅದಕ್ಕಿಂತ ಹೆಚ್ಚಿನ ಮಂಜೂರಾದ ಲೋಡ್ ಹೊಂದಿರುವ ಲೋ ಟೆನ್ಷನ್ (LT) ಗ್ರಾಹಕರು, ಸೋಲಾರ್ ರೂಫ್ಟಾಪ್ (SRTPV) ಗ್ರಾಹಕರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಗಮನಿಸಿ; ನಾಳೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಬೆಂಗಳೂರು: 66/11 ಕೆವಿ ಕಟ್ಟಿಗೇನಹಳ್ಳಿ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದ ಹಲವೆಡೆ ಜುಲೈ 29ರಂದು ಬುಧವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಉತ್ತರ ಗೇಟ್ 1, 2,3, ರಾಯಭಾರ ಕಚೇರಿ, ಫಿಲಿಪ್ಸ್ ಕಂಪನಿ, ದ್ವಾರಕಾನಗರ, ಬಾಬಾನಗರ, ಕಟ್ಟಿಗೇನಹಳ್ಳಿ ಸುತ್ತಮುತ್ತಲು, ಬಾಗಲೂರು ಕ್ರಾಸ್, ಮತ್ತು ಬಾಗಲೂರು ಮುಖ್ಯ ರಸ್ತೆ, ಮಣಿಪಾಲ ಕಾಲೇಜು, BSF, PDMS, ಬಾಗಲೂರು ಕ್ರಾಸ್ ವಿನಾಯಕನಗರ, ಸುತ್ತಮುತ್ತಲಿನ ಪ್ರದೇಶ.

ಈ ಪ್ರದೇಶಗಳಲ್ಲೂ ನಾಳೆ ವಿದ್ಯುತ್ ವ್ಯತ್ಯಯ

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11 ಕೆ.ವಿ. ನಿಮ್ಯಾನ್ಸ್ ಮತ್ತು ಜಯದೇವ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜುಲೈ 29ರಂದು ಬುಧವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿಗರಿಗೆ ಸಿಹಿ ಸುದ್ದಿ: ‘ಆಕಾಶ ಏರ್' ನಿಂದ ಉದಯಪುರ ಬಳಿಕ ಪಿಂಕ್ ಸಿಟಿ ಜೈಪುರಕ್ಕೂ ನೇರ ವಿಮಾನ, ಟಿಕೆಟ್ ಬುಕ್ಕಿಂಗ್ ಆರಂಭ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಎಸ್-1 ನಿಮ್ಯಾನ್ಸ್, ಕಿಡ್ವಾಯ್, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಇಂಧಿರಾ ಗಾಂಧಿ ಆಸ್ಪತ್ರೆ, ಜಯನಗರ 1, 2, 3, 4, 9ನೇ ಟಿ ಬ್ಲಾಕ್, ಸೋಮೇಶ್ವರ ನಗರ, ವಿಲ್ಸನ್ ಗಾರ್ಡನ್ ಬನ್ನೇರುಘಟ್ಟ ರಸ್ತೆ, ಆರ್.ವಿ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳು, ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ಎನ್.ಎಸ್ ಪಾಳ್ಯ ಇಂಡಸ್ಟಿರಿಯಲ್ ಏರಿಯಾ, ಜಾಹ್ನವಿ ಎನ್‌ಕ್ಲೇವ್‌, ಅನಂತ ಲೇಔಟ್, ಬಿಳೆಕಳ್ಳಿ ಮೇನ್ ರೋಡ್, ಜಯನಗರ 4, 9ನೇ ಟಿ ಬ್ಲಾಕ್, ಜಯನಗರ ಈಸ್ಟ ಯಂಡ್, ಎಬಿಸಿಡಿ ರಸ್ತೆ, ಬಿಎಚ್ಇಎಲ್ ಲೇಔಟ್, ಎಸ್‌ಆರ್‌ಕೆ ಗಾರ್ಡನ್, ಎನ್ಎಲ್ ಲೇಔಟ್, ತಿಲಕ್ ನಗರ, ಶಾಂತಿ ಪಾಕ , ಜಯದೇವ ಆಸ್ಪತ್ರೆ, ರಂಕ ಕಾಲೋನಿ, ಸುತ್ತಮುತ್ತಲ ಪ್ರದೇಶಗಳು, ಎನ್‌ಎಸ್, ಪಾಳ್ಯ ಮೇನ್ ರೋಡ್, ಜಿಆರ್‌ಬಿ ಮೇನ್ ರೋಡ್, ಬಿಸ್ಮಿಲ್ಲಾ ನಗರ, ಶೋಭ ಅಪಾರ್ಟ್‌ಮೆಂಟ್, ದಿವ್ಯಶ್ರೀ ಟನರಸ್, ವೆಗಾಸಿಟಿ ಮಾಲ್, ರ‍್ಟೆಲ್ ಅಫೀಸ್, ಬನ್ನೇರುಗಟ್ಟ ಮೇನ್ ರಸ್ತೆ, ಕೆ.ಇ.ಬಿ ಕಾಲೋನಿ, ಗುರಪ್ಪನ ಪಾಳ್ಯ, ಬಿಟಿಎಂ ಮೊದಲನೇ ಹಂತ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.