ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಯತ್ನ

Green Line: ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ನಿನ್ನೆ ರಾತ್ರಿ 10.04ರ ಸುಮಾರಿಗೆ ಈ ಘಟನೆ ನಡೆದಿದೆ. ಹಸಿರು ಮಾರ್ಗದ ಮೆಟ್ರೊ ಲೈನ್ ಫ್ಲಾಟ್ ಫಾರ್ಮ್ 1ರಲ್ಲಿ 35 ವರ್ಷದ ವ್ಯಕ್ತಿ ಟ್ರೈನ್ ಬರುವ ವೇಳೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕಾರಣ ಗಂಭೀರ ಗಾಯಗಳಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಯತ್ನ

ಹರೀಶ್‌ ಕೇರ ಹರೀಶ್‌ ಕೇರ Aug 12, 2025 9:46 AM

ಬೆಂಗಳೂರು: ಮೆಜೆಸ್ಟಿಕ್ ನಮ್ಮ ಮೆಟ್ರೋ (Namma Metro) ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಟ್ರೈನ್​ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಟ್ರ್ಯಾಕಿಗೆ ಜಿಗಿದಿದ್ದಾನೆ. ಆತ್ಮಹತ್ಯೆಗೆ (Self Harming) ಯತ್ನಿಸಿದವ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ನಿನ್ನೆ ರಾತ್ರಿ 10.04ರ ಸುಮಾರಿಗೆ ಈ ಘಟನೆ ನಡೆದಿದೆ. ಹಸಿರು ಮಾರ್ಗದ ಮೆಟ್ರೊ ಲೈನ್ ಫ್ಲಾಟ್ ಫಾರ್ಮ್ 1ರಲ್ಲಿ 35 ವರ್ಷದ ವ್ಯಕ್ತಿ ಮೆಟ್ರೊ ಟ್ರ್ಯಾಕಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ. ಟ್ರೈನ್ ಬರುವ ವೇಳೆ ವ್ಯಕ್ತಿಯು ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕಾರಣ ಗಂಭೀರ ಗಾಯಗಳಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೆಟ್ರೋದಲ್ಲಿ ಬಿಗಿ ಸೆಕ್ಯೂರಿಟಿ ಇದ್ದರೂ ಇಂತಹ ಘಟನೆಗಳು ಸಂಭವಿಸುತ್ತಲೇ ಇದೆ. ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಗಳು ಈ ಹಿಂದಿಯೂ ದಾಖಲಾಗಿದೆ. ಹೀಗಾಗಿ ಬಿಎಂಆರ್​ಸಿಎಲ್​ ಮತ್ತಷ್ಟು ಭದ್ರತೆ ಹೆಚ್ಚಿಸಿದೆ.

ಸಂರಕ್ಷಿತಾರಣ್ಯ ಅಕ್ರಮ ಪ್ರವೇಶ, ನಟ ಚೇತನ್‌ ಅಹಿಂಸಾ ಮೇಲೆ ಪ್ರಕರಣ ದಾಖಲು

ಮಡಿಕೇರಿ: ನಾಗರಹೊಳೆ ರಕ್ಷಿತಾರಣ್ಯ (Nagarahole forest) ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪದಡಿ ನಟ ಚೇತನ್ ಅಹಿಂಸಾ (Actor Chetan Ahimsa) ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿಗೆ ಒಳಪಡುವ ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯಲ್ಲಿ ಆ.8 ರಂದು ಅರಣ್ಯ ಹಕ್ಕು ಕಾಯ್ದೆಯಡಿ ವೈಯಕ್ತಿಕ ಹಕ್ಕು ಮತ್ತು ಸಮುದಾಯದ ಹಕ್ಕಿಗಾಗಿ ಒತ್ತಾಯಿಸಿ ಪ್ರತಿಭಟನೆಗೆ ಬೆಂಬಲ ನೀಡಿದ ನಟ ಚೇತನ್ ಅಹಿಂಸಾ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂರಕ್ಷಿತಾರಣ್ಯ ಪ್ರದೇಶದೊಳಗೆ ಅರಣ್ಯ ಇಲಾಖೆ ಅನುಮತಿಯಿಲ್ಲದೆ ಪ್ರವೇಶಿಸುವುದು, ಚಟುವಟಿಕೆಗಳನ್ನು ನಡೆಸುವುದು ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯಿದೆಯಡಿ ಅಪರಾಧವಾಗಿದೆ. ಈ ಕುರಿತು ಚೇತನ್ ಅಹಿಂಸಾ, ನ್ಯಾಷನಲ್ ಆದಿವಾಸಿ ಸಂಘಟನೆ ಮುಖ್ಯಸ್ಥ ರಾಯ್ ಡೇವಿಡ್, ರಾಜಾರಾಮ್, ಪತ್ರಕರ್ತೆ ನಿಕಿತಾ ಜೈನ್, ಸರ್ತ ಜಾಲಿ ವಿರುದ್ಧ ನಾಗರಹೊಳೆ ಅರಣ್ಯಕ್ಕೆ ಅಕ್ರಮ ಪ್ರವೇಶ ಆರೋಪದಡಿ ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಸಂರಕ್ಷಣಾಧಿಕಾರಿ ಜೆ.ಅನನ್ಯಕುಮಾರ್ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Namma Metro Yellow Line: ಇಂದಿನಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ, ಟಿಕೆಟ್‌ ದರಗಳು ಹೀಗಿವೆ