ಕ್ಯಾಬ್‍ನಲ್ಲಿದ್ದ ಅಪರೂಪದ ಸಹಪ್ರಯಾಣಿಕನನ್ನು ಕಂಡು ಅಚ್ಚರಿಗೊಂಡ ಯುವಕ; ಸೆಲ್ಫಿ ವೈರಲ್
Selfie photo goes viral: ಬೆಂಗಳೂರಿನಲ್ಲಿ ಶೇರ್ಡ್ ಕ್ಯಾಬ್ ಬುಕ್ ಮಾಡಿದ ಯುವಕನೊಬ್ಬ ಕಾರಿನೊಳಗಿದ್ದ ಸಹಪ್ರಯಾಣಿಕನನ್ನು ನೋಡಿ ಅಚ್ಚರಿಗೊಂಡಿದ್ದಾನೆ. ಕೂಡಲೇ ಸೆಲ್ಫಿ ತೆಗೆದ ಆತ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಅಷ್ಟಕ್ಕೂ ಆ ಸಹಪ್ರಯಾಣಿಕ ಯಾರು ಗೊತ್ತಾ? ಇಲ್ಲಿದೆ ಸ್ಟೋರಿ...

-

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಟ್ರಾಫಿಕ್‌ನಲ್ಲಿ ಪ್ರಯಾಣಿಸುವುದೆಂದರೆ ಅದಕ್ಕಿಂತ ದೊಡ್ಡ ತಲೆನೋವು ಬೇರೊಂದಿಲ್ಲ. ಕೆಲವರು ಟ್ರಾಫಿಕ್‍ನಲ್ಲೇ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಾ ಸಾಗುತ್ತಿರುವ ದೃಶ್ಯದ ಫೋಟೊ, ವಿಡಿಯೊಗಳು ವೈರಲ್ (Viral Photo) ಆಗಿವೆ. ಇದೀಗ ಕ್ಯಾಬ್‍ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಸಹಪ್ರಯಾಣಿಕನನ್ನು ನೋಡಿ ಅಚ್ಚರಿಗೊಂಡಿದ್ದಾನೆ. ಆ ಸಹಪ್ರಯಾಣಿಕ ಬೇರೆ ಯಾರೂ ಅಲ್ಲ, ಅದು ಮೇಕೆ.
ಹೌದು, ಪ್ರಯಾಣಿಕನೊಬ್ಬ ಕ್ಯಾಬ್‍ನಲ್ಲಿ ಪ್ರಯಾಣಿಸುವಾಗ ಕಾರಿನಲ್ಲಿ ಮೇಕೆಯನ್ನು ನೋಡಿ ಅಚ್ಚರಿಗೊಂಡಿದ್ದಾನೆ. ಕೂಡಲೇ ಈ ದೃಶ್ಯವನ್ನು ಸೆಲ್ಫಿ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಇದು ಇಂಟರ್‌ನೆಟ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿ ವೈರಲ್ ಆಗಿದೆ. ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.
ಶೇರ್ ಕ್ಯಾಬ್ ಬುಕ್ ಮಾಡಿದ್ದ ಪ್ರಯಾಣಿಕನೊಬ್ಬ ಎಕ್ಸ್‌ನಲ್ಲಿ ಸೆಲ್ಫಿಯನ್ನು ಪೋಸ್ಟ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಫೋಟೊದಲ್ಲಿ ಆ ವ್ಯಕ್ತಿ ತನ್ನ ಸೀಟಿನಲ್ಲಿ ಕುಳಿತು ನಗುತ್ತಿರುವುದನ್ನು ಕಾಣಬಹುದು. ಅವನ ಹಿಂದೆ ಕಪ್ಪು ಮೇಕೆ ಕುಳಿತಿದೆ. ಈ ಫೋಟೊ ತ್ವರಿತವಾಗಿ ವೈರಲ್ ಆಗಿದ್ದು, ಸುಮಾರು ಅರ್ಧ ಮಿಲಿಯನ್ ವೀಕ್ಷಣೆಗಳು, ಸಾವಿರಾರು ಶೇರ್‌ಗಳು, ಲೈಕ್‌ಗಳು ಮತ್ತು ಮೀಮ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿ ತುಳುಕಿವೆ.
ಇದನ್ನೂ ಓದಿ: Viral Video: ಸಿಸೇರಿಯನ್ ಆದ ಕೇವಲ 15 ದಿನಗಳಲ್ಲಿ ಬಾಣಂತಿಯ ಸ್ಕೂಟರ್ ಸವಾರಿ; ಇದು ಧೈರ್ಯವಲ್ಲ, ಮೂರ್ಖತನ ಎಂದ ನೆಟ್ಟಿಗರು
ಆ ಮೇಕೆ ವಾಹನದೊಳಗೆ ಇದೆ ಎಂದು ಅವನಿಗೆ ತಕ್ಷಣ ಅರ್ಥವಾಗಲಿಲ್ಲ. ಅವನು ಕ್ಯಾಬ್‌ನಲ್ಲಿ ಕುಳಿತಾಗ, ಮೇಕೆ ಹಿಂಭಾಗದಲ್ಲಿ ಆರಾಮವಾಗಿ ಕುಳಿತಿರುವುದನ್ನು ಗಮನಿಸಿದನು. ಭಯಪಡುವ ಬದಲು ಖುಷಿಪಟ್ಟ ಅವನು ಆ ಕ್ಷಣವನ್ನು ಸೆಲ್ಫಿಯೊಂದಿಗೆ ಸೆರೆಹಿಡಿಯಲು ನಿರ್ಧರಿಸಿದನು. ಎಕ್ಸ್‌ನಲ್ಲಿ ಪೋಸ್ಟ್ ಮಾಡುತ್ತಾ ಹೀಗೆ ಬರೆದಿದ್ದಾನೆ- ನಾನು ಇಂದು ಶೇರ್ಡ್ ಕ್ಯಾಬ್‌ಗೆ ಹತ್ತಿದೆ. ನಂತರ ನನ್ನ ಹಿಂದೆ ಒಂದು ಮೇಕೆ ಇರುವುದನ್ನು ಅರಿತುಕೊಂಡೆ ಎಂದಿದ್ದಾರೆ. ಇದಲ್ಲದೆ, ಅವರು ಹೀಗೆ ಬರೆದಿದ್ದಾರೆ, ಒಂಥರಾ ಚರ್ಮದ ರೀತಿಯ ವಾಸನೆ ಬರುತ್ತಿತ್ತು. ಆದರೆ ಅದು ಕಾರಿನ ಲೆದರ್ ಸೀಟ್‌ದು ಇದ್ದಿರಬಹುದು ಎಂದು ನಾನು ಭಾವಿಸಿದೆ. ಆದರೆ ನೋಡಿದಾಗ ಮೇಕೆ ಇತ್ತು.
ಕ್ಯಾಬ್ ಚಾಲಕ ಮತ್ತು ಮೇಕೆಯ ಮಾಲೀಕರ ಬಗ್ಗೆ ವಿವರಗಳು ಸ್ಪಷ್ಟವಾಗಿಲ್ಲ. ಭಾರತದ ಸ್ಟಾರ್ಟ್‌ಅಪ್ ಕೇಂದ್ರವೆಂದು ಕರೆಯಲ್ಪಡುವ ಬೆಂಗಳೂರು ಆಗಾಗ ತನ್ನ ವಿಚಿತ್ರ ಘಟನೆಗಳಿಂದ ಸದ್ದು ಮಾಡುತ್ತಿದೆ.