ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: ಮೊದಲನೇ ಟೆಸ್ಟ್‌ ಗೆದ್ದರೂ ಒಂದು ವಿಚಾರದ ಬಗ್ಗೆ ಶುಭಮನ್ ಗಿಲ್ ಬೇಸರ!

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದ ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಶುಭಮನ್ ಗಿಲ್ ತವರು ಟೆಸ್ಟ್‌ ಪಂದ್ಯಗಳಲ್ಲಿ ಭಾರತದ ವಿಶ್ವ ದರ್ಜೆಯ ಸ್ಪಿನ್ ಆಯ್ಕೆಗಳನ್ನು ನಿರ್ವಹಿಸುವುದು ಸಂತೋಷದ ತಲೆನೋವಾಗಿದೆ ಎಂದು ಹೇಳಿದ್ದಾರೆ.

ಮೊದಲನೇ ಟೆಸ್ಟ್‌ ಗೆದ್ದರೂ ಬೇಸರ ವ್ಯಕ್ತಪಡಿಸಿದ ಶುಭಮನ್‌ ಗಿಲ್‌!

ಮೊದಲನೇ ಟೆಸ್ಟ್‌ ಗೆದ್ದರೂ ಸ್ಪಿನ್ನರ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಶುಭಮನ್‌ ಗಿಲ್‌. -

Profile Ramesh Kote Oct 4, 2025 8:50 PM

ಕೆ.ಎನ್.ರಂಗು, ಚಿತ್ರದುರ್ಗ

ಅಹಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯ (IND vs WI 1st Highlights) ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 4 ರಂದು ಅಂತ್ಯವಾಯಿತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿದ ಟೀಮ್ ಇಂಡಿಯಾ (India), ಇನ್ನೂ ಎರಡೂವರೆ ದಿನಗಳ ಅವಧಿ ಬಾಕಿ ಇರುವಾಗಲೇ ಇನಿಂಗ್ಸ್‌ ಹಾಗೂ 140 ರನ್‌ಗಳ ಅಂತರದಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿತು. ಆ ಮೂಲಕ ಸರಣಿಯನ್ನು 1-0 ಮುನ್ನಡೆ ಸಾಧಿಸಿದೆ. ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ತವರು ಟೆಸ್ಟ್‌ ಪಂದ್ಯಗಳಲ್ಲಿ ಭಾರತದ ವಿಶ್ವ ದರ್ಜೆಯ ಸ್ಪಿನ್ ಆಯ್ಕೆಗಳನ್ನು ನಿರ್ವಹಿಸುವುದು ಸಂತೋಷದ ತಲೆನೋವು ಎಂದಿದ್ದಾರೆ.

ಪಂದ್ಯದ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶುಭಮನ್‌ ಗಿಲ್‌, ರವೀಂದ್ರ ಜಡೇಜಾ, ಕುಲ್‌ದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಡೇಜಾ ದ್ವಿತೀಯ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳ ಸಾಧನೆ ಮಾಡಿದರು. ತಂಡಕ್ಕೆ ಅಗತ್ಯವಿದ್ದಾಗ ಮುಂದೆ ಬಂದು ನೆರವು ನೀಡುವ ಆಟಗಾರರ ತಂಡದ ಭಾಗವಾಗಿರುವುದು ಅದೃಷ್ಟ ಎಂದು ಗಿಲ್ ಹೇಳಿದ್ದಾರೆ.

IND vs WI: ವಿಂಡೀಸ್‌ ಬ್ಯಾಟಿಂಗ್‌ ವೈಫಲ್ಯ, ಇನಿಂಗ್ಸ್‌ ಅಂತರದಲ್ಲಿ ಮೊದಲನೇ ಟೆಸ್ಟ್‌ ಗೆದ್ದ ಭಾರತ!

ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಗಿಲ್, "ಇಂತಹ ಉತ್ತಮ ಗುಣಮಟ್ಟದ ಸ್ಪಿನ್ನರ್‌ಗಳು ಸಿಕ್ಕಾಗ ಅವರನ್ನು ರೊಟೇಟ್‌ಮಾಡುವುದು ಕಷ್ಟ, ಆದರೆ ತುಂಬಾ ಕಡಿಮೆ ಆಯ್ಕೆಗಳಿಗಿಂತ ಹೆಚ್ಚು ಆಯ್ಕೆಗಳು ಇರುವುದು ಉತ್ತಮ. ಭಾರತದಲ್ಲಿ ಆಡುವಾಗ ಸವಾಲು ಮತ್ತು ಮೋಜು ಇರುತ್ತದೆ. ಒಳ್ಳೆಯ ವಿಷಯವೆಂದರೆ ವ್ಯತ್ಯಾಸವನ್ನುಂಟು ಮಾಡಲು ಯಾವಾಗಲೂ ಯಾರಾದರೂ ಸಿದ್ಧರಿರುತ್ತಾರೆ," ಎಂದು ತಿಳಿಸಿದ್ದಾರೆ.



"ಎರಡು ವರ್ಷಗಳ ಅವಧಿಯಲ್ಲಿ ನಾವು ಒಂದು ತಂಡವಾಗಿ ಹೇಗೆ ಬೆಸೆದಿದ್ದೇವೆ ಮತ್ತು ಕಠಿಣ ಪರಿಸ್ಥಿತಿಗಳಿಂದ ಹೇಗೆ ಹೊರಬಂದಿದ್ದೇವೆ ಎಂಬುದನ್ನು ನೋಡಲು ನನಗೆ ನಿಜವಾಗಿಯೂ ಸಂತೋಷವಾಯಿತು. ನಮ್ಮದು ಇನ್ನೂ ಕಲಿಯುವ ತಂಡವಾಗಿದೆ ಹಾಗೂ ಒಂದು ಸಕಾರಾತ್ಮಕ ತಂಡವಾಗಿ ಸಾಧ್ಯವಾದಷ್ಟು ದೀರ್ಘಾವಧಿ ನಾವು ಕಲಿಯುತ್ತಲೇ ಇರುತ್ತೇವೆ," ಎಂದು ಹೇಳಿದ್ದಾರೆ.

ʻಫ್ಲೈಯಿಂಗ್‌ ರೆಡ್ಡಿʼ: ಚಿರತೆಯಂತೆ ಹಾರಿ ಸ್ಟನ್ನಿಂಗ್‌ ಕ್ಯಾಚ್‌ ಪಡೆದ ನಿತೀಶ್‌ ರೆಡ್ಡಿ! ವಿಡಿಯೊ ನೋಡಿ

ಗಿಲ್ ಟೆಸ್ಟ್ ಕ್ರಿಕೆಟ್ ನಾಯಕನಾಗಿ ಸತತ ಆರು ಟಾಸ್‌ಗಳನ್ನು ಸೋತಿದ್ದಾರೆ. ಆದಾಗ್ಯೂ, ಭಾರತ ಪಂದ್ಯಗಳನ್ನು ಗೆಲ್ಲುತ್ತಲೇ ಇರುವವರೆಗೆ, ಟಾಸ್‌ನಲ್ಲಿನ ಸೋಲು ಥವಾ ಗೆಲುವು ಮುಖ್ಯವಲ್ಲ ಎಂಬುದನ್ನು ಗಿಲ್‌ ಹೇಳಿದ್ದಾರೆ. ಶತಕ ಬಾರಿಸಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕೆ ಎಲ್ ರಾಹುಲ್, ಧ್ರುವ್ ಜುರೆಲ್ ಮತ್ತು ರವೀಂದ್ರ ಜಡೇಜಾ ಅವರನ್ನು ಇದೇ ವೇಳೆ ಗಿಲ್‌ ಶ್ಲಾಘಿಸಿದರು.

"ಸತತ ಆರು ಟಾಸ್‌ ಸೋಲುಗಳು, ಆದರೆ ನಾವು ಪಂದ್ಯಗಳನ್ನು ಗೆಲ್ಲುತ್ತಲೇ ಇರುವಾಗ ಟಾಸ್‌ ನಮಗೆ ಮುಖ್ಯವಾಗುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ನಮಗೆ ಪರಿಪೂರ್ಣ ಪಂದ್ಯ ಎಂದು ನಾನು ಭಾವಿಸುತ್ತೇನೆ. ಮೂರು ಶತಕಗಳು ಮತ್ತು ನಾವು ನಿಜವಾಗಿಯೂ ಉತ್ತಮವಾಗಿ ಫೀಲ್ಡಿಂಗ್ ಮಾಡಿದ್ದೇವೆ ಆದ್ದರಿಂದ ಯಾವುದೇ ದೂರುಗಳಿಲ್ಲ," ಎಂದಿದ್ದಾರೆ.



"ನೀವು ಆರಂಭ ಪಡೆದಾಗಲೆಲ್ಲಾ, ಅದು ಬ್ಯಾಟಿಂಗ್ ಮಾಡಲು ಉತ್ತಮ ವಿಕೆಟ್ ಎಂದು ನಾನು ಭಾವಿಸುತ್ತೇನೆ ಮತ್ತು ನಾವಿಬ್ಬರೂ ಆರಂಭವನ್ನು ಪಡೆದುಕೊಂಡೆವು ಆದರೆ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ, ಆದರೆ ಶತಕಗಳ ಸಾಧನೆಗಾಗಿ ನಾವು ಸಂತೋಷಪಡುತ್ತೇವೆಮ" ಎಂದು ಗಿಲ್ ಹೇಳಿದ್ದಾರೆ.

ಅಕ್ಟೋಬರ್ 10 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಣ ಎರಡನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನು ಗೆದ್ದು ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳಲು ಟೀಮ್‌ ಇಂಡಿಯಾ ಎದುರು ನೋಡುತ್ತಿದೆ.