ಭಾರತದ ಮೆನ್ ಆಫ್ ಪ್ಲಾಟಿನಂ ಬ್ರಾಂಡ್ ಪ್ಲಾಟಿನಂ ಗಿಲ್ಡ್ ಇಂಟರ್ನ್ಯಾಷನಲ್ (ಪಿಜಿಐ) ಈ ಹಬ್ಬದ ಋತುವಿಗೆ ಎಂ.ಎಸ್.ಧೋನಿ ಸಿಗ್ನೇಚರ್ ಎಡಿಷನ್ ನೊಂದಿಗೆ ಹಿಂದಿರುಗಿದೆ. ಈ ಶ್ರೇಣಿಯ ಆಭರಣವು ಆಧುನಿಕ ಐಕಾನ್ ನ ದೀರ್ಘಬಾಳಿಕೆಯ ಪರಂಪರೆಯನ್ನು ಹೇಳುತ್ತದೆ.
ಶೇ.95ರಷ್ಟು ಶುದ್ಧ ಪ್ಲಾಟಿನಂನಲ್ಲಿ ರೂಪಿಸಲಾದ ಅಮೂಲ್ಯ ಆಭರಣದಲ್ಲಿ ಶುದ್ಧತೆಯ ಉನ್ನತ ಮಾನದಂಡ ಗಳಲ್ಲಿ ಒಂದಾದ ಪ್ಲಾಟಿನಂ ನೈಸರ್ಗಿಕವಾಗಿ ಬಿಳಿಯಾಗಿದ್ದು ಇದು ಎಂದಿಗೂ ಕಳೆಗುಂದುವುದಿಲ್ಲ. ಪ್ರತಿಯೊಂದು ಆಭರಣವನ್ನೂ ಅದು ಪ್ರತಿನಿಧಿಸುವ ಮೌಲ್ಯಗಳಾದ ಸದೃಢತೆ, ಅಪರೂಪತೆ ಮತ್ತು ಸಮಯರಾಹಿತ್ಯದ ಮೌಲ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸ ಲಾಗಿದ್ದು ಪ್ಲಾಟಿನಂ ಎಂ.ಎಸ್. ಧೋನಿ ಅವರ ವೃತ್ತಿಯನ್ನು ವ್ಯಾಖ್ಯಾನಿಸುವ ಸದೃಢತೆ, ಸಮತೋಲನ ಮತ್ತು ವಿಶ್ವಾಸವನ್ನು ಬಿಂಬಿಸುತ್ತದೆ.
ಇದನ್ನೂ ಓದಿ: Dhoni-Messi: ಮೆಸ್ಸಿ ಜತೆ ಫುಟ್‌ಬಾಲ್ ಆಡಿದ ಧೋನಿ
ಈ ಸಂಗ್ರಹದ ಹೊಚ್ಚಹೊಸ ಸೇರ್ಪಡೆಗಳು ಧೋನಿಯ ಪ್ರಯಾಣದಿಂದ ಮತ್ತು ವಿಶಿಷ್ಟ ಸ್ಟೈಲ್ ನ ಭಾವನೆಯಿಂದ ಸ್ಫೂರ್ತಿ ಪಡೆಯುತ್ತದೆ. ಮೆನ್ ಆಫ್ ಪ್ಲಾಟಿನಂ ಮತ್ತೊಂದು ವಿಶಿಷ್ಟತೆಯ ಪದರವನ್ನು ಸೇರ್ಪಡೆ ಮಾಡುತ್ತದೆ. ಈ ಸಂಗ್ರಹದ ಪ್ರತಿ ಖರೀದಿಯಲ್ಲೂ ಗ್ರಾಹಕರಿಗೆ ಎಂ.ಎಸ್. ಧೋನಿ ಅವರನ್ನು ಭೇಟಿ ಮಾಡುವ ವಿಶೇಷ ಅವಕಾಶ ದೊರೆಯುತ್ತಿದ್ದು ಈ ಕಾರ್ಯಕ್ರಮ 2026ರ ಪ್ರಾರಂಭದಲ್ಲಿ ಮುಂಬೈನಲ್ಲಿ ನಡೆಯುತ್ತದೆ. ಈ ಸಕ್ರಿಯತೆಯು ಸೆಪ್ಟೆಂಬರ್ 18ರಿಂದ ನವೆಂಬರ್ 16, 2025ರವರೆಗೆ ಆಯ್ದ ರೀಟೇಲ್ ಮಳಿಗೆಗಳಲ್ಲಿ ನಡೆಯಲಿದ್ದು ಪ್ರಶಂಸೆಯನ್ನು ವೈಯಕ್ತಿಕ ಕ್ಷಣವಾಗಿಸುವ ಅವಕಾಶ ನೀಡುತ್ತದೆ.
ಎಂ.ಎಸ್. ಧೋನಿ ಸಿಗ್ನೇಚರ್ ಆವೃತ್ತಿಯಿಂದ ನಿಜಕ್ಕೂ ಅಪರೂಪ ಮತ್ತು ಅಮೂಲ್ಯ ಆಭರಣ ಗಳನ್ನು ಆಯ್ಕೆ ಮಾಡಿ.